New list Lok Sabha candidates Mangalore, Padmaraj Ramaiah: ರಾಜ್ಯದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ ; ಹೊಸ ಮುಖಗಳಿಗೆ ಮಣೆ, ದ.ಕ.ಕ್ಕೆ ಪದ್ಮರಾಜ್, ಉಡುಪಿಗೆ ಹೆಗ್ಡೆ, ಉ.ಕ.ಕ್ಕೆ ಅಂಜಲಿ ನಿಂಬಾಳ್ಕರ್ ಹೆಸರು, ಬೆಳಗಾವಿಗೆ ಹೆಬ್ಬಾಳ್ಕರ್ ಪುತ್ರ, ಚಿಕ್ಕೋಡಿ ಜಾರಕಿಹೊಳಿ ಪುತ್ರಿ ! 

20-03-24 10:52 am       Bangalore Correspondent   ಕರ್ನಾಟಕ

ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆ ಒಟ್ಟು 17 ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸಿದೆ.

ಬೆಂಗಳೂರು, ಮಾ.20:  ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆ ಒಟ್ಟು 17 ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸಿದೆ. ಈ ಪೈಕಿ ಬಹುತೇಕ ಹೊಸ ಮುಖಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿರುವುದು ಹೊಸ ಬೆಳವಣಿಗೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗಿದೆ. 

Billava Warriors raise the ante against BJP govt

Kundapur: Death during foreign travel - Jayaprakash Hegde helps bring back  body - Daijiworld.com

Karnataka Election | 2023ರ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಸೆಣಸುತ್ತಿರುವ ಯುವ  ರಾಜಕಾರಣಿಗಳು ಇವರು - Vistara News

Congress' Sowmya grabs Jayanagar seat from BJP

Rendezvous With Dr.Prabha Mallikarjun: Part 1 - YouTube

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಹಾಗೂ ಬಳ್ಳಾರಿಯಿಂದ ವೆಂಕಟೇಶ್‌ ಪ್ರಸಾದ್‌ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿದ್ದರೂ, ವರಿಷ್ಠರು ಅಂತಿಮಗೊಳಿಸಿಲ್ಲ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕ್ಕರ್‌ ಪುತ್ರ ಮೃಣಾಲ್‌ಗೆ ಹಾಗೂ ಚಿಕ್ಕೋಡಿಯಿಂದ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಿದ್ದಾರೆ, ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತ ಪಾಟೀಲ್‌ಗೆ ಬಾಗಲಕೋಟೆಯಿಂದ ಟಿಕೆಟ್‌ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನಗೆ ದಾವಣಗೆರೆ ಹಾಗೂ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್‌ ಅಂತಿಮಗೊಳಿಸಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಪದ್ಮರಾಜ್, ಉಡುಪಿಯಿಂದ ಜಯಪ್ರಕಾಶ್ ಹೆಗ್ಡೆ ಹೆಸರು ಅಂತಿಮಗೊಂಡಿದೆ. 

  • ಚಿತ್ರದುರ್ಗ -ಬಿ.ಎನ್‌.ಚಂದ್ರಪ್ಪ
  • ಬೆಳಗಾವಿ - ಮೃಣಾಲ್‌ ಹೆಬ್ಬಾಳಕರ್‌
  • ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ
  • ಬಾಗಲಕೋಟೆ - ಸಂಯುಕ್ತಾ ಪಾಟೀಲ್‌
  • ಧಾರವಾಡ - ವಿನೋದ್‌ ಅಸುಟಿ
  • ದಾವಣಗೆರೆ - ಪ್ರಭಾ ಮಲ್ಲಿಕಾರ್ಜುನ
  • ಕೊಪ್ಪಳ - ರಾಜಶೇಖರ ಹಿಟ್ನಾಳ್‌
  • ಕಲಬುರಗಿ - ರಾಧಾಕೃಷ್ಣ ದೊಡ್ಡಮನಿ
  • ಬೀದರ್‌ - ರಾಜಶೇಖರ್‌ ಪಾಟೀಲ್‌
  • ದಕ್ಷಿಣ ಕನ್ನಡ - ಪದ್ಮರಾಜ್‌
  • ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್‌ ಹೆಗ್ಡೆ
  • ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ
  • ಬೆಂಗಳೂರು ಸೆಂಟ್ರಲ್‌ -ಮನ್ಸೂರ್‌ ಅಲಿಖಾನ್‌
  • ಬೆಂಗಳೂರು ಉತ್ತರ -ಪ್ರೊ.ರಾಜೀವ್‌ ಗೌಡ
  • ಮೈಸೂರು -ಎಂ.ಲಕ್ಷ್ಮಣ್‌
  • ರಾಯಚೂರು -ಜಿ.ಕುಮಾರ ನಾಯಕ್‌
  • ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್‌

 

New list of 16 Lok Sabha candidates from state for congress released, Padmaraj Ramaiah for Mangalore. Udupi-Chikmagalur for Jayaprakash Hegde, Chikkodi for Priyanka Jarkiholi.