ನಳಿನ್ ಕುಮಾರ್ ಗೆ ಏನೋ ಹೆಚ್ಚು ಕಮ್ಮಿ ಆಗಿದೆ, ಆಸ್ಪತ್ರೆಗೆ ಸೇರಿಸಬೇಕು ; ಡಿಕೆಶಿ ವ್ಯಂಗ್ಯ

28-11-20 04:32 pm       Headline Karnataka News Network   ಕರ್ನಾಟಕ

ಸಿದ್ದರಾಮಯ್ಯ ಮಾದಕ ದ್ರವ್ಯದ ಹಣದಿಂದ ಸರಕಾರ ನಡೆಸಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಡಿಕೆಶಿ ಈ ರೀತಿ ತಿರುಗೇಟು ನೀಡಿದರು.

ಕಾರವಾರ, ನ.28: ಸಿದ್ದರಾಮಯ್ಯ ಮಾದಕ ದ್ರವ್ಯದ ಹಣದಿಂದ ಸರಕಾರ ನಡೆಸಿದ್ದರೆ, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಏನೋ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ, ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮಾದಕ ದ್ರವ್ಯದ ಹಣದಿಂದ ಸರಕಾರ ನಡೆಸಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಡಿಕೆಶಿ ಈ ರೀತಿ ತಿರುಗೇಟು ನೀಡಿದರು. ಶನಿವಾರ ಕಾರವಾರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. 

ಹಿಂದಿನ ಸರಕಾರದಲ್ಲಿ ನಾನು ಕೂಡ ಭಾಗವಾಗಿದ್ದೆ. ನನ್ನ ಮೇಲೂ ಎಫ್‌ಐಆರ್ ಹಾಕಲಿ. ನಮ್ಮ ಸರಕಾರದಲ್ಲಿದ್ದವರು ಇದೀಗ ಅವರ ಸರಕಾರದಲ್ಲೂ ಇದ್ದಾರಲ್ಲ, ಅವರ ಮೇಲೂ ಎಫ್‌ಐಆರ್ ದಾಖಲಿಸಲಿ ಎಂದು ಕುಟುಕಿದರು.

ಕಟೀಲು ತಮ್ಮ ಸ್ಥಾನದ ಗೌರವಕ್ಕೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ. ಅವರಿಗೆ ರಾಜಕೀಯದ ಅಲ್ಪಸ್ವಲ್ಪ ಪರಿಜ್ಞಾನ ಇದೆ ಎಂದು ತಿಳ್ಕೊಂಡಿದ್ದೆ. ಈ ರೀತಿಯ ಮಾತುಗಳಿಂದ ಅವರ ಸ್ಥಾನಕ್ಕೇ ಕಳಂಕ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಪ್ರಕರಣದ ಹಿಂದೆ ಗೌಪ್ಯವಾದ ವಿಚಾರಗಳು ಅಡಗಿವೆ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅದು ಸರಕಾರದ ಮಟ್ಟದಲ್ಲಿ ನಡೆದರೆ ಪ್ರಯೋಜನವಿಲ್ಲ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿಯವರ ಆಂತರಿಕ ವಿಚಾರಗಳಲ್ಲಿ ನಾವು ತಲೆ ಹಾಕುವುದಿಲ್ಲ. ನಮ್ಮ ಪಕ್ಷದಿಂದ ಅಲ್ಲಿಗೆ ಹೋದ ಕೆಲವರು ಬಿಜೆಪಿಗೇನು ಮಾಡಬೇಕೋ ಅದನ್ನು ಮಾಡ್ತಾರೆ. ನಾವು ಅನುಭವಿಸಿದ್ದನ್ನು ಅವರೂ ಅನುಭವಿಸ್ತಾರೆ ಎಂದು ಹೇಳಿದರು.

Congress Dk Shivakumar has mocked at Naleen Kumar Kateel saying he's mentally not well.