ಬ್ರೇಕಿಂಗ್ ನ್ಯೂಸ್
11-05-24 03:19 pm Bengaluru Correspondent ಕರ್ನಾಟಕ
ಬೆಂಗಳೂರು, ಮೇ.11: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದ್ದು, ಆಡಳಿತಾರೂಢ ಕಾಂಗ್ರೆಸಿನಲ್ಲಿ ಅವಕಾಶಕ್ಕಾಗಿ ಒತ್ತಡ, ಲಾಬಿಗಳು ಜೋರಾಗಿವೆ. ಪಕ್ಷದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಸೇರಿ ಪ್ರಮುಖರು ಮೇಲ್ಮನೆ ಸದಸ್ಯತ್ವಕ್ಕಾಗಿ ಪೈಪೋಟಿಗಿಳಿದಿದ್ದಾರೆ.
ಬಿಜೆಪಿಯ ಆರು, ಕಾಂಗ್ರೆಸಿನ ನಾಲ್ಕು ಹಾಗೂ ಜೆಡಿಎಸ್ ನ ಒಬ್ಬ ಸದಸ್ಯ ಸೇರಿ ಒಟ್ಟು 9 ಮೇಲ್ಮನೆ ಸದಸ್ಯರು ಜೂನ್ 12ರಂದು ನಿವೃತ್ತರಾಗಲಿದ್ದಾರೆ. ವಿಧಾನಸಭೆ ಸಂಖ್ಯಾಬಲ ಆಧರಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸಿಗೆ 135 ಸದಸ್ಯ ಬಲ ಇರುವುದರಿಂದ 6 ರಿಂದ 7 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಅವಕಾಶ ಇದೆ. ಇದಕ್ಕಾಗಿ ಜಾತಿ, ಪ್ರದೇಶ ಕೋಟಾದಲ್ಲಿ ಅವಕಾಶಕ್ಕಾಗಿ ಕಾಂಗ್ರೆಸಿನಿಂದ ಹಲವರು ಲಾಬಿ ನಡೆಸಿದ್ದಾರೆ. ಒಂದು ಸ್ಥಾನ ಗೆಲ್ಲಲು 29 ಸದಸ್ಯರ ಮತ ಬೇಕು ಎನ್ನಲಾಗುತ್ತದೆ. ಬಿಜೆಪಿ (66), ಜೆಡಿಎಸ್ (19) ಮತ್ತು ಇತರರು ನಾಲ್ಕು ಸ್ಥಾನ ಇರುವುದರಿಂದ ಎಲ್ಲ ಒಟ್ಟು ಸೇರಿದರೆ ಮೂರು ಸ್ಥಾನ ಗೆಲ್ಲಿಸಿಕೊಳ್ಳಲು ಅವಕಾಶ ಇದೆ. ಹಾಲಿ ಒಂಬತ್ತು ಸದಸ್ಯರಿದ್ದು ಒಟ್ಟು 11 ಸ್ಥಾನಕ್ಕೆ ಆಯ್ಕೆ ಮಾಡಲು ಅವಕಾಶ ಇದೆ. ಜೂನ್ 17ರ ಮೊದಲು ಈ ಸ್ಥಾನಗಳಿಗೆ ಚುನಾವಣೆ ನಡೆದು ಆಯ್ಕೆ ಆಗಬೇಕಾಗುತ್ತದೆ. ಮೊದಲ ಪ್ರಾಶಸ್ತ್ಯ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಎರಡನೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ಸದಸ್ಯರ ಮೇಲೂ ಪ್ರಭಾವ ಬೀರುವುದು ನಡೆಯುತ್ತದೆ.
ಹಾಲಿ ಯಾವೆಲ್ಲ ಸದಸ್ಯರ ಸ್ಥಾನ ಖಾಲಿ
ಹಾಲಿ ಸದಸ್ಯರ ಪೈಕಿ ಕಾಂಗ್ರೆಸಿನ ಅರವಿಂದ ಕುಮಾರ್ ಅರಳಿ, ಎನ್.ಎಸ್. ಬೋಸರಾಜು, ಕೆ.ಗೋವಿಂದ ರಾಜು ಮತ್ತು ಹರೀಶ್ ಕುಮಾರ್, ಬಿಜೆಪಿಯಿಂದ ರಘುನಾಥ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಮುನಿರಾಜು ಗೌಡ ಹಾಗೂ ಜೆಡಿಎಸ್ ನಿಂದ ಬಿ.ಎಂ.ಫಾರೂಕ್ ಇದೇ ಜೂನ್ 17ರಂದು ಸದಸ್ಯತ್ವದಿಂದ ನಿವೃತ್ತರಾಗಲಿದ್ದಾರೆ. ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪಕ್ಷ ತೊರೆದಿರುವ ತೇಜಸ್ವಿನಿ ಗೌಡ ಮತ್ತು ಕೆಪಿ ನಂಜುಂಡಿ ಅವರೂ ಕಾಂಗ್ರೆಸಿನಿಂದ ಮೇಲ್ಮನೆ ಸದಸ್ಯರಾಗಲು ಆಕಾಂಕ್ಷಿಗಳಾಗಿದ್ದಾರೆ.
ರೇಸಿನಲ್ಲಿದ್ದಾರೆ ಪ್ರಭಾವಿಗಳು
ವಿಧಾನಸಭೆ ಚುನಾವಣೆಯಲ್ಲಿ ತಂದೆಗಾಗಿ ತನ್ನ ಕ್ಷೇತ್ರ ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ಈ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆ ಬಯಸಿದ್ದಾರೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶಬಾಬು, ಕೆಪಿಸಿಸಿ ಖಜಾಂಚಿ ವಿನಯ ಕಾರ್ತಿಕ್, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷೆ ಐಶ್ವರ್ಯಾ ಮಹದೇವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಸಿದ್ದರಾಮಯ್ಯ ಆಪ್ತರಾಗಿ ಗುರುತಿಸಿಕೊಂಡಿರುವ ದ್ವಾರಕಾನಾಥ್, ಮಹಿಳಾ ಕಾಂಗ್ರೆಸಿನ ಕಮಲಾಕ್ಷಿ ರಾಜಣ್ಣ, ದಿ. ದೇವರಾಜು ಅರಸು ಮೊಮ್ಮಗ ಹಾಗೂ ಗ್ಯಾರಂಟಿ ಉಸ್ತುವಾರಿ ಪ್ರಾಧಿಕಾರದ ಅಧ್ಯಕ್ಷ ಸೂರಜ್ ಹೆಗ್ಡೆ, ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪಾ ಅಮರನಾಥ್ ಸೇರಿದಂತೆ ಹಲವು ಪ್ರಮುಖರ ಹೆಸರು ಮೇಲ್ಮನೆ ಸದಸ್ಯರಾಗಲು ಲಾಬಿ ನಡೆಸಿದ್ದಾರೆ.
ಮೇಲ್ಮನೆಯ ಹಾಲಿ ಸಭಾ ನಾಯಕ ಎನ್.ಎಸ್.ಬೋಸರಾಜು ಮತ್ತೊಂದು ಅವಧಿಗೆ ಸದಸ್ಯರಾಗುವ ನಿರೀಕ್ಷೆಯಲ್ಲಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಸತತ ಮೂರನೇ ಬಾರಿಗೆ ಸದಸ್ಯತ್ವಕ್ಕೆ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ತೇಜಸ್ವಿನಿ ಗೌಡ, ಕೆಪಿ ನಂಜುಂಡಿ ಅವರೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
Vidhan parishad election Karnataka, nine including BM Farooq ravikumar to get positions by June 17th.
25-02-25 10:30 pm
Bangalore Correspondent
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 10:58 pm
Mangalore Correspondent
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm