ಬ್ರೇಕಿಂಗ್ ನ್ಯೂಸ್
18-05-24 08:20 pm Bangalore Correspondent ಕರ್ನಾಟಕ
ಬೆಂಗಳೂರು, ಮೇ.18: ಮೊಬೈಲ್ ಚಟಕ್ಕೆ ಬಿದ್ದಿದ್ದ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಆರೋಪಿಯನ್ನು ಆನೆಕಲ್ ಪಟ್ಟಣದ ನೆರಿಗಾ ಗ್ರಾಮದ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ. 15 ವರ್ಷದ ತಮ್ಮ ಪ್ರಾಣೇಶ್ ಮೊಬೈಲ್ ತೆಗೆದುಕೊಂಡು ದಿನವಿಡೀ ಗೇಮ್ ಆಡಿದ್ದಕ್ಕೆ ಆಕ್ರೋಶಗೊಂಡು ಆತನನ್ನು ಕೊಂದಿರುವುದಾಗಿ ಶಿವಕುಮಾರ್ ಸರ್ಜಾಪುರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಮೇ 15 ರಂದು ಏಳನೇ ತರಗತಿಯ ವಿದ್ಯಾರ್ಥಿ ಪ್ರಾಣೇಶ್ ಶವವಾಗಿ ಪತ್ತೆಯಾಗಿದ್ದ. ಪೋಷಕರು ಮಗನಿಗಾಗಿ ಹುಡುಕಾಟ ಆರಂಭಿಸಿದ ಬಳಿಕ ಶಿವಕುಮಾರ್, ಪ್ರಾಣೇಶ್ ನನ್ನು ಯಾರೋ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಶವ ನೋಡಿರುವುದಾಗಿ ಹೇಳಿದ್ದಾನೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸರ್ಜಾಪುರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು ವಿಚಾರಣೆ ವೇಳೆ ಶಿವಕುಮಾರ್ ಹೇಳಿಕೆ ಬದಲಾಯಿಸಿದ್ದಾನೆ. ಘಟನೆಯಲ್ಲಿ ಆತನ ಕೈವಾಡವಿದೆ ಎಂದು ಶಂಕಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ.
ಶಿವಕುಮಾರ್ ತಮ್ಮನ ತಲೆ ಮತ್ತು ಹೊಟ್ಟೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಶಿವಕುಮಾರ್ ಸುತ್ತಿಗೆಯನ್ನ ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ
ಆಂಧ್ರದ ಕರ್ನೂಲ್ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪ್ರಾಣೇಶ್, ಶಾಲೆಗೆ ಬೇಸಿಗೆ ರಜೆಯಿದ್ದ ಹಿನ್ನೆಲೆ ಬೆಂಗಳೂರಿನ ಮನೆಗೆ ಬಂದಿದ್ದ. ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್ನ ಮೊಬೈಲ್ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್ಗೆ ಕಿರಿಕಿರಿ ಉಂಟು ಮಾಡಿದೆ. ಹೀಗಾಗಿ ಮೇ 15ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪ್ರಾಣೇಶ್ತಲೆ, ಹೊಟ್ಟೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
Bangalore elder brother kills brother for using his mobile phone to play games. The arrested has been identified as Shivakumar.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm