ಬ್ರೇಕಿಂಗ್ ನ್ಯೂಸ್
24-05-24 09:14 pm HK News Desk ಕರ್ನಾಟಕ
ಹುಬ್ಬಳ್ಳಿ, ಮೇ.24: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರೋಪಿಯ ಬಾಯಿಬಿಡಿಸಿದ್ದು ಕೊಲೆ ಹಿನ್ನೆಲೆ ಬಗ್ಗೆ ತಿಳಿದುಕೊಂಡಿದ್ದಾರೆ.
ಆರೋಪಿ ಗಿರೀಶ್ ಕೇವಲ ಒಂದು ಸಾವಿರ ರೂಪಾಯಿಗಾಗಿ ಕೊಲೆ ಮಾಡಿದ್ದಾಗಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಂಜಲಿ ಮತ್ತು ಗಿರೀಶ್ ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಗಿರೀಶ್ ಮೈಸೂರಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಪರಸ್ಪರ ಸಂಪರ್ಕದಲ್ಲಿದ್ದರು. ಮೇ 17ರಂದು ರಾತ್ರಿ ಅಂಜಲಿ, ಫೋನ್ ಮಾಡಿ ಒಂದು ಸಾವಿರ ರೂಪಾಯಿ ಪೊನ್ ಪೇ ಮಾಡಿಸಿಕೊಂಡಿದ್ದಳು. ಹಣವನ್ನು ಪೊನ್ ಪೇ ಮಾಡಿಸಿಕೊಂಡು ಗಿರೀಶ್ ನಂಬರ್ ಬ್ಲಾಕ್ ಮಾಡಿದ್ದಳು ಎಂಬ ಮಾಹಿತಿ ತನಿಖೆಯಲ್ಲಿ ಸಿಕ್ಕಿದೆ. ಇದರಿಂದ ಸಿಟ್ಟಿಗೆದ್ದ ಗಿರೀಶ್ ಮೈಸೂರಿನಿಂದ ಹುಬ್ಬಳ್ಳಿಗೆ ಬಂದಿದ್ದು ಪ್ರೀತಿಸುತ್ತಿದ್ದಾಕೆಯ ಮೇಲಿನ ದ್ವೇಷದಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ರಾತ್ರೋರಾತ್ರಿ ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ನಸುಕಿನ ಜಾವ ಮನೆಗೆ ನುಗ್ಗಿ ಅಂಜಲಿಯನ್ನು ಕೊಲೆ ಮಾಡಿದ್ದ.
ಸಿಐಡಿ ಅಧಿಕಾರಿಗಳ ಮುಂದೆ ಈ ವಿಚಾರವನ್ನು ಗಿರೀಶ್ ಹೇಳಿಕೊಂಡಿದ್ದು ಕೇವಲ ಒಂದು ಸಾವಿರ ರೂಪಾಯಿಗಾಗಿ ಅಂಜಲಿ ಜೀವ ತೆಗೆದ್ನಾ ಎನ್ನುವ ಸಂಶಯ ಮೂಡಿದೆ. ಯಾವ ಕಾರಣಕ್ಕೆ ಹಣ ಹಾಕಿಸಿಕೊಂಡಿದ್ದಳು, ಅವರ ನಡುವಿನ ವ್ಯವಹಾರ ಏನಿತ್ತು, ಮನಸ್ತಾಪ ಕಾರಣಕ್ಕೆ ಫೋನ್ ಬ್ಲಾಕ್ ಮಾಡಿದ್ದಳೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂಜಲಿ ಕೊಲೆಯಾಗಿ ಹತ್ತು ದಿನ ಕಳೆದರೂ ಪೊಲೀಸರಿಗೆ ಇನ್ನೂ ಕೊಲೆಗೆ ಬಳಸಿದ್ದ ಚಾಕು ಪತ್ತೆಯಾಗಿಲ್ಲ. ಹತ್ಯೆಯಾದ ಸ್ಥಳದ ಬಳಿ ಸುತ್ತಮುತ್ತ ಇಂಚಿಂಚು ಹುಡುಕಾಡಿದರೂ ಚಾಕು ಸಿಗದೇ ಇರುವುದರಿಂದ ಪೊಲೀಸರಿಗೆ ತಲೆನೋವಾಗಿದೆ. ಸ್ಥಳೀಯ ಪೊಲೀಸರು ಸೇರಿದಂತೆ ಸಿಐಡಿ ಅಧಿಕಾರಿಗಳು ಕೊಲೆ ನಡೆದ ಸ್ಥಳದಿಂದ ಚರಂಡಿ ಸೇರಿ ರಸ್ತೆ ಆಸುಪಾಸಿನಲ್ಲಿ ಹುಡುಕಾಟ ಮಾಡಿದರೂ ಚಾಕು ಪತ್ತೆಯಾಗಿಲ್ಲ. ಚಾಕುವನ್ನು ಎಲ್ಲಿ ಎಸೆದಿದ್ದೇನೆ ಎಂಬ ಬಗ್ಗೆ ಆರೋಪಿ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ.
Hubballi Anjali murder case, Accused killed her over thousand rupees, shocking details revealed
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm