ಬ್ರೇಕಿಂಗ್ ನ್ಯೂಸ್
22-05-24 11:17 pm Bangalore Correspondent ಕರ್ನಾಟಕ
ಬೆಂಗಳೂರು, ಮೇ.22: ಮಳೆಗಾಲ ನಿರ್ವಹಣೆಗೆ ಎಲ್ಲ ರೀತಿಯಲ್ಲೂ ಸಜ್ಜಾಗಿರಬೇಕು. ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿರುವುದು ಕಂಡು ಬಂದರೆ ಸಂಬಂಧಪಟ್ಟ ಎಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನಗರದಲ್ಲಿ ಜೋರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಡಿಸಿಎಂ, ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, '' ಜೂನ್‌ನಿಂದ ಮುಂಗಾರು ಆರಂಭವಾಗಲಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗುವ ಮುನ್ಸೂಚನೆ ಇದೆ. ಹೀಗಾಗಿ, ಚುನಾವಣಾ ಆಯೋಗದಿಂದ ಅನುಮತಿ ಪಡೆದು ಸಿಟಿ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ,'' ಎಂದರು.



ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಒಣ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು, ರೆಂಬೆ-ಕೊಂಬೆಗಳನ್ನು ಅನಾಹುತ ಸಂಭವಿಸುವುದಕ್ಕೆ ಮುನ್ನವೇ ತೆರವುಗೊಳಿಸಬೇಕು. ಪಾದಚಾರಿ ಮಾರ್ಗಗಳ ದುರಸ್ತಿ, ಕಾಲುವೆಗಳಲ್ಲಿಹೂಳು ತೆರವು ಕೈಗೊಂಡು, ಕಾಲುವೆಗಳಿಗೆ ಕಸ ಹಾಕುವುದನ್ನು ತಡೆಯಬೇಕು. ಮೆಟ್ರೊ, ಮೇಲ್ಸೇತುವೆ ಕಾಮಗಾರಿಗಳ ಸ್ಥಳದಲ್ಲಿಬಿದ್ದಿರುವ ಅವಶೇಷಗಳನ್ನು ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ,'' ಎಂದು ಹೇಳಿದರು.
ಗಾಳಿ ಆಂಜನೇಯ ದೇವಸ್ಥಾನ ಬಳಿಯ ರಾಜಕಾಲುವೆಯಲ್ಲಿಮಳೆ ಬಂದಾಗ ಪ್ರವಾಹ ಉಂಟಾಗುವುದನ್ನು ತಡೆಯಲು 11.50 ಕೋಟಿ ರೂ. ವೆಚ್ಚದಲ್ಲಿರೂಪಿಸಿರುವ ಸಮಾನಾಂತರ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ರಾಜಕಾಲುವೆಗೆ ಜನರು ಕಸ ಎಸೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಅಮಾನತು ಮಾಡಬೇಕಾಗುತ್ತದೆ,'' ಎಂದು ಮುಖ್ಯ ಎಂಜಿನಿಯರ್‌ಗೆ ಸಿಎಂ ಎಚ್ಚರಿಕೆ ನೀಡಿದರು.
With the onset of monsoon and the heavy rains during the last few days causing problems in some parts of the city, Chief Minister Siddaramaiah along with Deputy Chief Minister D K Shivakumar took a round of inspection in different wards and also the review the progress of various ongoing works.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
14-05-26 10:48 pm
HK News Staffer
ರಿಯಲ್ ಎಸ್ಟೇಟ್ ಉದ್ಯಮಿ, ‘ಲ್ಯಾನ್ಸಿ ಕನ್ಸ್ಟ್ರಕ್ಷನ...
14-05-26 05:39 pm
ಮಂಗಳೂರಿನಲ್ಲೂ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಜಾರಿ...
13-05-26 11:02 pm
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm