ಬ್ರೇಕಿಂಗ್ ನ್ಯೂಸ್
24-04-24 11:14 pm HK News Desk ಕರ್ನಾಟಕ
ಕಲಬುರಗಿ, ಏ 24: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಅಫ್ಜಜಲ್‍ಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮತ ಹಾಕೋಕೆ ಬರದೇ ಇದ್ದರು ನಾನು ಸತ್ತರೆ ನಮ್ಮ ಕೆಲಸ ನೆನಪು ಮಾಡಿಕೊಂಡು ಮಣ್ಣು ಹಾಕೋಕೆ ಬನ್ನಿ. ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆವಾಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ನನಗೆ ಕಳೆದ ಬಾರಿ ಸೋಲಾಯ್ತು ಆಗಲಿ, ಸೋಲಾದ್ರು ದೊಡ್ಡ ಸ್ಥಾನ ಸಿಕ್ಕಿದೆ. ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತಾ ತಿಳಿದುಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್‍ನವರು ದೇಶಕ್ಕಾಗಿ ಪ್ರಾಣ ಸಹ ಕೊಟ್ಟಿದ್ದಾರೆ. ಇವರ ಮನೆಯಲ್ಲಿ ಒಂದು ಇಲಿ ಸಹ ಸತ್ತಿಲ್ಲ. ಕಾಂಗ್ರೆಸ್ ಸಂವಿಧಾನ ಉಳಿಸುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಮೋದಿ ಅವರು ಸೋಲೆ ಸೋಲುತ್ತಾರೆ. ವಾರಣಾಸಿಯಲ್ಲಿ ಗೆಲ್ಲುವುದಕ್ಕೆ ದಾರಿ ಮಾಡಿಕೊಂಡಿದ್ದಾರೆ. ಅಬ್ ಕೀ ಬಾರ್ 400 ಪಾರ್ ಅಂತಾರೆ. ಆದರೆ ನಾವು 200 ಸಹ ಪಾರ್ ಮಾಡಲ್ಲ. ಅದನ್ನ ನಾವು ತಡೆಯುವುದರಲ್ಲಿ ಎರಡು ಮಾತಿಲ್ಲ ಎಂದರು.
ನಾನು ಹುಟ್ಟಿದೆ ರಾಜಕಾರಣಕ್ಕಾಗಿ ಹೀಗಾಗಿ ಕೊನೆ ಚುನಾವಣೆ ಇಲ್ಲ. ರಿಟೈಡ್ ಆಗುವುದೇ ಇಲ್ಲ ಸಂವಿಧಾನ ಉಳಿಸಲು ತತ್ವ. ಇದನ್ನು ಉಳಿಸಲು ಕೊನೆ ಉಸಿರು ಇರುವವರೆಗೆ ಹೋರಾಟ ನಡೆಸುತ್ತೇವೆ. ನಾಳೆ ಸಿದ್ದರಾಮಯ್ಯ ಸಿಎಂ ಸಾಕು ರಿಟೈಡ್ ಅಂತಾ ಸಹ ಅನ್ನಬಹುದು. ಆದರೆ ತತ್ವ ಸಿದ್ಧಾಂತಗಳಿಗಾಗಿ ಕೊನೆಯುಸಿರು ಇರುವರೆಗೆ ಹೋರಾಟ ನಡೆಸುವುದಾಗಿ ಖರ್ಗೆ ಹೇಳಿದರು.
Seeking to strike an emotional chord with the people of his home district of Kalaburagi, Congress President M Mallikarjun Kharge on Wednesday appealed to them to at least attend his funeral if they thought he worked for them
26-02-25 10:43 pm
Bangalore Correspondent
Yellow alert, heatwave threat, Mangalore: ಬಿಸ...
26-02-25 06:14 pm
Minister Ishwara Khandre, Elephant Sanctuary...
25-02-25 10:30 pm
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
26-02-25 10:15 pm
Mangalore Correspondent
Mangaluru-Kabaka Train, Brijesh Chowta: ಮಂಗಳೂ...
26-02-25 03:40 pm
Urwa Police, Mangalore, Selfie, Suspend: ಸೈಬರ...
25-02-25 10:58 pm
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm