Eshwarappa, Amith sha, BJP: ಮೋದಿಯಲ್ಲ ಬ್ರಹ್ಮ ಬಂದು ಹೇಳಿದ್ರೂ ಚುನಾವಣೆಯಿಂದ ಹಿಂದೆ ಸರಿಯಲ್ಲ  ; ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ? ಅಮಿತ್ ಶಾಗೆ ಈಶ್ವರಪ್ಪ ಫೋನ್ ನಲ್ಲಿ ಪ್ರಶ್ನೆ 

02-04-24 05:33 pm       HK News Desk   ಕರ್ನಾಟಕ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಬಂಡಾಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಿಸಿದ ನಂತರ ಬಿಎಸ್‌ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಎಸ್‌ವೈ ಪುತ್ರ ಬಿವೈ ರಾಘವೇಂದ್ರರನ್ನು ಸೋಲಿಸಲು ಖೆಡ್ಡಾ ತೋಡಿದ್ದಾರೆ.

ಶಿವಮೊಗ್ಗ, ಏ.02: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಬಂಡಾಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಿಸಿದ ನಂತರ ಬಿಎಸ್‌ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಎಸ್‌ವೈ ಪುತ್ರ ಬಿವೈ ರಾಘವೇಂದ್ರರನ್ನು ಸೋಲಿಸಲು ಖೆಡ್ಡಾ ತೋಡಿದ್ದಾರೆ.

ಈ ಹಿನ್ನೆಲೆ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ, ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿದ್ದು, ಹೀಗಾಗಿ ಖುದ್ದು ಶಾ ಅವರೇ ಈಶ್ವರಪ್ಪಗೆ ಕರೆ ಮಾಡಿ ಮಾತನಾಡಿದ್ದಾರೆ, ಅಲ್ಲದೇ ನಾಳೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಅಮಿತ್ ಶಾ ಕರೆ ಬಂದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಕೆಎಸ್ ಈಶ್ವರಪ್ಪ ಹಲವು ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

Man-of-the-season": BJP once again falls back on Yediyurappa to deliver for  party in

Amit Shah: Centre Will Consider Revoking AFSPA In Jammu And Kashmir | India  News - Times Now

ಈ ಬಗ್ಗೆ ಮಾತನಾಡಿರುವ ಅವರು, ನಮ್ಮ ದೇಶದ ಗೃಹಮಂತ್ರಿಗಳು, ದೇಶದ ಉಕ್ಕಿನ ಮನುಷ್ಯ ಬೆಳಗ್ಗೆ ದೂರವಾಣಿ ಮೂಲಕ ಕರೆ ಮಾಡಿದ್ರು. ನೀವು ಇಷ್ಟ ಹಿರಿಯರಿದ್ದೀರಿ ಯಾಕೆ ಚುನಾವಣೆಗೆ‌ ನಿಂತಿದ್ದೀರಾ ಅಂತಾ ಕೇಳಿದ್ರು. ಅಪ್ಪ ಮಕ್ಕಳ ವ್ಯವಸ್ಥೆ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೇನೆ ಅಂತಾ ಹೇಳಿದ್ದೀನಿ. ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ಅಂತಾ ಅವರಿಗೆ ಹೇಳಿದ್ದೀನಿ. ಹಿಂದುಳಿದ ವರ್ಗಕ್ಕೆ ಯಾಕೆ ಟಿಕೆಟ್ ಸಿಗಲಿಲ್ಲ ಅಂತಾ ಕೇಳಿದ್ದಾರೆ ಅಂತಾ ಹೇಳಿದ್ದೇನೆ. ಅವರು ವಾಪಸ್ಸು ತೆಗೆದುಕೊಳ್ಳಿ, ನೀವು ಹೇಳಿದ ಹಾಗೇ ಆಗುತ್ತೆ ಅಂತಾ ಹೇಳಿದ್ರು. ಆಗ ನಾನು ನಿಮ್ಮ ಬಳಿ ಬಂದು ಮಾತಾನಾಡಿದ್ರು ಪ್ರಯೋಜನ ಆಗಿಲ್ಲ ಅಂತಾ ಹೇಳಿದ್ದೇನೆ ಎಂದು ಹೇಳಿದರು. 

ಮುಂದುವರಿದು, ‘ನಾನು ಈ ಹಿಂದೆ ದೆಹಲಿಗೆ ಬಂದಿದ್ದೆ, ಆಗಲೂ ಸರಿಯಾಗಿಲ್ಲ. ಈಗ ನನಗೆ ದೆಹಲಿಗೆ ನಾಳೆ ಬರಲು ತಿಳಿಸಿದ್ರು. ನಾನು ಬರ್ತೇನೆ, ಅದರೆ ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಹೇಳಿದ್ದೇನೆ. ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು. ಅದಕ್ಕೆ ನಾನು ನನ್ನ ಕುಟುಂಬದೊಟ್ಟಿಗೆ ಕೂತು ತೀರ್ಮಾನ ಮಾಡಿದ್ದೇವೆ ಎಂದಿದ್ದೇನೆ. ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ಬ್ರಹ್ಮ ಬಂದು ಹೇಳಿದ್ರೂ ನಾನೂ ಹಿಂದೆ ಸರಿಯಲ್ಲ, ಮೋದಿಯವರೇ ಬಂದು ಹೇಳಿದ್ರೂ ನಾನೂ ಹಿಂದೆ ಸರಿಯಲ್ಲ. ಅವರಿಗೆ ನಾನು ಮನವರಿಕೆ ಮಾಡುತ್ತೇನೆ ಅಂತಾ ಅಮಿತ್ ಶಾ ಅವರಿಗೂ ಹೇಳಿದ್ದೀನಿ ಎಂದರು.

ಇನ್ನು, ಬಿಜೆಪಿಯ ರಾಜ್ಯಾಧ್ಯಕ್ಷ ಬದಲಾವಣೆ ಮಾಡಿದರೆ ನಾನು ನಾಳೆಯೇ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದ ಕೆಎಸ್ ಈಶ್ವರಪ್ಪ, ರಾಜ್ಯಾಧ್ಯಕ್ಷ ಬದಲಾವಣೆ ಆದರೆ ನಾನು ಚುನಾವಣೆ ನಿಲ್ಲಲ್ಲ. ನಾಳೆ ರಾತ್ರಿ ದೆಹಲಿಗೆ ಹೋಗ್ತೇನೆ. ನನ್ನ ವಿಚಾರ ಅವರಿಗೆ ಒಪ್ಪಿಸಿ ಬರ್ತೇನೆ. ಅಮಿತ್ ಶಾಗೆ ಗೌರವ ಕೊಟ್ಟು ದೆಹಲಿಗೆ ಹೋಗ್ತೇನೆ. ದೊಡ್ಡವರು ಕರೆದಾಗ ಸೊಕ್ಕು ಮಾಡಬೇಕಾ? ಹಾಗಾಗಿ ಹೋಗ್ತಾ ಇದ್ದೀನಿ ನನ್ನ ಉದ್ದೇಶ ಅಮಿತ್ ಶಾ ಅವರಿಗೆ ಹೇಳಿ ಬರ್ತೇನೆ ಎಂದು ಹೇಳಿದರು.

Eshwarappa slams Yediyurappa family to amith sha on phone calls, says Yediyurappa son first must resign the post of president then will come back to BJP or else will contest independent won't care of Modi calls me says Eshwarappa.