ಬ್ರೇಕಿಂಗ್ ನ್ಯೂಸ್
20-05-24 07:03 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20: ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ 24 ಗಂಟೆಯಲ್ಲಿ ಅಥವಾ 48 ಗಂಟೆಯಲ್ಲಿ ವಿದೇಶದಿಂದ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿ ಮನವಿ ಮಾಡಿದರು.
ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರಜ್ವಲ್ ಎಲ್ಲಿದ್ದರೂ ಎಸ್ ಐ ಟಿ ಮುಂದೆ ಹಾಜರಾಗಲು ಮನವಿಯನ್ನು ಮಾಡುವಂತೆ ಎಚ್ ಡಿ ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ. ಏಕೆ ಹೆದರಬೇಕು? ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು. ಎಷ್ಟು ದಿನ ಕಳ್ಳಾ ಪೊಲೀಸ್ ಆಟ? ದೇವೇಗೌಡರ ರಾಜಕೀಯ ಬದುಕನ್ನು ಪ್ರಜ್ವಲ್ ಬೆಳೆಯಲು ಎಲ್ಲಿದ್ದರೂ 48 ಗಂಟೆಯಲ್ಲಿ ವಾಪಸ್ ಬರಲು ಮನವಿ ಮಾಡುತ್ತೇನೆ ಎಂದರು.
ಈ ವಿಚಾರವಾಗಿ ರೇವಣ್ಣ ಬಳಿಯೂ ಹೇಳಿದ್ದೇನೆ. ರೆಡ್ ಕಾರ್ನರ್ ನೋಟಿಸ್ ಕೊಟ್ಟ ಬಳಿಕ ಬರುವುದಕ್ಕೂ ಮೊದಲು ಪ್ರಜ್ವಲ್ ಬಂದು ತನಿಖೆಗೆ ಹಾಜರಾಗಲಿ. ಪ್ರಜ್ವಲ್ ಫೋನ್ ಕೂಡಾ ನಿಗಮದಲ್ಲಿದೆ. 45 ಜನರ ಫೋನ್ ಟಾಪಿಂಗ್ ಆಗ್ತಿದೆ. ಯಾರೋ ಮಾಡಿದ ತಪ್ಪಿಗೆ ಕುಟುಂಬ ಸರ್ವ ನಾಶ ಮಾಡುವುದು ಎಷ್ಟರ ಮಟ್ಡಿಗೆ ಸರಿ? ಪ್ರಜ್ವಲ್ ಕಾರ್ತಿಕ್ ಏನು ಒಳಗಡೆ ಮಾಡಿದ್ದಾರೋ ಸತ್ಯ ಹೊರಗಡೆ ಬರಲಿ. ಈ ವಿಷಯ ಗೊತ್ತಿದ್ದರೆ ವಿದೇಶಕ್ಕೆ ಹೋಗಲು ಬಿಡುತ್ತಿರಲಿಲ್ಲ.ವಕೀಲರ ಸಲಹೆಯ ಮೇಲೆ ಏನೋನೋ ಮಾಡ್ತಾರೆ'' ಎಂದರು.
ಒಂದು ವಾರ ಸಮಯ ಕೇಳಿದಾಗ ಎಸ್ ಐ ಟಿ ಅವಕಾಶ ಕೊಡಬಹುದಿತ್ತಲ್ವಾ? ನಾನು ಪದ್ಮನಾಭನಗರಕ್ಕೆ ಪ್ರಜ್ವಲ್ ರಕ್ಷಣೆಯ ಬಗ್ಗೆ ಚರ್ಚೆ ಮಾಡಲು ಹೋಗ್ತಿಲ್ಲ.ತಂದೆ ತಾಯಿಯ ನೋವಿನ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯ ತುಂಬಲು ಹೋಗ್ತಿದ್ದೇನೆ. ಎಲ್ಲೇ ಇದ್ದರೂ ತಕ್ಷಣವೇ ಎಸ್ ಐ ಟಿ ತನಿಖೆಗೆ ಸಹಕಾರ ಕೊಡಲು ದೇವೇಗೌಡರು ಮನವಿ ಮಾಡಬೇಕು ಎಂದು ಕೇಳಿದ್ದೇನೆ. ಇದರಿಂದ ನಮ್ಮ ಕುಟುಂಬದ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು. ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಜ್ಯಸಭೆಗೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ನಾನೇ ತಡೆದಿದ್ದೆ'' ಎಂದರು.
ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಡಿಕೆಶಿ ಪಾತ್ರ ಇದರಲ್ಲಿ ಇದೆ. ವಿಡಿಯೋದ ಅಸಲಿಯತ್ತು ತನಿಖೆಯಿಂದ ಹೊರ ಬರಬೇಕು. ಸಂತ್ರಸ್ತ ಮಹಿಳೆಯರು ಮಾನಸೀಕವಾಗಿ ಕುಗ್ಗಬೇಡಿ. ಪ್ರಜ್ವಲ್ ನಿಂದ ತಪ್ಪಾಗಿದ್ದರೆ ದಯವಿಟ್ಟು ಅಂಜಬೇಡಿ. ನಾವು ಮನುಷತ್ವ ಇಲ್ಲದ ಜನ ಅಲ್ಲ'' ಎಂದರು.
ಡಿಕೆ ಶಿವಕುಮಾರ್ ಈ ರೀತಿಯ ರಾಜಕೀಯ ಮಾಡಬೇಕಾ? ನಾನು ಯಾವುದೇ ರಕ್ಷಣಾತ್ಮಕ ಆಟ ಆಡುತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾತಿಗೆ ಬದ್ಧನಾಗಿದ್ದೇನೆ. ಆದರೆ ಪ್ರಕರಣದ ಮತ್ತೊಂದು ಆಯಾಮದ ಬಗ್ಗೆ ಚರ್ಚೆ ಆಗಬೇಕು'' ಎಂದರು.
ಕಾಂಗ್ರೆಸ್ ನಿಂದ ನಮ್ಗೆ ಫೋನ್ ಟ್ಯಾಪ್ ಕಾಟ ;
ನನ್ನ ಮತ್ತು ನಮ್ಮ ಕುಟುಂಬದವರ ಫೋನ್ ಟ್ಯಾಪ್ ಮಾಡ್ತಿದ್ದಾರೆ. ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಆರೋಪಿಸಿದರು. ನನ್ನ ಸುತ್ತ ಇರುವ 45 ಜನರ ಮೊಬೈಲ್ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ ಎಂದರು.
ಶಿವರಾಮೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿಕೊಂಡು ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿರುವ ಆಡಿಯೊ ತುಣುಕು ಬಹಿರಂಗವಾಗಿದೆ. ಶಿವಕುಮಾರ್ ಪಾತ್ರ ಇರುವುದು ಸ್ಪಷ್ಟವಾಗಿ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಆ ಆಡಿಯೊ ಮತ್ತು ವಿಡಿಯೊ ಅಸಲಿಯತ್ತು ಹೊರ ಬರಬೇಕು’ ಎಂದು ಆಗ್ರಹಿಸಿದರು.
Kumaraswamy requests prajwal to Return to India, says about Congress tapping phone. Kumaraswamy on Monday made a public appeal to the party’s Hassan MP Prajwal Revanna to return to India and face investigation in the alleged sexual abuse case. He also said that Congress is tapping his and 40 other close aides phone.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am