Lok Sabha Election 2024 Results, DK Suresh, Dr CN Manjunath; ಬೆಂಗಳೂರು ಗ್ರಾಮಾಂತರ ; ಡಿಕೆಶಿಗೆ ಶಾಕ್, ಸಿ.ಎನ್ ಮಂಜುನಾಥ್ 58 ಸಾವಿರ ಮತಗಳ ಮುನ್ನಡೆ, ಕಾಗೇರಿ 45 ಸಾವಿರ ಮುನ್ನಡೆ, ಬಳ್ಳಾರಿ- ಕಲಬುರಗಿ ಕಾಂಗ್ರೆಸ್, ಮಂಡ್ಯ ಎಚ್ಡಿಕೆ ಮುನ್ನಡೆ

04-06-24 09:42 am       Bengaluru Correspondent   ಕರ್ನಾಟಕ

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ  12,485 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ 29 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

ಬೆಂಗಳೂರು, ಜೂನ್ 4: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ  12,485 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. 

  • ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ 29 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 
  • ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ 58 ಸಾವಿರ ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಭಾರೀ ಹಿನ್ನಡೆ ಗಳಿಸಿದ್ದಾರೆ. 
  • ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ 12 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 
  • ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 21 ಸಾವಿರ ಮತಗಳಿಂದ ಮುನ್ನಡೆ ಗಳಿಸಿದ್ದಾರೆ. 
  • ತುಮಕೂರಿನಲ್ಲಿ ವಿ.ಸೋಮಣ್ಣ 4 ಸಾವಿರ ಮತಗಳ ಮುನ್ನಡೆ 
  • ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ 24 ಸಾವಿರ ಮತಗಳಿಂದ ಮುನ್ನಡೆ 
  • ಮಂಡ್ಯದಲ್ಲಿ 38 ಸಾವಿರ ಮತಗಳಿಂದ ಎಚ್ಡಿಕೆ ಮುನ್ನಡೆ ಸಾಧಿಸಿದ್ದಾರೆ. 
  • ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ - ಮನ್ಸೂರ್ ಅಲಿ ಖಾನ್ ಡೈರೆಕ್ಟ್ ಫೈಟ್ ಇದೆ, ಮೋಹನ್ ಮುನ್ನಡೆ ಕೇವಲ 452 ಇದೆ. 
  • ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ 27 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 
  • ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 45 ಸಾವಿರ ಮತಗಳಿಂದ ಮುನ್ನಡೆ 
  • ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ 12 ಸಾವಿರ ಮತಗಳಿಂದ ಮುನ್ನಡೆ 

ಸದ್ಯಕ್ಕೆ ದೇಶದಲ್ಲಿ 543 ಕ್ಷೇತ್ರಗಳ ಪೈಕಿ ಎನ್ ಡಿಎ ಕೂಟವು 290, ಇಂಡಿಯಾ ಒಕ್ಕೂಟ 207 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಚ್ಚರಿ ಎನ್ನುವಂತೆ, ಕಾಂಗ್ರೆಸ್ ಒಕ್ಕೂಟ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.

DK Suresh Vs BJP Dr CN Manjunath, Manjunath leads by 45 thousnad vote in the first round