ಬ್ರೇಕಿಂಗ್ ನ್ಯೂಸ್
28-03-24 04:14 pm HK News Desk ಕರ್ನಾಟಕ
ದಾವಣಗೆರೆ, ಮಾ.28: ಬಿಜೆಪಿ ಬಂಡಾಯ ಮುಗಿಯುತ್ತಿದ್ದಂತೆ ದಾವಣಗೆರೆ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೈ ಟಿಕೆಟ್ ವಂಚಿತ ವಿನಯ್ ಕುಮಾರ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ಅಹಿಂದ ವರ್ಗದ ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಪಕ್ಷದಿಂದ ದಾವಣಗೆರೆ ಟಿಕೆಟ್ ಪಡೆಯಲು ನಿರಂತರ ಪ್ರಯತ್ನ ನಡೆಸಿದ್ದರು. ಶಾಮನೂರು ಕುಟುಂಬಕ್ಕೆ ಟಿಕೆಟ್ ಘೋಷಣೆಯಾದ ನಂತರವೂ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಟಿಕೆಟ್ ಸಿಗಲ್ಲ ಎನ್ನೋದು ಖಾತ್ರಿಯಾಗುತ್ತಿದ್ದಂತೆ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದಾರೆ. ಹಿಂದೆ ಚೆನ್ನಯ್ಯ ಒಡೆಯರ್ ಗೆ ಆದಂತೆ ಮತ್ತೊಮ್ಮೆ ಘೋರ ಅನ್ಯಾಯ ಅಹಿಂದ ವರ್ಗಕ್ಕೆ ಆಗಿದೆ. ಬಹುತೇಕ ಡಿಸೈಡ್ ಮಾಡಿದ್ದೇನೆ, 100% ಬಂಡಾಯ ಸ್ಪರ್ಧಿಸಿ ಗೆಲ್ಲುತ್ತೇನೆ. ಒಂದು ಹೆಜ್ಜೆ ಮುಂದೇ ಇಟ್ಟರೆ ಹಿಂದೇ ತೆಗೆಯಲ್ಲ. ಶೀಘ್ರದಲ್ಲೆ ನಾಮಿನೇಷನ್ ದಿನಾಂಕ ತಿಳಿಸುತ್ತೇನೆ ಎಂದು ವಿನಯ ಕುಮಾರ್ ತಿಳಿಸಿದ್ದಾರೆ.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರೇ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಅವರ ಪತ್ನಿಗೆ ಟಿಕೆಟ್ ಕೊಡಿಸಲು ನನ್ನನ್ನು ದೂರ ಇಟ್ಟಿದ್ದಾರೆ ಎಂದು ವಿನಯ ಕುಮಾರ್ ಆರೋಪಿಸಿದ್ದಾರೆ. ವಿನಯ್ ಕುಮಾರ್ ದಾವಣಗೆರೆಯವನು ಅಲ್ಲ ಎಂಬ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿನಯ್, ನಾನು ದಾವಣಗೆರೆಯಲ್ಲೇ ಹುಟ್ಟಿ ಬೆಳೆದಿರೋದು. ಸಚಿವರ ಒಡೆತನದ ಬಾಪೂಜಿ ಅಸ್ಪತ್ರೆಯಲ್ಲೆ ಹುಟ್ಟಿರೋದು. ದಾವಣಗೆರೆಯವನು ಅಲ್ಲ ಎಂದು ಟಿಕೆಟ್ ತಪ್ಪಿಸಿದ್ದೇವೆ ಎಂದು ಹೇಳಿದ್ದಾರೆ. ನಾನು ದಾವಣಗೆರೆಯವನೇ, ಮದುವೆ ಆಗಿರೋದು ದಾವಣಗೆರೆಯಲ್ಲೇ. ಈಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನನಗೆ ತಪ್ಪಿಸಿ ಅವರು ಟಿಕೆಟ್ ತಗೊಂಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
As soon as the BJP's rebellion ended, differences erupted in the Davanagere Congress. Vinay Kumar, who was denied a ticket, has announced that he will contest the elections as an independent.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm