Mandya News, Election, Money: ಮಂಡ್ಯ ; ದಾಖಲೆ ಇಲ್ಲದೆ ಕಾರ್ ನಲ್ಲಿ ಕಂತೆಗಟ್ಟಲೆ ಹಣ ಸಾಗಣೆ, 99 ಲಕ್ಷ ರೂ. ಚುನಾವಣಾಧಿಕಾರಿಗಳ ವಶಕ್ಕೆ 

19-03-24 10:27 am       HK News Desk   ಕರ್ನಾಟಕ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.20 ಲಕ್ಷ ರೂ.ಯನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯ, ಮಾ 19: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.20 ಲಕ್ಷ ರೂ.ಯನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಚೀಲದಲ್ಲಿ ತುಂಬಿದ್ದ ಕಂತೆಗಟ್ಟಲೆ ಹಣ ಪತ್ತೆಯಾಗಿದೆ.

ಸೋಮವಾರ ರಾತ್ರಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆಯ ಸಂದರ್ಭ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣಕ್ಕೆ ಸೂಕ್ತ ದಾಖಲೆ, ಉತ್ತರ ಕೊಡದ ಹಿನ್ನೆಲೆ ಜಪ್ತಿ ಮಾಡಲಾಗಿದೆ.

ಪೊಲೀಸರು 99 ಲಕ್ಷದ 20 ಸಾವಿರ ರೂ. ಹಣ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದು, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ತಹಶೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ಜಪ್ತಿ ಕಾರ್ಯಾಚರನೆ ನಡೆದಿದೆ.

ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Election officers on duty seized unaccounted cash amounting to Rs 99,20,000 from a car at a checkpost on the Bengaluru-Mysuru national highway, near Kongaboranadoddi in Maddur taluk on Monday.