Bangalore cafe blast, NIA, Terror Photo: ಕೆಫೆ ಬಾಂಬರ್ ಸ್ಪಷ್ಟ ಭಾವಚಿತ್ರ ಬಿಡುಗಡೆ ; ಮುಸಾವಿರ್, ಅಬ್ದುಲ್ ಮತೀನ್ ಮಾಹಿತಿ ಕೊಟ್ಟವರಿಗೆ ತಲಾ 10 ಲಕ್ಷ ರೂ. ಘೋಷಣೆ 

29-03-24 08:26 pm       Bangalore Correspondent   ಕರ್ನಾಟಕ

​​​​​​​ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿಗಳೆಂದು ಎನ್​ಐಎ ಗುರುತಿಸಿರುವ ಮುಸಾವಿರ್ ಹುಸೇಬ್ ಶಜೀಬ್ ಮತ್ತು ಅಬ್ದುಲ್ ಮತೀನ್ ತಾಹ ಎಂಬಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ಹತ್ತು ಲಕ್ಷ ರು. ಬಹುಮಾನ ಘೋಷಿಸಲಾಗಿದೆ.

ಬೆಂಗಳೂರು, ಮಾ.29: ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿಗಳೆಂದು ಎನ್​ಐಎ ಗುರುತಿಸಿರುವ ಮುಸಾವಿರ್ ಹುಸೇಬ್ ಶಜೀಬ್ ಮತ್ತು ಅಬ್ದುಲ್ ಮತೀನ್ ತಾಹ ಎಂಬಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ಹತ್ತು ಲಕ್ಷ ರು. ಬಹುಮಾನ ಘೋಷಿಸಲಾಗಿದೆ. 

ಕೆಫೆ ಬ್ಲಾಸ್ಟ್​ ಕೃತ್ಯಕ್ಕೆ ಕಚ್ಚಾ ಸಾಮಗ್ರಿ ಪೂರೈಸಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುಜಾಮುಲ್​ ಶರೀಫ್ ಎಂಬಾತನನ್ನು ಮಾರ್ಚ್ 27ರಂದು ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಪ್ರಮುಖ ಆರೋಪಗಳಿಬ್ಬರ ಪತ್ತೆಗಾಗಿ ಎನ್ಐಎ ಅಧಿಕಾರಿಗಳು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಫೋಟೋ ಮತ್ತು ಅವರ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. 

ಮುಸಾವಿರ್ ಹುಸೇನ್ ಶಜೀಬ್ ಬಾಂಬ್ ಅನ್ನು ಕೆಫೆ ಒಳಗೆ ಇಟ್ಟು ತೆರಳಿದ್ದ ವ್ಯಕ್ತಿಯೆಂದು ಎನ್ಐಎ ಗುರುತಿಸಿದೆ.‌ ಸಿಸಿಟಿವಿಯಲ್ಲಿ ದೊರೆತ ಮಾಹಿತಿಗಳು ಮತ್ತು ಆತ ಧರಿಸಿದ್ದ ಟೋಪಿ ನೀಡಿದ್ದ ಮಾಹಿತಿಗಳನ್ನು ಆಧರಿಸಿ ಮುಸಾವಿರ್ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಜಿಮ್ ಬಾಡಿಯ ರೀತಿ ಸದೃಢ ದೇಹ ಹೊಂದಿದ್ದು 30 ವರ್ಷದವನಾಗಿದ್ದಾನೆ. ಆರು ಅಡಿ ಎರಡು ಇಂಚು ಎತ್ತರವಿದ್ದು ಹೆಚ್ಚಾಗಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಧರಿಸುತ್ತಾನೆ. ಡಿಎಲ್ ಅಥವಾ ನಕಲಿ ಐಡಿಗಳನ್ನು ಇಟ್ಕೊಂಡಿದ್ದಾನೆ. 

ಬಾಯ್ಸ್ ಹಾಸ್ಟೆಲ್, ಪಿಜಿ, ಕಡಿಮೆ ವೆಚ್ಚದ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಈತನ ಬಗ್ಗೆ ಮಾಹಿತಿ ಕೊಟ್ಟವರ ಕುರಿತು ಗೌಪ್ಯವಾಗಿಡಲಾಗುವುದು ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಇಬ್ಬರು ಆರೋಪಿಗಳು ಕೂಡ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು. ಎರಡು ದಿನಗಳ ಹಿಂದೆ ಎನ್ಐಎ ತಂಡ ಶಿವಮೊಗ್ಗದ ಅವರ ಮನೆ, ಶಾಪ್ ಗಳಿಗೆ ದಾಳಿ ನಡೆಸಿ ಮಹತ್ವದ ಸಾಕ್ಷಿಗಳನ್ನು ಕಲೆಹಾಕಿದ್ದರು. ಅಲ್ಲದೆ, ಮುಜಾಮಿಲ್ ಶರೀಫ್ ಎಂಬಾತನನ್ನು ಬಂಧಿಸಿದ್ದರು. ಆತನಿಂದ ಖಚಿತ ಮಾಹಿತಿಗಳನ್ನು ಪಡೆದು ಈಗ ಸ್ಪಷ್ಟ ಭಾವಚಿತ್ರಗಳನ್ನು ಎನ್ಐಎ ಬಿಡುಗಡೆ ಮಾಡಿದೆ.

The National Investigation Agency (NIA) on Friday released new photographs of the man suspected of carrying out an IED blast at the Rameshwaram Cafe here on March 1, an official said. The photographs of the suspect's accomplice was also released, the official said, adding a reward of Rs 10 lakh for clues on each of them was also announced by the NIA. The suspected bomber has been identified as Mussavir Hussain Shazib a.k.a. Shazeb. His other aliases are Mohammand Junai Hussain and Mohammed Juned Sayed.