ಬ್ರೇಕಿಂಗ್ ನ್ಯೂಸ್
27-03-24 01:29 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 27: ಭ್ರಷ್ಟ ಅಧಿಕಾರಿಗಳಿಗೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದೆ. ರಾಜ್ಯದ 13 ಅಧಿಕಾರಿಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆಯಾಡಿದ್ದಾರೆ. ಬೆಂಗಳೂರು, ಬೀದರ್, ರಾಮನಗರ, ಉತ್ತರ ಕನ್ನಡ, ಉಡುಪಿ, ಕೊಡಗು, ಮೈಸೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ದಾಳಿಯಲ್ಲಿ 130ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದು, 13 ಎಸ್‌ಪಿ, 12 ಡಿವೈಎಸ್‌ಪಿ, 25 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಭಾಗವಹಿಸಿದ್ದು, ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್ ರಂಗನಾಥ್ ಎಸ್.ಪಿ., ಅಬಕಾರಿ ಇಲಾಖೆ ಉಡುಪಿ ಉಪ ಆಯುಕ್ತೆ ರೂಪಾ, ಕೊಡಗು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ. ಸೇರಿದಂತೆ 13 ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಾದ್ಯಂತ 60 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಉತ್ತರ ಕನ್ನಡದ ಕಿರಿಯ ಎಂಜಿನಿಯರ್ ಪ್ರಕಾಶ್, ಮೈಸೂರಿನ ಸಹಾಯಕ ಎಂಜಿನಿಯರ್ ಫಯಾಝ್ ಅಹಮದ್, ಬಿಡದಿ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯತೀಶ್, ಧಾರವಾಡದ ವಲಯ ಅರಣ್ಯ ಅಧಿಕಾರಿ ಮಹೇಶ್ ಚಂದ್ರಯ್ಯ ಹಿರೇಮಠ, ಬೀದರ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಸ್ವಾಮಿ, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ವಿಜಯಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸದಾಶಿವಯ್ಯ, ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ ಕೃಷ್ಣೇಗೌಡ, ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸದಾಶಿವ ಜಯಪ್ಪ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
13 ಎಸ್‌ಪಿಗಳು, 12 ಡಿವೈಎಸ್‌ಪಿಗಳು, 25 ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 130 ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಕಡಬ ತಾಲೂಕು ಪಂಚಾಯತ್ ಮೇಲೆ ದಾಳಿ ;
ಕಡಬ ತಾಲೂಕು ಪಂಚಾಯತ್ ಮೇಲೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಡಬ ತಾಲೂಕು ಪಂಚಾಯತ್ ನ ನೂತನ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರು ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯತ್ ನಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಕ್ರಮ ಅಸ್ತಿ ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರಪೇಟೆಯಲ್ಲಿ ಜಯಣ್ಣ ಅವರಿಗೆ ಸೇರಿದ ಮನೆಯ ಮೇಲೆಯೂ ದಾಳಿ ನಡೆದಿದೆ. ಜಯಣ್ಣ ಅವರು ವಾಸ್ತವ್ಯವಿದ್ದ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರದ ಬಾಡಿಗೆ ಮನೆಗೆ ಮುಂಜಾನೆ ಆಗಮಿಸಿದ ಲೋಕಾಯುಕ್ತ ಪೊಲೀಸರು ಜಯಣ್ಣ ಅವರನ್ನು ಕಡಬ ತಾಲೂಕು ಪಂಚಾಯತ್ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಅತಿ ಶ್ರೀಮಂತ ಗ್ರಾಮ ಪಂಚಾಯಿತಿ ಮೇಲೆ ದಾಳಿ:
ರಾಜ್ಯದ ಅತಿ ಶ್ರೀಮಂತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ರಾಮನಗರ ತಾಲೂಕಿನ ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಯತೀಶ್ ಚಂದ್ರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈಗಲ್ಟನ್ ರೆಸಾರ್ಟ್ನಲ್ಲಿ ಪಿಡಿಓ ಯತೀಶ್ನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಯತೀಶ್ ಚಂದ್ರ ಅವರಿಗೆ ಸೇರಿದ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದೆ.
ಪಿಡಿಒ ಯತೀಶ್ ಚಂದ್ರ ಕಳೆದೆರಡು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ. ಯತೀಶ್ ಮೈಸೂರಿನಲ್ಲಿ ಪತ್ನಿ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಮನೆಗೆ ಐದು ಕೋಟಿಗೂ ಅಧಿಕ ಖರ್ಚು ಮಾಡುತ್ತಿದ್ದಾರೆ. ಯತೀಶ್ ಮೈಸೂರಿನಲ್ಲಿ ಈಗಾಗಲೆ ಎರಡು ಮನೆ ಹೊಂದಿದ್ದಾರೆ.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚೀಫ್ ಇಂಜಿನಿಯರ್ ರಂಗನಾಥ್ ಅವರಿಗೆ ಸೇರಿದ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
The anti-corruption agency Lokayukta is conducting wide-spread raids on government officials at different locations in 13 districts across Karnataka on Wednesday morning, officials said. Over 100 Lokayukta sleuths are carrying out simultaneous raids at 60 locations across Bengaluru, Bidar, Ramanagara, Uttara Kannada districts, among others. In Bengaluru, five locations are being raided, sources said.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm