ಆಜಾನ್ ಕೂಗುತ್ತಿದ್ದಾಗ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಮಾಲೀಕನ ಹೊರಗೆಳೆದು ಹಲ್ಲೆ ; ಮೂವರ ಬಂಧನ, ಎಲ್ಲ ಕಡೆ ಹನುಮಾನ್ ಚಾಲೀಸಾ ಹಾಕಲು ಸಂಸದ ತೇಜಸ್ವಿ ಕರೆ 

18-03-24 09:50 pm       Bangalore Correspondent   ಕರ್ನಾಟಕ

ಆಜಾನ್ ಕೂಗುತ್ತಿದ್ದಾಗ ಮೊಬೈಲ್ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನನ್ನು ಹೊರಗೆಳೆದು ಐವರು ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದ್ದು ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು, ಮಾ.18: ಆಜಾನ್ ಕೂಗುತ್ತಿದ್ದಾಗ ಮೊಬೈಲ್ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನನ್ನು ಹೊರಗೆಳೆದು ಐವರು ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದ್ದು ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯ ನಜರತ್‌ ಪೇಟೆಯಲ್ಲಿ ಘಟನೆ ಸಂಭವಿಸಿದ್ದು, ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾರೆ.‌ ನಜರತ್ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಮುಖೇಶ್‌ ಮೊಬೈಲ್‌ ಸರ್ವೀಸ್‌ ಅಂಗಡಿ ಹೊಂದಿದ್ದು, ಭಾನುವಾರ ಸಂಜೆ ಅಂಗಡಿಯಲ್ಲಿ ಹನುಮಾನ್‌ ಚಾಲೀಸ್‌ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಘಟನೆ ಸಂಬಂಧಿಸಿ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಶಹನವಾಜ್, ಸುಲೇಮಾನ್ ಮತ್ತು ರೋಹಿ ಬಂಧಿತರು ಎನ್ನಲಾಗಿದೆ. ಡ್ಯಾನಿಶ್ ಮತ್ತು ತರಣ ಪರಾರಿಯಾಗಿದ್ದಾರೆ. 

ಗಾಯಾಳು ಅಂಗಡಿ ಮಾಲೀಕ ಮುಕೇಶ್ ಹೇಳಿಕೆ ನೀಡಿದ್ದು, ಅವರು ನನ್ನನ್ನು ಇರಿದು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. 'ಅಂಗಡಿಯಲ್ಲಿ ಎಂದಿನಂತೆ ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕ್ತಾ ಇದ್ದೆ. ಈ ವೇಳೆ ಅಂಗಡಿಗೆ ಬಂದು, 'ನಮ್ಮ ಆಜಾನ್ ಟೈಂನಲ್ಲಿ ಯಾಕೆ ಹಾಡು ಹಾಕ್ತಾ ಇದ್ದೀಯಾ' ಎಂದು ಪ್ರಶ್ನೆ ಮಾಡಿದ್ರು. ನಂತರ ಹಲ್ಲೆಗೆ ಮುಂದಾದ್ರು, ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಮೊದಲು ಸ್ಪೀಕರ್ ತೆಗೆದು ನನ್ನ ತಲೆಗೆ ಹೊಡೆದ್ರು. ಕೈಯಲ್ಲಿ ವೆಪನ್ ಕೂಡ ಇದ್ದ ಹಾಗೆ ಇತ್ತು. ಹಾಗಾಗಿ ಇಷ್ಟು ಗಾಯ ಆಗಿದೆ ಎಂದಿದ್ದಾರೆ. 

ಚಾಕುವಿನಿಂದ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಎರಡು ತಿಂಗಳ ಹಿಂದೆ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ರೋಲ್ ಕಾಲ್ ಮಾಡೋದು ಹಣ ಕೀಳಲು ಗದರಿಸುವ ಪ್ರಯತ್ನ ಮಾಡ್ತಿದ್ರು. ಒಟ್ಟು ಆರು ಜನ‌ ಬಂದಿದ್ರು ಎಂದು ಹೇಳಿದ್ದಾರೆ. 

ನಜರತ್ ನಗರ ಪ್ರದೇಶದಲ್ಲಿ ಈ ಘಟನೆ ಇದೇ ಮೊದಲೇನಲ್ಲ. ಕಳೆದ 15 ದಿನಗಳಿಂದ ಅಂಗಡಿ ಮುಂದೆ ಬಂದು ಕಿರುಕುಳ ಕೊಡುತ್ತಿದ್ದ ಪುಂಡರು ಇಂದು ಏಕಾಏಕಿ ಕಿರಿಕ್ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರ ಬಂಧಿಸುವಂತೆ‌ ಒತ್ತಾಯಿಸಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ವರ್ತಕರು ಪ್ರತಿಭಟನೆ ನಡೆಸಿದ್ದಾರೆ. ನಾಳೆ ಸಂಜೆಯೊಳಗೆ ಹಲ್ಲೆ ಮಾಡಿದ ಪುಂಡರ ಬಂಧನವಾಗಬೇಕು. ಬಂಧಿಸದಿದ್ರೆ ಸಂಪೂರ್ಣ ‌ಚಿಕ್ಕಪೇಟೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. 

ಸ್ಥಳಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆಯಲ್ಲಿ ಎಲ್ಲ ಕಡೆಯೂ ಹನುಮಾನ್ ಚಾಲೀಸಾ ಮತ್ತು ಹನುಮ ಧ್ವಜ ಹಾಕುವಂತೆ ಕರೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಹನುಮಾನ್ ಚಲೀಸಾ ನಿಷೇಧ ಮಾಡಲಾಗಿದೆಯೇ ಸಿಎಂ ಸಿದ್ದರಾಮಯ್ಯ ನವರೇ? ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ, ಮಿತಿಮೀರಿದ ಓಲೈಕೆಯಿಂದ ಮೂಲಭೂತವಾದಿ ಮುಸ್ಲಿಮರಿಗೆ ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಮೊಂಡು ಧೈರ್ಯ ಬಂದಿದೆ ಎಂದಿದ್ದಾರೆ.

A Bengaluru shop owner Sunday alleged that he was assaulted for playing Hanuman Chalisa. The victim, Mukesh, 26, owner of Krishna Telecom, said, “I was playing Hanuman Chalisa and some locals got offended. They threatened to destroy my office if I continued to play music during Azan. I told them that it was not Azan time yet but then they dragged me out and assaulted me. All of them were locals and I have seen them in the past.”