ಬ್ರೇಕಿಂಗ್ ನ್ಯೂಸ್
27-03-24 03:33 pm HK News Desk ಕರ್ನಾಟಕ
ಚಿತ್ರದುರ್ಗ, ಮಾ 27: ಬೆಂಗಳೂರು: ಪತಿಯ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಗೀಳು ಪತ್ನಿಯ ಸಾವಿನೊಂದಿಗೆ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬೆಟ್ಟಿಂಗ್ ನಲ್ಲಿ ಹಣ ತೊಡಗಿಸುವ ಸಲುವಾಗಿ ಪತಿ 1.5 ಕೋಟಿಗೂ ಹೆಚ್ಚು ಸಾಲ ಮಾಡಿದ್ದು ಸಾಲ ನೀಡಿದವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ.
ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ದರ್ಶನ್ ಬಾಬು ಎಂಬವರ ಪತ್ನಿ ರಂಜಿತಾ(24) ಆತ್ಮಹತ್ಯೆಗೆ ಶರಣಾದ ಮಹಿಳೆ. ಹೊಳಲ್ಕೆರೆಯ ಆಕೆಯ ಮನೆಯ ಬೆಡ್ ರೂಂನಲ್ಲಿ ಮಾರ್ಚ್ 19ರಂದು ಆಕೆಯ ಮೃತದೇಹ ಪತ್ತೆಯಾಗಿತ್ತು. ತನ್ನ ಈ ನಿರ್ಧಾರಕ್ಕೆ ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಆಕೆ ತಿಳಿಸಿದ್ದಾಳೆ. ಪ್ರಕರಣಕ್ಕ ಸಂಬಂಧಿಸಿ ರಂಜಿತಾ ತಂದೆ ವೆಂಕಟೇಶ್ ಎಂಬವರು ತನ್ನ ಅಳಿಯ ದರ್ಶನ್ ಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿಯ ವಿರುದ್ಧ ದೂರು ನೀಡಿದ್ದಾರೆ.
ಸಾಲ ನೀಡಿದವರಿಂದ ಕಿರುಕುಳ;
ಪತಿ ದರ್ಶನ್ ಮತ್ತು ತನಗೆ ಸಾಲ ನೀಡಿದವರು ಬಹಳ ಕಿರುಕುಳ ನೀಡುತ್ತಿದ್ದರು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮೃತ ರಂಜಿತಾ ಎಂದು ಸುಸೈಡ್ ನೋಟಿನಲ್ಲಿ ತಿಳಿಸಿದ್ದಾರೆ. ದಂಪತಿಗೆ 2 ವರ್ಷದ ಪುತ್ರನಿದ್ದಾನೆ.
ಇನ್ನು ವೆಂಕಟೇಶ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 306 ಅಡಿ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಗಿರೀಶ್ ಮತ್ತು ವೆಂಕಟೇಶ್ ಬಂಧಿತರು. ಇನ್ನುಳಿದವರು ನಾಪತ್ತೆಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ನನ್ನ ಅಳಿಯ ಮುಗ್ಧ. ಆತನಿಗೆ ಕ್ರಿಕೆಟ್ ಬೆಟ್ಟಿಂಗ್ ಗೆ ಇಳಿಯಲು ಇಷ್ಟವಿರಲಿಲ್ಲ. ಆದರೆ ಸಾಲ ನೀಡಿದವರು ದಿಢೀರ್ ಶ್ರೀಮಂತನಾಗಲು ಇದು ಸುಲಭ ಉಪಾಯ ಎಂದು ಪುಸಲಾಯಿಸಿದ್ದರು. ಜೊತೆಗೆ ಹಣಕಾಸು ವ್ಯವಸ್ಥೆಯನ್ನೂ ಒದಗಿಸುವುದಾಗಿ ತಿಳಿಸಿದ್ದರು. ಬಳಿಕ ಬ್ಲ್ಯಾಕ್ ಚೆಕ್ ಅನ್ನು ಪಡೆದುಕೊಂಡು ಸಾಲ ನೀಡಿದ್ದರು.
ಈ ದುಡ್ಡನ್ನು ಇಟ್ಟುಕೊಂಡು ದರ್ಶನ್ 2021ರಿಂದ 2023ರವರೆಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಹಾಕಿ ಎಲ್ಲವನ್ನೂ ಕಳೆದುಕೊಂಡ. ಈ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಗೆ ಐಡಿಯಾ ಜೊತೆ ಹಣವನ್ನು ಕೊಟ್ಟವರು ಹಣ ಹಿಂದುರುಗಿಸುವಂತೆ ದಂಪತಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ. ದರ್ಶನ್ 54 ಲಕ್ಷ ರೂ ಸಾಲ ಹಿಂದುರುಗಿಸಲು ಬಾಕಿ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
In a shocking incident, a man's obsession with online cricket betting ended with the death of his wife in Chitradurga. In her suicide note, the woman said her husband had taken a loan of over Rs 1.5 crore to invest money in betting and she committed suicide as she could not bear the harassment of the lenders.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm