Zip line accident at Jungle Trailz Bangalore: ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಮಹಿಳೆ ಸಾವು ;  ಹಲವು ಬಾರಿ ದೂರು ನೀಡಿದ್ರೂ ನಿರ್ಲಕ್ಷ, ಮ್ಯಾನೇಜರ್ ವಶಕ್ಕೆ 

20-05-24 05:53 pm       HK News Desk   ಕರ್ನಾಟಕ

ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅತ್ತಿಬೆಲೆ ಮೂಲದ ರಂಜನಿ(35)‌ ಮೃತ ದುರ್ದೈವಿ.

ರಾಮನಗರ, ಮೇ.19: ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅತ್ತಿಬೆಲೆ ಮೂಲದ ರಂಜನಿ(35)‌ ಮೃತ ದುರ್ದೈವಿ.

ಭಾನುವಾರ 18 ಜನ ಸ್ನೇಹಿತರ ಜೊತೆ ಜಂಗಲ್ ಟ್ರಯಲ್ಸ್ ರೆಸಾರ್ಟ್ಗೆ ಬಂದಿದ್ದರು. ಬೆಳಿಗ್ಗೆ 11‌ಗಂಟೆಗೆ ತಂತಿಯ ಜಿಪ್ ನಲ್ಲಿ ಕೂತಿದ್ದ‌ ರಂಜನಿ, ಈ ವೇಳೆ ಜಿಪ್ ಲೈನ್ ತುಂಡಾಗಿ ನೆಲಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಾರೆ.

ಇನ್ನು ಮಹಿಳೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ನಡೆಸಿ ಹಸ್ತಾಂತರ ಮಾಡಲಾಗಿದೆ. ಘಟನೆ ಸಂಬಂಧ ರೆಸಾರ್ಟ್ ಮ್ಯಾನೇಜರ್ ಪುಟ್ಟಮಾದು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಜಿಪ್ ಲೈನ್ ಬಗ್ಗೆ ಹಲವು ಬಾರಿ ದೂರು ನೀಡಿದ್ರೂ ರೆಸಾರ್ಟ್ ಮಾಲಿಕ ಮಾತ್ರ ನಿರ್ಲಕ್ಷ್ಯ ತೋರಿದ್ದು, ಈ ಹಿನ್ನೆಲೆ ಮ್ಯಾನೇಜರ್ನನ್ನು ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Zip line accident at Jungle Trailz Bangalore, 35 year old women dies on spot. In a tragic incident, a 35-year-old woman named Ranjini from Attibele died while attempting a zip line activity at a resort in Ramanagara district on Sunday.