Rameshwaram Cafe Blast, NIA, Al-Hind Islamic States: ‘‘ಅಲ್ ಹಿಂದ್ ’’ ಉಗ್ರ ಸಂಘಟನೆಯಲ್ಲಿ ಸಕ್ರಿಯ ; ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೆಟ್ವರ್ಕ್, ಹಿಂದುಗಳ ಹೆಸರಲ್ಲೇ ನಕಲಿ ಐಡಿ ಸೃಷ್ಟಿ, ಕೆಫೆ ಬಾಂಬರ್ ಮುಸಾವಿರ್, ಅಬ್ದುಲ್ ಮತೀನ್ ರಹಸ್ಯ ಭೇದಿಸಿದ ಎನ್ಐಎ

30-03-24 11:45 am       Bangalore Correspondent   ಕರ್ನಾಟಕ

ರಾಮೇಶ್ವರ ಕೆಫೆ ಸ್ಫೋಟದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟ ಮುಸಾವಿರ್ ಹುಸೇನ್ ಮತ್ತು ಅಬ್ದುಲ್ ಮತೀನ್ ಹಲವು ವರ್ಷಗಳಿಂದ ಉಗ್ರವಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯರಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರು, ಮಾ.30: ರಾಮೇಶ್ವರ ಕೆಫೆ ಸ್ಫೋಟದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟ ಮುಸಾವಿರ್ ಹುಸೇನ್ ಮತ್ತು ಅಬ್ದುಲ್ ಮತೀನ್ ಹಲವು ವರ್ಷಗಳಿಂದ ಉಗ್ರವಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯರಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್, ಮುಸಾವೀರ್ ಹುಸೇನ್ ಉಗ್ರವಾದ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡು ಮೊದಲಿನಿಂದಲೂ ಅಲ್ ಹಿಂದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅಲ್ ಹಿಂದ್ ಸಂಘಟನೆ ಮುಖ್ಯಸ್ಥ ಮೆಹಬೂಬ್ ಪಾಷಾ ಜೊತೆಗೆ ನೇರ ಸಂಪರ್ಕದಲ್ಲಿದ್ದು ದೇಶವಿರೋಧಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಅಲ್ಲದೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಂಕಿತ ಉಗ್ರ ಕೋಲಾರ ಸಲೀಂ ತೌಫಿಕ್ ಜೊತೆ ಸೇರಿ ರಹಸ್ಯ ಶಿಬಿರಗಳನ್ನು ನಡೆಸಿದ್ದರು. ಅಬ್ದುಲ್ ಮತೀನ್ ಐಸಿಸ್ ಉಗ್ರರ ಜೊತೆ ನೇರ ಸಂಪರ್ಕದಲ್ಲಿರುವ ಸಂಶಯವೂ ವ್ಯಕ್ತವಾಗಿದೆ.

2020ರಲ್ಲಿ ಅಲ್ ಹಿಂದ್ ಸಂಘಟನೆ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದು ವಿಫಲಗೊಂಡು ಮೊಹಮ್ಮದ್ ಪಾಷಾ ಸೇರಿ 18 ಮಂದಿ ಬಂಧನವಾಗಿದ್ದರು. ಆದರೆ ಅವರೊಂದಿಗಿದ್ದ ಮುಸಾವೀರ್ ಮತ್ತು ಅಬ್ದುಲ್ ಮತೀನ್ ತಲೆಮರೆಸಿಕೊಂಡಿದ್ದರು. ಬಳಿಕ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಐಸಿಸ್ ಪರ ಚಟುವಟಿಕೆಯಲ್ಲಿ ತೊಡಗಿಸಿದ್ದರು. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರದಲ್ಲಿ ತಮ್ಮ ವಾಸ್ತವ್ಯ ಬದಲಾಯಿಸುತ್ತ ಐಸಿಸ್ ನೆಟ್ವರ್ಕ್ ಬೆಳೆಸಿಕೊಂಡಿದ್ದರು.

ಹಿಂದುಗಳ ಹೆಸರಲ್ಲಿ ನಕಲಿ ಐಡಿ ಸೃಷ್ಟಿಸಿದ್ದ

ವಿಶೇಷ ಅಂದ್ರೆ, ಅಬ್ದುಲ್ ಮತೀನ್ ಹಿಂದು ಹೆಸರುಗಳಲ್ಲಿ ನಕಲಿ ಐಡಿಗಳನ್ನು ಮಾಡಿಕೊಂಡಿದ್ದ. ವಿಘ್ನೇಶ್ ಮತ್ತು ಸುಮಿತ್ ಹೆಸರಲ್ಲಿ ನಕಲಿ ಐಡಿಗಳ ಮೂಲಕ ಗುರುತಿಸಿಕೊಂಡಿದ್ದ ಎಂಬ ಅಂಶವನ್ನೂ ಎನ್ಐಎ ಅಧಿಕಾರಿಗಳು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಆಮೂಲಕ ಉಗ್ರ ಕೃತ್ಯ ಎಸಗಿದರೂ ತನಿಖಾಧಿಕಾರಿಗಳ ದಾರಿ ತಪ್ಪಿಸುವ ಸಂಚು ಹೂಡಿದ್ದರು ಅನ್ನುವುದು ಬೆಳಕಿಗೆ ಬಂದಿದೆ. ಮುಸಾವೀರ್ ಹುಸೇನ್, ಮೊಹಮ್ಮದ್ ಜುನೈದ್ ಸೈಯದ್ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸನ್ಸ್ ಮಾಡಿಕೊಂಡಿದ್ದಾನೆ. ಈ ನಕಲಿ ಐಡಿಗಳನ್ನು ತೋರಿಸಿಯೇ ವಿವಿಧ ಕಡೆ ಲಾಡ್ಜ್ ಗಳನ್ನು ಪಡೆಯುತ್ತಿದ್ದರು. ಆಮೂಲಕ ತಮ್ಮ ನಿಜ ಹೆಸರುಗಳನ್ನು ಮರೆ ಮಾಚುತ್ತಿದ್ದರು.

Mohammed Shariq posed with a pressure cooker bomb. Then it blew up in his  face - India Today

ಪ್ರೇಮಚಂದ್ರ ಹೆಸರಲ್ಲಿದ್ದ ಮೊಹಮ್ಮದ್ ಶಾರೀಕ್

ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಕೂಡ ಇದೇ ರೀತಿ ನಕಲಿ ಐಡಿಗಳನ್ನು ಮಾಡಿಕೊಂಡಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು. ಶಾರೀಕ್ ಮೈಸೂರಿನಲ್ಲಿದ್ದಾಗ ಪ್ರೇಮಚಂದ್ರ ಹೆಸರಿನಲ್ಲಿ ಐಡಿ ಮಾಡಿಕೊಂಡು ಅದೇ ಹೆಸರಿನಲ್ಲಿ ಬಾಡಿಗೆ ಮನೆ ಪಡೆದಿದ್ದ. ಶಾಪ್ ಒಂದರಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ ಎಂಬುದು ತನಿಖೆಯಲ್ಲಿ ಕಂಡುಬಂದಿತ್ತು. ಇದೀಗ ಕೆಫೆ ಬಾಂಬರ್ ಗಳೂ ಹಿಂದು ಹೆಸರಿದ್ದವರೇ ಕೃತ್ಯ ಎಸಗಿದ ರೀತಿ ಬಿಂಬಿಸಲು ನಕಲಿ ಐಡಿಯ ನಾಟಕವಾಡಿರುವುದು ಪತ್ತೆಯಾಗಿದೆ.

ಈ ನಡುವೆ, ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಚಿಕ್ಕಮಗಳೂರಿನ ದುಬೈ ನಗರ ನಿವಾಸಿ ಮುಜಾಮಿಲ್ ಶರೀಫ್ ಎಂಬಾತನನ್ನು ಬಂಧಿಸಿದ್ದು, ಆತನನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಹೊಟೇಲ್ ನಲ್ಲಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿಕೊಂಡಿದ್ದ ಮುಜಾಮಿಲ್, ಕೆಫೆ ಬಾಂಬ್ ಸ್ಫೋಟಕ್ಕೆ ಐಇಡಿ ಕಚ್ಚಾ ವಸ್ತುಗಳನ್ನು ಖರೀದಿಸಿ ಪ್ರಮುಖ ಆರೋಪಿಗಳಿಗೆ ಒದಗಿಸಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಬಾಂಬ್ ತಯಾರಿಸಿದ ಶಂಕೆಯಿದ್ದು, ಆತನನ್ನು ತನಿಖೆಗೆ ಒಳಪಡಿಸಿದ್ದಾರೆ. ಅಲ್ಲದೆ, ಮುಜಾಮಿಲ್ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದು, ಹಣಕಾಸು ಮೂಲದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Lucknow’s National Investigation Agency (NIA) raided a preacher’s home in Uttar Pradesh’s Bareilly district, questioning him about the Rameshwaram Cafe blast. The NIA suspected the Al-Hind Islamic State module’s involvement and compared the timer and detonator devices used in the Rameshwaram Cafe blast to the Mangaluru cooker blast.