DK Shivakumar, Kumaraswamy: ಮಿಸ್ಟರ್‌ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ, ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ಅಸೆಂಬ್ಲಿಯಲ್ಲಿ ಮಾತಾಡೋಣ ಬಾ, ಡಿಕೆಶಿ ಚಾಲೆಂಜ್‌ !

15-04-24 06:47 pm       HK News Desk   ಕರ್ನಾಟಕ

ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಎಚ್‌ಡಿ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬೆಳಗಾವಿ, ಏ.15: ಮಿಸ್ಟರ್‌ ಕುಮಾರಸ್ವಾಮಿ, ಮಿಸ್ಟರ್‌ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ನನ್ನ ಆಸ್ತಿ ಬಗ್ಗೆ ಮಾತಾಡ್ತೀಯಾ? ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಎಚ್‌ಡಿ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಮಕ್ಳೆಲ್ಲಾ ತಿರುಗಿ ಬಿದ್ದಮೇಲೆ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ. ನನ್ನ ಮೇಲೂ ಹರಿಹಾಯ್ದಿದ್ದಾರೆ, ಇರಲಿ ಅವರಿಗೂ ನನಗೂ ಇದ್ದಿದ್ದೆ. ನಾನು ಅವರಿಗೆ ಈ ಹಿಂದೆನೆ ಹೇಳಿದ್ದೇನೆ, ನೀನು ಹೇಗಿದ್ರು ಎಂಪಿಯಾಗಿ ಹೋಗೋದಿಲ್ಲ, ಅದು ಬೇರೆ ಮಾತು ಬಿಡಿ. ಈ ಹಿಂದೆಯೇ ನನ್ನ ಬಗ್ಗೆ ಚರ್ಚೆ ಮಾಡೋಕೆ ಟಿವಿಗೆ ಕರೀರಿ ಬರ್ತಿನಿ, ಇಲ್ಲ ವಿಧಾನಸಭೆಯಲ್ಲೇ ಮಾತಾಡೋಣ ಎಂದಿದ್ದೆ. ಯಾಕಂದ್ರೆ ಆಸ್ತಿ ಬಗ್ಗೆ ಮಾತನಾಡುವಾಗ ದಾಖಲೆ ಇರಬೇಕಲ್ಲ ಎಂದರು.

2024 Lok Sabha polls | Karnataka JD(S) chief HD Kumaraswamy meets Amit  Shah, JP Nadda in Delhi, discusses seat sharing for Lok Sabha polls -  Telegraph India

ನಾನ್ಯಾವುದೋ ಹೆಣ್ಮಗಳನ್ನು ಕರ್ಕೊಂಡು ಹೋಗಿ ಆಸ್ತಿ ಬರೆಸಿಕೊಂಡಿದ್ದೇನೆ ಅಂತೆ. ಮಿಸ್ಟರ್‌ ಕುಮಾರಸ್ವಾಮಿ, ಮಿಸ್ಟರ್‌ ಕುಮಾರಸ್ವಾಮಿ, ನೀನು ಲೋಕಸಭಾ ಚುನಾವಣೆ ಗೆಲ್ಲಲ್ಲ. ಹೆದರಿಕೊಂಡು ನಿನ್ನ ಕ್ಷೇತ್ರ ಬಿಟ್ಟು, ಪಕ್ಕದ ಕ್ಷೇತ್ರಕ್ಕೆ ಹೋಗಿದೀಯಾ ಹೋಗು. ನಿಂಗೆ ಹೋಗೋಕೆ ಹಕ್ಕಿದೆ, ಹೋಗಿದೀಯಾ. ಇದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಬನ್ನಿ. ಯಾಕೆಂದ್ರೆ ನಮ್ಮ ಜನರೇಷನ್‌ ನೀನೆಂಥ ಸುಳ್ಳುಗಾರ, ನೀನೆಂಥ ಮೋಸಗಾರ ಎಂಬುದನ್ನು ನೋಡಬೇಕು. ನಿಂದು ಎಷ್ಟಿತ್ತು, ನಿಮ್ಮ ಅಣ್ಣಂದು ಎಷ್ಟಿತ್ತು, ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ. ಬಾ ಅಸೆಂಬ್ಲಿಯಲ್ಲಿ ಮಾತಾಡೋಣ ಎಂದು ಬಹಿರಂಗ ಸವಾಲು ಹಾಕಿದ ಅವರು, ನಾನು ಕಲ್ಲು ಮಾರಿದ್ನೋ, ಕಳ್ಳತನ ಮಾಡಿದ್ನೋ ಎಂಬುದು ಅಸೆಂಬ್ಲಿಯಲ್ಲೇ ತೀರ್ಮಾನ ಆಗಲಿ ಎಂದು ಹೇಳಿದರು.

ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಉಚಿತ ಬಸ್‌ ಹಾಗೂ 2 ಸಾವಿರ ರೂ. ಕೊಡುತ್ತಿದ್ದೇವೆ. ಅದನ್ನು ನೀನು ಹೋಗಿ ಹೆಣ್ಮಕ್ಳು ದಾರಿ ತಪ್ತಿದ್ದಾರೆ ಅಂದ್ರೇ ಏನರ್ಥ. ನಮ್ಮ ಹೆಣ್ಮಕ್ಳೇನು ದಡ್ಡರು ಅನ್ಕೊಂಡಿದೀರಾ ಎಂದು ಪ್ರಶ್ನಿಸಿದರು.

DK Shivakumar slams Kumaraswamy says he wont win, we will discuss how much money you and your brother did, lets discuss that in the assembly he added.