ಬ್ರೇಕಿಂಗ್ ನ್ಯೂಸ್
13-05-24 03:02 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 13: 15 ವರ್ಷದ ಬಾಲಕ ಚಲಾಯಿಸಿದ ಕಾರು ಡಿಕ್ಕಿಯಾಗಿ 5 ವರ್ಷದ ಪುಟ್ಟ ಬಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮನೆ ಮುಂದಿದ್ದ ಕಾರನ್ನು 15 ವರ್ಷದ ಬಾಲಕ ಓಡಿಸಿದ್ದಾನೆ. ಈ ವೇಳೆ ಮನೆ ಬಳಿಯೇ ಇದ್ದ ಬೈಕ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ನಂತರ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕನಿಗೆ ಹಾಗೂ ಮತ್ತೋರ್ವ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 5 ವರ್ಷದ ಆರವ್ ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಬಾಲಕ ಗಾಯಗೊಂಡಿದ್ದಾನೆ.
ನಂಜರೆಡ್ಡಿ ಕಾಲೊನಿ ಮೂರನೇ ಅಡ್ಡ ರಸ್ತೆ ನಿವಾಸಿಯಾದ ಪರಶುರಾಮ್ ಎಂಬುವರ ಪುತ್ರ ದೇವರಾಜ್‌ನ ಎಡವಟ್ಟಿನಿಂದ ಈ ದುರ್ಘಟನೆ ನಡೆದಿದ್ದು, ಪೊಲೀಸರು ದೇವರಾಜ್‌ನನ್ನು ಬಂಧಿಸಿದ್ದಾರೆ.
ಪರಶುರಾಮ್ ಅವರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಹೋಗಲು ಸ್ನೇಹಿತರೊಬ್ಬರ ಕಾರು ತೆಗೆದುಕೊಂಡು ಬಂದಿದ್ದರು. ಬೆಳಗ್ಗೆ ದೇವಸ್ಥಾನಕ್ಕೆ ಹೊರಡಲು ಪರಶುರಾಮ್ ಮತ್ತು ಕುಟುಂಬ ಸದಸ್ಯರೆಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ಪರಶುರಾಮ್, ಕಾರು ಸ್ವಚ್ಛಗೊಳಿಸುವಂತೆ ಮಗ ದೇವರಾಜ್‌ಗೆ ಹೇಳಿದ್ದರು. ತಂದೆಯ ಸೂಚನೆಯಂತೆ ದೇವರಾಜ್, ಕಾರು ತೊಳೆದು ವೈಪರ್ ಸ್ವಚ್ಛಗೊಳಿಸುವ ಸಲುವಾಗಿ ಕೀಯಿಂದ ವಾಹನವನ್ನು ಸ್ಟಾರ್ಟ್ ಮಾಡಿದ್ದಾನೆ. ಆಗ ಕಾರು ಏಕಾಏಕಿ ಮುಂದೆ ಚಲಿಸಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಗಾಬರಿಯಾದ ದೇವರಾಜ್, ಕಾರನ್ನು ನಿಲ್ಲಿಸುವ ಯತ್ನದಲ್ಲಿ ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ತುಳಿದಿದ್ದಾನೆ. ಪರಿಣಾಮ ಕಾರು ಮತ್ತಷ್ಟು ವೇಗವಾಗಿ ಚಲಿಸಿ, ಮುಂದೆ ರಸ್ತೆಯಲ್ಲಿ ಆಟವಾಡುತ್ತಿದ್ದ ಆರವ್ ಮತ್ತು ಧನರಾಜ್‌ಗೆ ಡಿಕ್ಕಿ ಹೊಡೆದಿದೆ. ಆ ನಂತರವೂ ದೇವರಾಜ್‌ನ ನಿಯಂತ್ರಣಕ್ಕೆ ಸಿಗದ ಕಾರು ಅಡ್ಡಾದಿಡ್ಡಿ ಚಲಿಸಿ, ರಸ್ತೆ ಬದಿಯಲ್ಲಿನಿಂತಿದ್ದ ಏಳೆಂಟು ಬೈಕ್‌ಗಳು ಹಾಗೂ ಎರಡು ಕಾರುಗಳಿಗೆ ಗುದ್ದಿ ನಿಂತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರು ಗುದ್ದಿದ ರಭಸಕ್ಕೆ ಬಾಲಕ ಆರವ್‌ನ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ಆರವ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸ್ವಲ್ಪ ಸಮಯದಲ್ಲೇ ಆತ ಮೃತಪಟ್ಟಿದ್ದಾನೆ. ಗಾಯಾಳು ಧನರಾಜ್‌ನ ಕಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತ ಸಂಬಂಧ ಆರವ್‌ನ ತಂದೆ ತಾಮರೈ ಕಣ್ಣನ್ ಅವರು ದೂರು ಕೊಟ್ಟಿದ್ದು, ದೇವರಾಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗನ ಎಡವಟ್ಟಿನಿಂದ ಬಾಲಕ ಮೃತಪಟ್ಟ ವಿಚಾರ ತಿಳಿದ ಪರಶುರಾಮ್ ಮಗನನ್ನು ರಕ್ಷಿಸಲು ತಾವೇ ಕಾರು ಚಾಲನೆ ಮಾಡುತ್ತಿದ್ದುದ್ದಾಗಿ ನಾಟಕವಾಡಿದ್ದಾರೆ. ದೇವರಾಜ್‌ನನ್ನು ಮನೆಯಲ್ಲಿಕೂಡಿಟ್ಟು ಬಳಿಕ ತಾವೇ ಕಾರಿನಲ್ಲಿ ಕುಳಿತು ವಾಹನ ಚಾಲನೆ ಮಾಡಿದಂತೆ ನಟಿಸಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿಗಳು, ಪರಶುರಾಮ್ ಕಾರು ಚಾಲನೆ ಮಾಡಲಿಲ್ಲ. ಬದಲಿಗೆ ಅವರ ಮಗ ದೇವರಾಜ್ ಕಾರು ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾದ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಈ ಸುಳಿವು ಆಧರಿಸಿ ಪೊಲೀಸರು ದೇವರಾಜ್‌ನನ್ನು ಬಂಧಿಸಲು ಮುಂದಾದಾಗ ಕುಟುಂಬ ಸದಸ್ಯರು ಅಡ್ಡಿಪಡಿಸಿದ್ದಾರೆ. ಅಲ್ಲದೆ, ಮೃತ ಆರವ್‌ನ ಕುಟುಂಬ ಸದಸ್ಯರು ಹಾಗೂ ಸ್ಥಳೀಯರ ಜತೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಪರಶುರಾಮ್ ಕುಟುಂಬ ಸದಸ್ಯರ ಮನವೊಲಿಸಿ, ದೇವರಾಜ್‌ನನ್ನು ಬಂಧಿಸಿದ್ದಾರೆ.
ಇನ್ನು ಬಾಲಕನಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಪೊಲೀಸ್ ಎಂಬ ಸ್ಟಿಕ್ಕರ್ ಪತ್ತೆಯಾಗಿದೆ. ಕಾರು ಚಲಾಯಿಸಿ, ಬಾಲಕನಿಗೆ ಡಿಕ್ಕಿ ಹೊಡೆದ ಬಾಲಕ ಹೆಡ್ ಕಾನ್ಸ್‌ಸ್ಟೇಬಲ್ ಒಬ್ಬರ ಬಾಮೈದ ಎನ್ನಲಾಗುತ್ತಿದೆ.
ಮೃತ ಬಾಲಕ ಆರವ್ 5 ವರ್ಷದವನಾಗಿದ್ದು, ಯುಕೆಜಿ ಓದುತ್ತಿದ್ದ. ಈತ ಝಾನ್ಸಿ ಹಾಗೂ ತಾಮರೈ ಕಣ್ಣನ್ ಎಂಬುವರ ಮಗ. ತಂದೆ ತಾಮರೈ ಕಣ್ಣನ್ ಡ್ರೈವರ್ ಆಗಿ ಕೆಲ್ಸ ಮಾಡುತ್ತಿದ್ದು, ಈತ ದಂಪತಿಯ ಎರಡನೇ ಮಗನಾಗಿದ್ದ.
ಇನ್ನು ಘಟನೆಯಲ್ಲಿ ಮತ್ತೋರ್ವ ಬಾಲಕ ಧನರಾಜ್ ಎಂಬಾತ ಗಾಯಗೊಂಡು, ಆಸ್ಪತ್ರೆ ಸೇರಿದ್ದಾನೆ. ಈತ ಕೂಡ 5 ವರ್ಷದವನಾಗಿದ್ದು, ಲೋಕೇಶ್ ಎಂಬುವರ ಮಗ. ರಾಯಚೂರು ಮೂಲದ ಲೋಕೇಶ್ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
15 ವರ್ಷದ ಈ ಬಾಲಕ ಮನೆ ಮುಂಭಾಗದಲ್ಲಿ ನಿಲ್ಲಿಸಿದ ಕಾರು ಚಲಾಯಿಸಿದ್ದಾನೆ. ಘಟನೆಯಲ್ಲಿ ಆರು ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದ್ದು, ಬೈಕ್‌ಗಳು ಜಖಂಗೊಂಡಿವೆ. ನಂತರ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ಈ ಕಾರು ರಸ್ತೆ ಬದಿಯಲ್ಲಿ ನಿಂತಿದೆ.
ಇನ್ನು ಈ ಘಟನೆ ಬಗ್ಗೆ ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ಮೃತ ದೇಹ ತರಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Bangalore accident 5 year old boy Dies After minor Accidentally Runs Car Over Him. A five-year-old boy died in a car accident driven by a 15-year-old boy on the Old Airport Road in the Murugesh Palya area in Bengaluru on Sunday. The teenager driving the car collided with bikes that were doing the rounds in the area after which it catapulted and rammed into a child who was playing in the locality.
15-08-25 02:27 pm
Bangalore Correspondent
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm