CT Ravi, BJP: ಸಿಟಿ ರವಿ, ಎನ್. ರವಿಕುಮಾರ್, ಎಂ.ಜಿ. ಮುಳೆಗೆ ಪರಿಷತ್ ಟಿಕೆಟ್ ಘೋಷಣೆ ; ದೆಹಲಿಯಲ್ಲಿ ಲಾಬಿ ನಡೆಸಿದ್ದ ನಳಿನ್, ಸುಮಲತಾಗೆ ಟಿಕೆಟ್ ಮಿಸ್ ! 

02-06-24 01:19 pm       Bangalore Correspondent   ಕರ್ನಾಟಕ

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 13ರಂದು ನಡೆಯುವ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಹಾಲಿ ಸದಸ್ಯ ಎನ್.ರವಿಕುಮಾರ್ ಹಾಗೂ ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮುಳೆ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಬೆಂಗಳೂರು, ಜೂನ್ 2: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್ 13ರಂದು ನಡೆಯುವ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಹಾಲಿ ಸದಸ್ಯ ಎನ್.ರವಿಕುಮಾರ್ ಹಾಗೂ ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮುಳೆ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. 

ಬಿಜೆಪಿಯಿಂದ ಆಯ್ಕೆಗೊಳ್ಳುವ ಮೂರು ಸ್ಥಾನಗಳಿಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ವಿಧಾನಸಭೆಯಲ್ಲಿ ಸೋಲು ಕಂಡವರು, ಸಂಸತ್ ಟಿಕೆಟ್ ವಂಚಿತರು ಪರಿಷತ್ತಿಗೆ ಆಯ್ಕೆಗೊಳ್ಳಲು ಕಸರತ್ತು ನಡೆಸಿದ್ದರು. ಸಂಸದ ನಳಿನ್ ಕುಮಾರ್, ಮಂಡ್ಯ ಸಂಸದೆ ಸುಮಲತಾ, ಸಿಟಿ ರವಿ, ಜೆಸಿ ಮಾಧುಸ್ವಾಮಿ ಸೇರಿದಂತೆ ಹಲವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದರು. 15ಕ್ಕೂ ಹೆಚ್ಚು ಹೆಸರುಗಳನ್ನು ರಾಜ್ಯ ಘಟಕದಿಂದ ಕೇಂದ್ರಕ್ಕೆ ಕಳಿಸಿಕೊಡಲಾಗಿತ್ತು. 

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಸುಮಲತಾ ಅವರಿಗೆ ಪರಿಷತ್ ಸ್ಥಾನ ಸಿಗಬಹುದೆಂದು ಊಹಿಸಲಾಗಿತ್ತು. ಪರಿಷತ್ತಿನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ‌ಬಿಜೆಪಿಯಿಂದ ವಿಧಾನಸಭೆ ಸದಸ್ಯ ಲೆಕ್ಕಾಚಾರದಲ್ಲಿ ಮೂರು ಸ್ಥಾನಗಳನ್ನಷ್ಟೆ ಗೆಲ್ಲಲು ಸಾಧ್ಯವಿದೆ.‌ ಬಿಜೆಪಿಗೆ 66 ಸದಸ್ಯ ಬಲ ಇರುವುದರಿಂದ ಮೂವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಒಂದು ಸ್ಥಾನ ಗೆಲ್ಲಲು 19 ಸದಸ್ಯರ ಮತಗಳ ಅಗತ್ಯವಿದೆ. 

ಮಂಡ್ಯದಲ್ಲಿ ಟಿಕೆಟ್ ವಂಚಿತೆಯಾಗಿದ್ದ ಸುಮಲತಾ ಮತ್ತು ದಕ್ಷಿಣ ಕನ್ನಡದಲ್ಲಿ ಟಿಕೆಟ್ ಕಳಕೊಂಡಿದ್ದ ನಳಿನ್ ಕುಮಾರ್ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಪಕ್ಷದ ವಲಯದಲ್ಲಿ ಸುಮಲತಾಗೆ ಟಿಕೆಟ್ ಸಿಗಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ ಕೊನೆಕ್ಷಣದಲ್ಲಿ ಸಿಟಿ ರವಿ ಜೊತೆಗೆ ಬೆಳಗಾವಿ ಮೂಲದ ಎಂ.ಜಿ. ಮುಳೆ ಲಕ್ ಹೊಡೆದಿದ್ದಾರೆ.

The Bharatiya Janata Party (BJP) nominated three members for the upcoming Karnataka Legislative Council elections on Sunday (2 June). Former Minister in the Yediyurappa government, C T Ravi, incumbent MLC N Ravikumar and former MLA M G Mule, a Maratha are the chosen ones.