ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಗುಡ್ಡ ಕುಸಿತ - ಬಂಟ್ವಾಳದ ಅರ್ಚಕ ಸಹಿತ ಐವರಿಗಾಗಿ ಮುಂದುವರಿದ ಶೋಧ

07-08-20 08:18 am       Headline Karnataka News Network   ಕರ್ನಾಟಕ

ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯ ಭೂಕುಸಿತದ ಘಟನೆ ಆಗಿದ್ದು ಸುಮಾರು ಆರು ಕಿಮೀ ವ್ಯಾಪ್ತಿಯಲ್ಲಿ ಬೆಟ್ಟದ ಮಣ್ಣು , ಬಂಡೆ ಕಲ್ಲುಗಳು ಬೃಹತ್ ಮರಗಳ ಸಮೇತ ಕುಸಿದು ಕೊಚ್ಚೆಯಾಗಿ ಹರಿದಿದೆ. ಗುಡ್ಡ ಜರಿದು ನಾಪತ್ತೆಯಾದ ಬಂಟ್ವಾಳದ ಅರ್ಚಕ ಸಹಿತ ಐವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬಂಟ್ವಾಳ, ಆ 07: ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದ ಬಂಟ್ವಾಳದ ಅರ್ಚಕ ಸಹಿತ ಐವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ರವಿಕಿರಣ್ (23) ರಾಮಕೃಷ್ಣ ರೇಣುಕಾ ಭಟ್‌‌‌ ದಂಪತಿಯ ಪುತ್ರ ಎಂದು ಹೇಳಲಾಗುತ್ತಿದೆ. ಈ ದಂಪತಿಗಳಿಗೆ ರವಿಕಿರಣ್‌ ಹಾಗೂ ಶಶಿಕಿರಣ್‌‌‌‌‌ ಎಂಬ ಇಬ್ಬರು ಪುತ್ರರಿದ್ದು, ಈ ಪೈಕಿ ರವಿಕಿರಣ್‌‌‌‌‌‌‌‌‌ ದೊಡ್ಡ ಮಗ.

ಲಾಕ್‌‌ಡೌನ್‌ ಕಾರಣದಿಂದ ರವಿಕಿರಣ್‌ ಅವರು ಊರಿಗೆ ಬಂದಿದ್ದರು. ತಲಕಾವೇರಿಯಲ್ಲಿ ಅರ್ಚಕರು ಕರೆದ ಹಿನ್ನೆಲೆ ಇವರು ವಾಪಾಸ್ಸು ತಲಕಾವೇರಿಗೆ ತೆರಳಿದ್ದರು.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಲಕಾವೇರಿಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಅರ್ಚಕರ ಮನೆ ಸಂಪೂರ್ಣ ಜನಸಮಾಧಿಯಾಗಿದ್ದು, ಈ ಸಂದರ್ಭ ಮನೆಯೊಳಗಿದ್ದ ಎಲ್ಲರೂ ನಾಪತ್ತೆಯಾಗಿದ್ದರು. ನಾಪತ್ತೆಯಾದ ಪೈಕಿ ರವಿಕಿರಣ್‌‌ ಕೂಡಾ ಓರ್ವರು.

ರವಿಕಿರಣ್‌‌ ನಾಪತ್ತೆಯಾಗಿರುವ ವಿಚಾರವಾಗಿ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌‌‌‌‌‌‌‌‌ ಅವರು ಶಾಸಕ ಕೆ.ಜೆ.ಭೋಪಯ್ಯ ಅವರನ್ನು ಸಂಪರ್ಕಿಸಿದ ಸಂದರ್ಭ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬ್ರಹ್ಮಗಿರಿ ಬೆಟ್ಟಗಳಲ್ಲಿ ಮರುಕಳಿಸಿದ ಜಲಸ್ಫೋಟ ದುರಂತ ! 6 ಕಿಮೀ ಉದ್ದಕ್ಕೆ ಹರಿದಿದೆ ನೀರು, ಮಣ್ಣು !!