ಬ್ರೇಕಿಂಗ್ ನ್ಯೂಸ್
15-04-24 09:50 pm Bangalore Correspondent ಕರ್ನಾಟಕ
ಬೆಂಗಳೂರು, ಎ.15: ತನ್ನ ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಮುನಿಸಿಕೊಂಡು ಬಂಡಾಯ ಕಣಕ್ಕಿಳಿದಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯ ಘಟಕ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಬಿಎಸ್ ವೈ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಹೇಳುತ್ತಲೇ ಈಶ್ವರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬ್ರಹ್ಮ ಬಂದು ಹೇಳಿದರೂ ನಾಮಪತ್ರ ವಾಪಸ್ ಪಡೆಯಲ್ಲ ಎಂದೂ ಹೇಳಿದ್ದಾರೆ. ಆದರೆ ಈಶ್ವರಪ್ಪ ಸ್ಪರ್ಧೆಯಿಂದಾಗಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರಗೆ ಸಂಕಷ್ಟ ಉಂಟಾಗಿದ್ದು ಬಂಡಾಯ ಸ್ಪರ್ಧೆಯನ್ನು ಹಾಗೇ ಉಳಿಸಿಕೊಂಡರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆಯೆಂದು ನಾಯಕರು ಗಂಭೀರ ಚಿಂತನೆಗೆ ಮುಂದಾಗಿದ್ದಾರೆ.

ಈಶ್ವರಪ್ಪರಿಗೆ ಇತ್ತೀಚೆಗೆ ಪಕ್ಷದ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಶ್ವರಪ್ಪ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬೇಸರದಿಂದ ಬಂದಿದ್ದ ಈಶ್ವರಪ್ಪ, ತಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗ ಈಶ್ವರಪ್ಪ ಮನವೊಲಿಕೆ ಮಾಡುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿದೆ. ಏಪ್ರಿಲ್ 22ರೊಳಗೆ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯದಿದ್ದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಕ್ರಮಕ್ಕೆ ಹೈಕಮಾಂಡ್ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಈಶ್ವರಪ್ಪ ಅವರು ನಾಮಪತ್ರ ವಾಪಸ್ ಪಡೆಯದಿದ್ದರೆ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
BJP State president B.Y. Vijayendra has said the party will take action against former Minister K.S. Eshwarappa, who filed the nomination papers for Shivamogga Lok Sabha constituency as an Independent candidate.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 08:20 pm
Bangalore Correspondent
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm