BJP Tejaswini Gowda resigned: ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್ ; ವಿಧಾನ ಪರಿಷತ್ ಸದಸ್ಯತ್ವಕ್ಕೆ ತೇಜಸ್ವಿನಿ ಗೌಡ ರಾಜಿನಾಮೆ, ಕಾಂಗ್ರೆಸ್ ಸೇರುವ ವದಂತಿ 

27-03-24 02:28 pm       Bangalore Correspondent   ಕರ್ನಾಟಕ

ಬಿಜೆಪಿ ನಾಯಕಿ, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಗೌಡ ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆಮೂಲಕ ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್ ನೀಡಿದ್ದಾರೆ. 

ಬೆಂಗಳೂರು, ಮಾ.27: ಬಿಜೆಪಿ ನಾಯಕಿ, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಗೌಡ ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆಮೂಲಕ ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್ ನೀಡಿದ್ದಾರೆ. 

ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಗೆ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹೊರಟ್ಟಿ, ಬಿಜೆಪಿಯ ತೇಜಸ್ವಿನಿ ರಮೇಶ್ ಗೌಡ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ‌ ರಾಜೀನಾಮೆ ನೀಡುತ್ತಿದ್ದೇನೆ ಎಂದು‌ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ತೇಜಸ್ವಿನಿ ರಮೇಶ್ ಅವಧಿ‌ ಇದೇ ಜೂನ್‌ ತಿಂಗಳ ವರೆಗೂ ಇತ್ತು. ಅವರೇ ಖುದ್ದು ಹಾಜರಾಗಿ ರಾಜೀನಾಮೆ ಕೊಟ್ಟ ಕಾರಣ ಸ್ವೀಕಾರ ಮಾಡಿದ್ದೇನೆ. ಯಾರೇ ಶಾಸಕರು ರಾಜೀನಾಮೆ ನೀಡಿದರೂ ನಮಗೆ ಮನವರಿಕೆ ಆದ ಮೇಲೆ ಸ್ವೀಕಾರ ಮಾಡೋದು, ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ, ಒತ್ತಡಗಳಿಗೆ ಒಳಗಾಗಿ ರಾಜೀನಾಮೆ ಕೊಡಬಹುದು. ಹೀಗಾಗಿ ಸ್ವಲ್ಪ ಸಮಯವಕಾಶ ನೀಡಿ ಆ ಬಳಿಕ ರಾಜೀನಾಮೆ ಸ್ವೀಕಾರ ಮಾಡ್ತೀವಿ ಎಂದು ಸ್ಪೀಕರ್ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಅಥವಾ ಮೈಸೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಗೌಡ, ಟಿಕೆಟ್ ಸಿಗದ ಬೇಸರದಲ್ಲಿದ್ದರು. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಕುತೂಹಲ ಮೂಡಿಸಿತ್ತು. ಡಿಕೆಶಿ ಒಕ್ಕಲಿಗರಲ್ಲಿ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ವದಂತಿ ಹರಡಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಟಿವಿ ಡಿಬೇಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿನಿ ಮೂಲತಃ ಪತ್ರಿಕೋದ್ಯಮ ಹಿನ್ನೆಲೆಯಿಂದ ಬಂದವರು.

Tejaswini Gowda, who was a member of the Legislative Council of BJP (Karnataka BJP), today met Speaker Basavaraj Horatti and submitted her resignation. Horatti informed about this, BJP's Tejaswini Gowda Ramesh Gowda has resigned. He clarified that I did a lot of convincing and said that I am resigning due to my personal reasons.