ಹೈಕಮಾಂಡ್ ಮನವೊಲಿಕೆಗೆ ಬಗ್ಗದ ಈಶ್ವರಪ್ಪ ; ಕೇಂದ್ರ ನಾಯಕರನ್ನು ಮನೆಯಲ್ಲೇ ಬಿಟ್ಟು ಹೊರನಡೆದರು ! 

17-03-24 06:03 pm       HK News Desk   ಕರ್ನಾಟಕ

ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಸಿಟ್ಟು ಶಮನಕ್ಕೆ ಬಿಜೆಪಿ ಹೈಕಮಾಂಡ್​ ನಾಯಕರು ಮುಂದಾಗಿದ್ದು ಆದರೆ ಮಾತುಕತೆ ವಿಫಲವಾಗಿದೆ. ಮಾರ್ಚ್​ 18ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್​ ಈಶ್ವರಪ್ಪ ಅವರನ್ನು ಆಹ್ವಾನಿಸಿ, ಸಿಟ್ಟು ಶಮನಗೊಳಿಸಲು ಕೇಂದ್ರ ನಾಯಕರು ಆಗಮಿಸಿದ್ದರು. ಆದರೆ ಈಶ್ವರಪ್ಪ ಕೇಂದ್ರ ನಾಯಕರನ್ನು ಮನೆಯಲ್ಲೇ ಬಿಟ್ಟು ಹೊರನಡೆದಿದ್ದಾರೆ. 

ಶಿವಮೊಗ್ಗ, ಮಾ.17: ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಸಿಟ್ಟು ಶಮನಕ್ಕೆ ಬಿಜೆಪಿ ಹೈಕಮಾಂಡ್​ ನಾಯಕರು ಮುಂದಾಗಿದ್ದು ಆದರೆ ಮಾತುಕತೆ ವಿಫಲವಾಗಿದೆ. ಮಾರ್ಚ್​ 18ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್​ ಈಶ್ವರಪ್ಪ ಅವರನ್ನು ಆಹ್ವಾನಿಸಿ, ಸಿಟ್ಟು ಶಮನಗೊಳಿಸಲು ಕೇಂದ್ರ ನಾಯಕರು ಆಗಮಿಸಿದ್ದರು. ಆದರೆ ಈಶ್ವರಪ್ಪ ಕೇಂದ್ರ ನಾಯಕರನ್ನು ಮನೆಯಲ್ಲೇ ಬಿಟ್ಟು ಹೊರನಡೆದಿದ್ದಾರೆ. 

ಬಂಡಾಯ ಶಮನ ಮತ್ತು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹೇಳಲು ಇಂದು ಬೆಳಗ್ಗೆ ಕೆ.ಎಸ್​ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್​ ಅಗರ್ವಾಲ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್​ ಸದಸ್ಯ ಡಿ.ಎಸ್.ಅರುಣ್​ ಆಗಮಿಸಿದ್ದರು. 

ಆದರೆ ಕೆಎಸ್​ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ನಗರದ ಗೋಪಾಳದಲ್ಲಿ ಆಯೋಜಿಸಿದ್ದ ದೇವಸ್ಥಾನ ಮತ್ತು ಹೋಮದಲ್ಲಿ ಭಾಗಿಯಾಗಿದ್ದ ಕೆಎಸ್​ ಈಶ್ವರಪ್ಪ ಅರ್ಧ ಗಂಟೆ ಕಳೆದರೂ, ಮನೆಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್​.ಈಶ್ವರಪ್ಪ ಅವರನ್ನು ಕಾದು ಮನೆಯಿಂದ ತೆರಳಿದರು. 

ಇದಕ್ಕೂ ಮುನ್ನ ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿದ್ದರು. ಈಶ್ವರಪ್ಪ ಜೊತೆ ಒಂದು ಗಂಟೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದರು. ಜಿಲ್ಲೆಗೆ ಮೋದಿ ಆಗಮಿಸುತ್ತಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ಆದರೆ, ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಹೀಗಾಗಿ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ತೆರಳಿದ್ದರು.

Rebel K.S. The BJP high command leaders tried to pacify Eshwarappa's anger but the talks failed. KS Eshwarappa was invited to Prime Minister Narendra Modi's rally in Shivamogga on March 18. However, Eshwarappa has walked out of the house, leaving the central leaders at home.