ಮಗುವನ್ನು ಸ್ಕೂಟರಿನ ಫುಟ್ ರೆಸ್ಟಲ್ಲಿ ನಿಲ್ಲಿಸಿಕೊಂಡು ಸವಾರಿ, ಜಾಲತಾಣದಲ್ಲಿ ವಿಡಿಯೋ ವೈರಲ್, ಪೊಲೀಸರಿಗೆ ಟ್ಯಾಗ್

17-04-24 03:54 pm       Bangalore Correspondent   ಕರ್ನಾಟಕ

ಮಗುವನ್ನು ಸ್ಕೂಟರಿನ ಸೈಡ್ ಸ್ಟಾಂಡ್ ಹತ್ತಿರದ ಫುಟ್ ರೆಸ್ಟಲ್ಲಿ ನಿಲ್ಲಿಸಿಕೊಂಡು ಸವಾರಿ ಮಾಡುತ್ತಿರುವ ವಿಡಿಯೋ ಟ್ವಿಟರ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಈ ನಿರ್ಲಕ್ಷ್ಯದ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಎ.17: ಮಗುವನ್ನು ಸ್ಕೂಟರಿನ ಸೈಡ್ ಸ್ಟಾಂಡ್ ಹತ್ತಿರದ ಫುಟ್ ರೆಸ್ಟಲ್ಲಿ ನಿಲ್ಲಿಸಿಕೊಂಡು ಸವಾರಿ ಮಾಡುತ್ತಿರುವ ವಿಡಿಯೋ ಟ್ವಿಟರ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಈ ನಿರ್ಲಕ್ಷ್ಯದ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಟ್ ಫೀಲ್ಡ್ ಏರಿಯಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು, ಸ್ಕೂಟರಿನಲ್ಲಿ ಒಬ್ಬಾತ ಹೆಲ್ಮೆಟ್ ಹಾಕ್ಕೊಂಡು ಸವಾರಿ ಮಾಡುತ್ತಿದ್ದರೆ ಹಿಂದೆ ಮಹಿಳೆಯೊಬ್ಬರು ಹೆಲ್ಮೆಟ್ ಹಾಕದೆ ಕುಳಿತುಕೊಂಡಿದ್ದರು. ಇದಲ್ಲದೆ, ತನ್ನ ಮಗುವನ್ನು ಸ್ಕೂಟರಿನ ಸೈಡ್ ಸ್ಟಾಂಡ್ ಹತ್ತಿರ ಫುಟ್ ರೆಸ್ಟ್ ನಲ್ಲಿ ನಿಲ್ಲಿಸಿಕೊಂಡು ನಿರ್ಲಕ್ಷ್ಯದಿಂದ ಸವಾರಿ ಮಾಡಿದ್ದಾರೆ. ಇದನ್ನು ಹಿಂದಿನಿಂದ ಕಾರಿನಲ್ಲಿ ತೆರಳುತ್ತಿದ್ದವರು ವಿಡಿಯೋ ಮಾಡಿದ್ದಾರೆ.

ರಸ್ತೆ ನಿಯಮ ಪಾಲಿಸದೆ ಮಗುವಿನ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಸಿಟಿ ಪೊಲೀಸ್ ಗೆ ಟ್ಯಾಗ್ ಮಾಡಲಾಗಿದೆ. ಈಡಿಯಟ್ಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹ ಮಾಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ವಿಭಾಗದಿಂದ ವೈಟ್ ಫೀಲ್ಡ್ ಪೊಲೀಸ್ ವೃತ್ತಕ್ಕೆ ಸೂಚನೆ ನೀಡಲಾಗಿದ್ದು, ಸವಾರರ ವಿರುದ್ಧ ಕ್ರಮ ಜರುಗುವ ಸಾಧ್ಯತೆಯಿದೆ.

A video capturing a couple from Bengaluru riding a scooter with their child standing on a footrest beside the woman has sparked outrage online. As the video surfaced on X, Bengaluru Traffic Police reacted to it, while several others criticised the parents for their "reckless" behaviour.