ಬ್ರೇಕಿಂಗ್ ನ್ಯೂಸ್
07-05-24 11:27 am HK News Desk ಕರ್ನಾಟಕ
ಮಂಡ್ಯ, ಮೇ 7: ಆರು ತಿಂಗಳ ಹಿಂದೆ ಮಂಡ್ಯದಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಹ ಭ್ರೂಣ ಹತ್ಯೆ ಪ್ರಕರಣ ಬಯಲಿಗೆ ಬಂದಿತ್ತು. ಕರಾಳ ಕೃತ್ಯದ ಛಾಯೆ ಮಾಸುವ ಮುನ್ನವೇ ಮತ್ತೊಂದು ಕರಾಳದಂಧೆ ಮಂಡ್ಯದಲ್ಲಿ ಬಟಾಬಯಲಾಗಿದೆ. ಸರ್ಕಾರಿ ವಸತಿ ನಿಲಯವನ್ನೇ ಅಡ್ಡೆ ಮಾಡಿಕೊಂಡು ಹೆಣ್ಣು ಭ್ರೂಣಗಳನ್ನು ಕತ್ತರಿಸುವ ಕೃತ್ಯ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ನಗರದ ಹೆಲ್ತ್ ಕ್ವಾಟ್ರಸ್ ನಲ್ಲೇ ಕರುಳ ಬಳ್ಳಿಗಳಿಗೆ ಕೊಳ್ಳಿ ಇಡುವ ಕೃತ್ಯ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನಂದ್ ಹಾಗೂ ಡಿ ಗ್ರೂಪ್ ನೌಕರೆ ಅಶ್ವಿನಿ ಎಂಬ ದಂಪತಿ ಸರ್ಕಾರಿ ಹೆಲ್ತ್ ಕ್ವಾಟ್ರಸ್ ನಲ್ಲಿಯೇ ಹೇಯ ಕೃತ್ಯ ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಮೈಸೂರು ಮೂಲದ ಮಹಿಳೆಯೊಬ್ಬಳಿಗೆ ಅಬಾರ್ಷನ್ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಪಾಂಡವಪುರ ಠಾಣೆ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅನಂದ್ ಹಾಗೂ ಅಶ್ವಿನಿ ಇಬ್ಬರು ಕೂಡ ಪಾಂಡವಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಳೆದ 9 ವರ್ಷಗಳಿಂದ ಕೆಲಸ
ಮಾಡುತ್ತಿದ್ದರು. ಐದು ವರ್ಷಗಳಿಂದ ಸರ್ಕಾರಿ ವಸತಿ ನಿಲಯದಲ್ಲಿ ವಾಸವಿದ್ದಾರೆ. ಕಳೆದ ಹಲವು ದಿನಗಳಿಂದ ಇದೇ ರೀತಿ ಕರಾಳ ದಂಧೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ. ನಿರ್ಜನ ಪ್ರದೇಶದ ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ಮಾಡಿ, ಆನಂತರ ಮನೆಗೆ ಕರೆಸಿಕೊಂಡು ಅಬಾರ್ಶನ್ ಮಾಡಿಸುತ್ತಿದ್ದರು. ಭಾನುವಾರ ಸಂಜೆ ಮೈಸೂರಿನ ಮಹಿಳೆಯೊಬ್ಬಳನ್ನ ಕರೆಸಿಕೊಂಡು ಮೊದಲಿಗೆ ಮಾತ್ರೆ ನುಂಗಿಸಿದ್ದಾರೆ. ಆನಂತರ ಕೆಲ ಗಂಟೆಗಳ ನಂತರ ಬರುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಪೊಲೀಸರು ದಾಳಿ ಮಾಡಿದ್ದು ಅಷಾರ್ಷನ್ ಗೆ ಸಿದ್ಧತೆ ನಡೆಸಿದ್ದ ಎಲ್ಲ ವಸ್ತುಗಳನ್ನ ಸೀಜ್ ಮಾಡಿದ್ದಾರೆ. ಹೊರ ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿದ್ದ ಇವರಿಗೆ ಅಬಾರ್ಷನ್ ಬಗ್ಗೆ ಮಾಹಿತಿ ಇತ್ತು. ಬ್ಯಾಕ್ ಸಪೋರ್ಟ್ ಆಗಿ ಕೆಲ ವೈದ್ಯಾಧಿಕಾರಿಗಳು ಸಾಥ್ ನೀಡಿದ್ದರು ಎನ್ನಲಾಗಿದೆ. ವಿಪರ್ಯಾಸ ಎಂದರೇ ಪಾಂಡವಪುರ ಆರೋಗ್ಯ ಇಲಾಖೆ ಟಿಹೆಚ್ ಒ ಕಚೇರಿಯ ಹಿಂಭಾಗದಲ್ಲೇ ಇಂತಹ ಹೇಯ ಕೃತ್ಯ ನಡೆಯುತ್ತಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನ ವಶಕ್ಕೆ ಪಡೆದ್ದಾರೆ.
Even after strict measures taken by the authorities, sex determination tests and foeticide continue to be reported. One such incident came to the fore at Pandavapura taluk, Mandya district, on Monday.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm