Annamalai, Prajwal Revanna: ಎಸ್ಐಟಿ ಮೊದಲು ಈ ವಿಡಿಯೋಗಳನ್ನೆಲ್ಲ ಬ್ಯಾನ್ ಮಾಡಬೇಕು, ಇದು ಹೆಣ್ಮಕ್ಕಳ ಮರ್ಯಾದೆ ಪ್ರಶ್ನೆ, ಕೇಸ್ ವಿಚಾರದಲ್ಲಿ ರಾಜಕೀಯ ಮಾಡೋದನ್ನು ಬಿಟ್ಟುಬಿಡಿ ; ಅಣ್ಣಾಮಲೈ 

04-05-24 10:13 pm       HK News Desk   ಕರ್ನಾಟಕ

ಇಷ್ಟು ಒಳ್ಳೆಯ ಜನ ಇರುವ ಕರ್ನಾಟಕ ರಾಜ್ಯದಲ್ಲಿ ಈ ರೀತಿ ಘಟನೆ ಆಗಿರುವುದು ನಮಗೂ ನೋವು ತಂದಿದೆ. ಎಸ್ಐಟಿ ತನಿಖೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಬೇಕು.

ಕಲಬುರಗಿ, ಮೇ.4: ಇಷ್ಟು ಒಳ್ಳೆಯ ಜನ ಇರುವ ಕರ್ನಾಟಕ ರಾಜ್ಯದಲ್ಲಿ ಈ ರೀತಿ ಘಟನೆ ಆಗಿರುವುದು ನಮಗೂ ನೋವು ತಂದಿದೆ. ಎಸ್ಐಟಿ ತನಿಖೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಬೇಕು. ತನಿಖೆಗೆ ಮೂರು ತಿಂಗಳ ಸಮಯ ನಿಗದಿಪಡಿಸಿ ಎರಡೇ ತಿಂಗಳಲ್ಲಿ ಮುಗಿಸಬೇಕು. ಇದು ಬಿಟ್ಟು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ‌

ಒಂದು ಕೇಸ್ ಗೆ ಯಾರಾದರೂ ಪ್ರಧಾನಮಂತ್ರಿಗೆ ಪತ್ರ ಬರೀತಾರಾ ? ಈ ತರ ಪತ್ರ ಬರೆದಿದ್ದು ಇಡೀ ಇಂಡಿಯಾದಲ್ಲಿ ನೋಡಿದ್ದೀರಾ ? ದೇಶದ ಎಲ್ಲಾ ಸಂಸದರ ಕೈಯಲ್ಲಿಯೂ ಡಿಪ್ಲಾಮೆಟಿಕ್ ಪಾಸ್ಪೋರ್ಟ್ ಇರುತ್ತೆ. ಸಿಎಂ ಅವರು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡುವುದಿಲ್ಲ.. ಬದಲಾಗಿ ರಾಜಕೀಯ ಮಾಡುತ್ತಿದ್ದಾರೆ ಅಂತ ಜನತೆಗೆ ಗೊತ್ತಾಗಿದೆ. ಎಲ್ಲರಿಗೂ ಕಾನೂನು ಒಂದೇ ಇದೆ, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ. ಇವರು ಮಾಡುತ್ತಿರುವ ರಾಜಕೀಯ ನೋಡಿದರೆ ಸಂತ್ರಸ್ತ ಮಹಿಳೆಯರಿಗೆ ನಿಜವಾಗಿಯೂ ನ್ಯಾಯ ಕೊಡ್ತಾರಾ ? ಅಂತ ನನಗೆ ಅನುಮಾನ ಬರುತ್ತಿದೆ. 

Obscene video case: Court rejects Prajwal Revanna's anticipatory bail plea  | India News - Times of India

ಇದರಲ್ಲಿ ಬಂದಿರುವ ದೂರುಗಳೆಲ್ಲವೂ 2020 - 21ನೇ ಸಾಲಿನವು,ಆಗ ಅವರು ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿದ್ರು. ಕಾಂಗ್ರೆಸ್ ನವರು ಈ ವಿಚಾರದಲ್ಲಿ ರಾಜಕೀಯಕ್ಕೆ ಕೊಟ್ಟ ಗಮನ ಎಸ್ಐಟಿಗೆ ಕೊಟ್ಟಿದ್ದರೆ ಇನ್ನಷ್ಟು ಬೇಗ ತನಿಖೆ ಪೂರ್ಣಗೊಳ್ಳುತ್ತದೆ. ಇದು ತುಂಬಾ ವರ್ಷಗಳ ಹಿಂದಿನದು ನಮಗೆಲ್ಲ ಗೊತ್ತಿತ್ತು ಎಂದು ಪರಮೇಶ್ವರ್ ಹೇಳುತ್ತಾರೆ. ಹಾಗಾದರೆ ಅವರು ಯಾಕೆ ಈ ಮೊದಲೇ ಸೋಮೋಟೋ ಕೇಸ್ ದಾಖಲು ಮಾಡಿಕೊಳ್ಳಲಿಲ್ಲ. 11 ತಿಂಗಳಿಂದಲೂ ಯಾಕೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದೀರಿ ?ಹೆಣ್ಣು ಮಕ್ಕಳು ಬಂದು ಕಂಪ್ಲೆಂಟ್ ಕೊಡುವವರಿಗೆ ಯಾಕೆ ನೀವು ಕಾಯ್ತಿದ್ರಿ? ಹಾಸನ ಮನೆಯಿಂದ ಬೆಂಗಳೂರು ಏರ್ಪೋರ್ಟ್ ವರೆಗೆ ಎಲ್ಲವೂ ನಿಮ್ಮ ಕಂಟ್ರೋಲ್ ನಲ್ಲಿತ್ತು. ಅವರು ಹೋಗುವುದಕ್ಕೆ ಬಿಟ್ಟಿದ್ದೇಕೆ ? ಎಂದು ಪ್ರಶ್ನಿಸಿದ್ದಾರೆ. 

ಎಸ್ಐಟಿ ಮೊದಲು ಈ ವಿಡಿಯೋಗಳನ್ನೆಲ್ಲ ಬ್ಯಾನ್ ಮಾಡಬೇಕು. ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆದೇಶ ಪಡೆದುಕೊಂಡು ವಿಡಿಯೋಗಳನ್ನೆಲ್ಲಾ ಬ್ಯಾನ್ ಮಾಡಬೇಕು. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬ್ಯಾನ್ ಮಾಡಬೇಕು. ಈ ವಿಡಿಯೋ ಯಾರು ಫಾರ್ವರ್ಡ್ ಮಾಡುತ್ತಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದು ಆ ಹೆಣ್ಣು ಮಕ್ಕಳ ಮರ್ಯಾದೆಯ ಪ್ರಶ್ನೆ. 

ಈ ವಿಡಿಯೋಗಳು ಸರ್ಕ್ಯೂಲೇಟ್ ಆಗದಂತೆ ತಡೆಯಬೇಕಿರುವುದು ಎಸ್ಐಟಿಯ ಮೊದಲ ಕರ್ತವ್ಯ.‌ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಆಗಲಿ, ಆದರೆ ಹೆಣ್ಣುಮಕ್ಕಳು ಏನು ತಪ್ಪು ಮಾಡಿದ್ದಾರೆ ? ಆ ವಿಡಿಯೋ ಫಾರ್ವರ್ಡ್ ಆಗುವುದರಿಂದ ಆ ಹೆಣ್ಣು ಮಕ್ಕಳು ಭಯದಲ್ಲಿ ಬೀಳುತ್ತಾರೆ ಎಂದರು.

Annamalai says first must ban the viral videos of Prajwal Revanna as they are the matter of women's life.