ಬ್ರೇಕಿಂಗ್ ನ್ಯೂಸ್
16-04-24 10:04 pm Bangalore Correspondent ಕರ್ನಾಟಕ
ಬೆಂಗಳೂರು, ಏಪ್ರಿಲ್ 16: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರರು ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದು, ತಮ್ಮ ಗುರಿ ವೈಟ್ಫೀಲ್ಡ್ನಲ್ಲಿ ಐಟಿ ಕಂಪನಿಯೇ ಆಗಿತ್ತು ಹೇಳಿದ್ದಾರೆ. ಐಟಿ ಕಂಪನಿಗಳಲ್ಲಿ ಹೈ ಸೆಕ್ಯುರಿಟಿ ಇದ್ದುದರಿಂದ ಗುರಿ ಬದಲಾಗಿತ್ತು ಎಂದಿದ್ದಾರೆ.
ವೈಟ್ಫೀಲ್ಡ್ನಲ್ಲಿ ಐಟಿ ಕಂಪನಿಯಲ್ಲಿ ಸ್ಫೋಟಗೊಳಿಸಲು ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಯೋಜಿಸಿದ್ದರು. ವೈಟ್ ಫೀಲ್ಡ್ ಪ್ರದೇಶದಲ್ಲಿ ಸಾಕಷ್ಟು ಐಟಿಬಿಟಿ ಕಂಪನಿಗಳಿದ್ದು ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಇಲ್ಲಿ ಬಾಂಬ್ ಸ್ಫೋಟಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತೆ ಮತ್ತು ಅದರಿಂದ ಐಟಿ ರಾಜಧಾನಿ ಎಂಬ ಹೆಸರಿಗೆ ಕುತ್ತು ಬರುತ್ತೆ ಎಂದು ಯೋಜನೆ ಹಾಕಿದ್ದರು.
ಇದಕ್ಕಾಗಿ ವೈಟ್ಫೀಲ್ಡ್ ಪ್ರದೇಶದಲ್ಲಿ ಹಲವೆಡೆ ಓಡಾಡಿದ್ದ ಇವರು, ಬಾಂಬ್ ಇಡುವುದು ಹೇಗೆಂದು ತಲೆಕೆಡಿಸಿದ್ದರು. ಕಂಪನಿಗಳಲ್ಲಿ ಟೈಟ್ ಸೆಕ್ಯುರಿಟಿ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಇರುವುದರಿಂದ ಒಳಗೆ ಹೋಗುವುದು ಸುಲಭವಲ್ಲವೆಂದು ಅರಿತು ತಮ್ಮ ಯೋಜನೆ ಬದಲಿಸಿದ್ದರು. ಅಷ್ಟರಲ್ಲೇ ರಾಮೇಶ್ವರಂ ಕೆಫೆ ಇವರ ಕಣ್ಣಿಗೆ ಬಿದ್ದಿತ್ತು. ಕೆಫೆಗೆ ಹೆಚ್ಚಾಗಿ ಟೆಕ್ಕಿಗಳು ಬರುತ್ತಿದ್ದುದಲ್ಲದೆ, ಒಳಗಡೆ ಹೋಗುವಾಗ ಚೆಕಿಂಗ್ ಇಲ್ಲವೆಂದು ಯೋಜನೆ ಹಾಕಿದ್ದಾರೆ. ಇದಲ್ಲದೆ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ನಡೆದಿದ್ದಕ್ಕಾಗಿ ಅದೇ ಕೆಫೆಯನ್ನು ಟಾರ್ಗೆಟ್ ಮಾಡಿದ್ದರು.
ಅದರಂತೆ, ಮಾರ್ಚ್ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿ ಪ್ಲಾನ್ ಜಾರಿ ಮಾಡಿದ್ದರು. ಈ ವಿಚಾರವನ್ನು ಇಬ್ಬರು ಆರೋಪಿಗಳು ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾರೆ.
The probe in the Rameshwaram cafe blast case has revealed that the initial plan of the terrorists was to explode a bomb on the premises of an IT park in the tech corridor of Bengaluru city, sources said on Tuesday. The arrested men have also confessed that because of the high security, they could not plant the bomb on the premises of the IT parks.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm