ಬ್ರೇಕಿಂಗ್ ನ್ಯೂಸ್
07-04-24 05:49 pm Bangalore Correspondent ಕರ್ನಾಟಕ
ಬೆಂಗಳೂರು, ಎ.7: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಎನ್ನಲಾದ ಶಂಕಿತ ಉಗ್ರ ಮಾಝ್ ಮುನೀರ್ ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದಲೇ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಇತ್ತೀಚೆಗೆ ಬಂಧಿಸಲ್ಪಟ್ಟ ಮುಜಾಮಿಲ್ ಶರೀಫ್ ನೀಡಿದ ಮಾಹಿತಿ ಆಧರಿಸಿ ಮಾಝ್ ಮುನೀರ್ ನನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ಮಾಝ್ ಮುನೀರ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಫಿಶ್ ಮಾರ್ಕೆಟ್ ರಸ್ತೆಯ ನಿವಾಸಿ. ಮಂಗಳೂರಿನ ಗೋಡೆ ಬರಹ ಪ್ರಕರಣ ಮತ್ತು ಶಿವಮೊಗ್ಗದ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಮಾಝ್ ಆರೋಪಿಯಾಗಿದ್ದು ಎರಡು ವರ್ಷಗಳ ಹಿಂದೆಯೇ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ.
ಇತ್ತೀಚೆಗೆ ರಾಮೇಶ್ವರ ಕೆಫೆ ಸ್ಫೋಟ ಕೃತ್ಯದ ಬೆನ್ನಲ್ಲೇ ಜೈಲಿನಲ್ಲಿರುವ ಕುಕ್ಕರ್ ಬಾಂಬ್ ಆರೋಪಿ ಮಹಮ್ಮದ್ ಶಾರೀಕ್ ಹಾಗೂ ಮಾಝ್ ಮುನೀರ್ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅವರನ್ನು ಕಸ್ಟಡಿ ವಾರೆಂಟ್ ಪಡೆದು ವಿಚಾರಣೆಯನ್ನೂ ನಡೆಸಲಾಗಿತ್ತು. ಆನಂತರ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರದ 18 ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಹಲವರನ್ನು ವಿಚಾರಣೆ ನಡೆಸಿದ್ದರು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಮುಜಾಮಿಲ್ ಶರೀಫ್ ನನ್ನು ಬಂಧಿಸಿದ್ದರು. ಇದೀಗ ಮುಜಾಮಿಲ್ ನೀಡಿರುವ ಮಾಹಿತಿಯಂತೆ, ಮಾಝ್ ಮುನೀರ್ ಸಂಚು ನಡೆಸಿರುವವರಲ್ಲಿ ಒಬ್ಬನೆಂದು ಗುರುತಿಸಿ ಬಂಧಿಸಿದ್ದಾರೆ.
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಎನ್ಐಎ ಅಧಿಕಾರಿಗಳು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು ಮೊದಲ ಆರೋಪಿಯನ್ನಾಗಿ ಮಾಝ್ ಮುನೀರ್ ನನ್ನು ಗುರುತಿಸಿದ್ದಾರೆ. ಎರಡು ಮತ್ತು ಮೂರನೇ ಆರೋಪಿಯಾಗಿ ಮುಸಾವಿರ್ ಹುಸೇನ್ ಮತ್ತು ಅಬ್ದುಲ್ ಮತೀನ್ ತಾಹ ಎಂದು ಗುರುತಿಸಲಾಗಿದೆ. ಮುಜಾಮಿಲ್ ಶರೀಫ್ ನನ್ನು ನಾಲ್ಕನೇ ಆರೋಪಿಯಾಗಿಸಿದ್ದಾರೆ. ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯಿದ್ದು ತನಿಖೆ ಮುಂದುವರಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರ ಮಾಝ್ ಮುನೀರ್ ಹಾಗೂ ಅಬ್ದುಲ್ ಮತೀನ್ ಐಇಡಿ ಬಾಂಬ್ ತಯಾರಿಸುವುದರಲ್ಲಿ ನಿಪುಣರಾಗಿದ್ದು, ಇತರರಿಗೆ ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಿದ್ದರು. ಅಲ್ಲದೆ, ಏಪ್ ಮೂಲಕ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಉಗ್ರರೊಂದಿಗೆ ಒಡನಾಟ ಹೊಂದಿದ್ದರು. ಕುಕ್ಕರ್ ಬಾಂಬ್ ಆರೋಪಿ ಮೊಹಮ್ಮದ್ ಶಾರೀಕ್, ಶಿವಮೊಗ್ಗ ಬಾಂಬ್ ಟ್ರಯಲ್ ಆರೋಪಿ ಅರಾಫತ್ ಜೊತೆಗೂ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ಕೆಫೆ ಸ್ಫೋಟ ಸಂಚಿನಲ್ಲಿ ಮಾಝ್ ಮುನೀರ್ ಪ್ರಮುಖ ರೂವಾರಿಯೆಂದು ತನಿಖಾ ಸಂಸ್ಥೆ ಹೇಳಿದೆ.
Rameshwaram Cafe Blast NIA Arrests Mangalore graffiti case accused Maz Muneer. Maz Muneer, who is a suspect in the Shivamogga trial blast and Mangaluru graffiti case, has been arrested by the agency. NIA had taken Muneer into custody when he was in Parappana Agrahara Central Jail, sources said.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm