ಬ್ರೇಕಿಂಗ್ ನ್ಯೂಸ್
27-03-24 10:36 pm HK News Desk ಕರ್ನಾಟಕ
ಚಿಕ್ಕಮಗಳೂರು, ಮಾ.27: ಬಿಜೆಪಿ ಟಿಕೆಟ್ ಡೀಲ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಮಾಫಿ ಸಾಕ್ಷಿಯಾಗಿದ್ದ ಸೆಲೂನ್ ಮಾಲೀಕನಿಗೆ ಹಲ್ಲೆಗೈದ ಘಟನೆ ನಡೆದಿದ್ದು ಲೋಕಸಭೆ ಚುನಾವಣೆ ವೇಳೆಗೆ ಮತ್ತೆ ಹಳೆ ಕೇಸು ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ಕ್ಷೇತ್ರದ ಟಿಕೆಟ್ ತೆಗೆಸಿಕೊಡುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ಪಡೆದು ವಂಚಿಸಿದ್ದ ಚೈತ್ರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿತ್ತು. ಆರೋಪಿಗಳಲ್ಲಿ ಒಬ್ಬನಾದ ಧನರಾಜ್ ಮತ್ತು ಆರೇಳು ಮಂದಿ ಸೇರಿ ಸಲೂನ್ ಮಾಲೀಕ ರಾಮು ಎಂಬಾತನಿಗೆ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಕ್ಕಾಗಿ ಧನರಾಜ್ ಹಲ್ಲೆ ನಡೆಸಿದ್ದಾಗಿ ಹೇಳಲಾಗುತ್ತಿದೆ.
ಕಡೂರು ಪಟ್ಟಣದಲ್ಲಿ ರಾಮು ಸಲೂನ್ ನಡೆಸುತ್ತಿದ್ದು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಉದ್ಯಮಿ ಗೋವಿಂದಬಾಬುಗೆ ವಂಚಿಸಲು ಆರೆಸ್ಸೆಸ್ ನಾಯಕರ ನಕಲಿ ಪಾತ್ರಧಾರಿಗಳನ್ನ ಸೃಷ್ಟಿಸಿದ್ದರು. ಕಡೂರಿನ ಈತನದ್ದೇ ಸೆಲೂನ್ ನಲ್ಲಿ ಕಬಾಬ್ ವ್ಯಾಪಾರಿಯನ್ನ ಆರ್.ಎಸ್.ಎಸ್. ನಾಯಕನನ್ನಾಗಿ ತಯಾರಿ ಮಾಡಲಾಗಿತ್ತು. ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿದ್ದ ಚೈತ್ರಾ ಅಂಡ್ ಗ್ಯಾಂಗ್, ಆತನ ಮೂಲಕ ಗೋವಿಂದ ಪೂಜಾರಿಯನ್ನು ವಂಚಿಸಿತ್ತು.
ರಾಮು ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಯಾಗಿದ್ದಾನೆ. ಇದೀಗ ರಾಮು ಮೇಲೆ ಹಲ್ಲೆ ನಡೆಸಿದ್ದು ಆತನನ್ನು ಮುಗಿಸಲು ಆರೋಪಿಗಳು ಯತ್ನಿಸಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಬೀರೂರು ಪೊಲೀಸರಿಗೆ ದೂರಿತ್ತರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ರಾಮು ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾನೆ.
ದೂರಿನಲ್ಲಿ ತನ್ನ ಸ್ನೇಹಿತರ ಜೊತೆಗೆ ಹೊಟೇಲ್ ನಲ್ಲಿದ್ದಾಗ ಧನರಾಜ್ ಮತ್ತು ಮನು ಹಾಗೂ ಇತರರು ನನ್ನ ಭವಿಷ್ಯ ಹಾಳು ಮಾಡಿದ್ದೀಯಾ ಎಂದು ಹಲ್ಲೆ ನಡೆಸಿದ್ದಾರೆ. ಬೀರೂರು ಠಾಣೆಯಲ್ಲಿ ವ್ಯಾಪ್ತಿ ಬರುವುದಿಲ್ಲ ಎಂದು ಹೇಳಿ ಕಡೂರು ಠಾಣೆಗೆ ಕಳಿಸಿದ್ದಾರೆ. ತನಗೆ ಜೀವ ಭಯ ಇದೆ, ರಕ್ಷಣೆ ಕೊಡಬೇಕೆಂದು ಎಸ್ಪಿಗೆ ಮನವಿ ಮಾಡಿದ್ದಾನೆ. ಚೈತ್ರಾ ಗ್ಯಾಂಗಿನಲ್ಲಿ ಬಿಜೆಪಿ ಮುಖಂಡನಾಗಿದ್ದ ಗಗನ್ ಕಡೂರು ಎರಡನೇ ಆರೋಪಿಯಾಗಿದ್ದ. ಧನರಾಜ್ ಆರನೇ ಆರೋಪಿಯಾಗಿದ್ದಾನೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ಸೆಲೂನ್ ಅಂಗಡಿಯ ರಾಮುವನ್ನು ಪ್ರಮುಖ ಸಾಕ್ಷಿಯಾಗಿ ತೋರಿಸಿದ್ದಾರೆ.
Chaitra Kundapura gang attacks witness saloon guy, complains of life threat. The central crime branch (CCB) police personnel from Bengaluru have arrested Hindutva activist Chaitra Kundapura and six others on the charge of cheating a businessman of crores of rupees after promising a BJP ticket for him from Byndoor.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm