ಬ್ರೇಕಿಂಗ್ ನ್ಯೂಸ್
15-06-24 03:39 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 15: ಸಾಮಾನ್ಯವಾಗಿ ಕೊಲೆಯಾಗಲೀ, ಏನೇ ಕ್ರೈಮ್ ಆಗಲೀ ಅದರ ಹಿಂದೆ ಹೈಪ್ರೊಫೈಲ್ ಯಾರೇ ಇದ್ದರೂ ಅವರನ್ನು ಪೊಲೀಸರು ಟಟ್ ಮಾಡೋದಕ್ಕೂ ಹೋಗಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳಂತೂ ಅಪರಾಧ ಪ್ರಕರಣದಲ್ಲಿ ಸಿಕ್ಕಿಬೀಳೋದು ಭಾರೀ ಕಡಿಮೆ. ಪರೋಕ್ಷ ಶಾಮೀಲಾತಿ ಇದ್ದರೂ, ನೇರವಾಗಿ ಭಾಗಿಯಾದವರನ್ನು ಮಾತ್ರ ಬಂಧಿಸಿ ಹಿಂದಿರೋರನ್ನು ಪತ್ತೆ ಮಾಡದೇ ಕೇಸುಗಳನ್ನು ಪೊಲೀಸರೇ ಮುಚ್ಚಿ ಹಾಕುತ್ತಾರೆ. ಅಂಥದ್ರಲ್ಲಿ ಕನ್ನಡದ ಖ್ಯಾತ ಚಿತ್ರನಟರೊಬ್ಬರನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿರುವುದು ಜನಮಾನಸದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆ ಅರೆಸ್ಟ್ ಮಾಡಿದ್ರು, ಸರ್ಕಾರಕ್ಕೂ ಆತನಿಗೂ ಏನು ಹಕೀಕತ್ತು ಇತ್ತು ಎನ್ನುವ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.
ಇದರ ನಡುವೆ, ಇಬ್ಬರು ಪೊಲೀಸ್ ಅಧಿಕಾರಿಗಳ ರಫ್ ಅಂಡ್ ಟಫ್ ನಡೆ, ಅವರಿಂದಾಗಿಯೇ ನಟ ದರ್ಶನ್ ಮತ್ತು ಡಿ ಗ್ಯಾಂಗ್ ಸಿಕ್ಕಿಬಿದ್ದಿರೋದು ಅನ್ನುವ ಬಗ್ಗೆಯೂ ಸುದ್ದಿಯಾಗಿದೆ. ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮತ್ತು ಎಸಿಪಿ ಚಂದನ್ ಯಾವುದೇ ಒತ್ತಡಕ್ಕೂ ಮಣಿಯದೇ ಕರ್ತವ್ಯ ನಿರ್ವಹಿಸಿ ಖದೀಮರ ಗ್ಯಾಂಗ್ ಅನ್ನು ಸದ್ದಿಲ್ಲದೆ ಎತ್ತಾಕಿದ್ದು ಅನ್ನೋ ವಿಚಾರವೂ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಆದರೆ ಪೊಲೀಸರು ಎಷ್ಟೇ ದಕ್ಷರಿದ್ದರೂ, ಮೇಲೆ ಆಡಳಿತದಲ್ಲಿ ಕೂತವರ ಕೃಪೆಯೂ ಅಧಿಕಾರಿಗಳ ಮೇಲಿರಬೇಕಾಗುತ್ತದೆ. ಈ ಪ್ರರಣದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗೆ ವಿಚಾರ ತಿಳಿದಾಗ, ಕಾನೂನು ಏನು ಹೇಳುತ್ತೋ ಹಾಗೆ ಮಾಡಿ ಎಂದು ಹೇಳಿ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದೇ ಸಿನಿಮಾ ಇಂಡಸ್ಟ್ರಿಯೊಳಗೆ ಬೀಡು ಬಿಟ್ಟಿದ್ದ ಡಿ ಗ್ಯಾಂಗ್ ಕರಾಮತ್ತನ್ನು ಕಟ್ಟಿ ಹಾಕುವಂತಾಗಿದೆ. ಇದೇ ಕಾರಣಕ್ಕೆ ಡಿಸಿಪಿ ಗಿರೀಶ್ ಮತ್ತು ಎಸಿಪಿ ಚಂದನ್ ಅವರ ಕಾರ್ಯ ವೈಖರಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
ಸಿಸಿಟಿವಿಯೇ ಕೊಟ್ಟಿತ್ತು ಸುಳಿವು
ಜೂನ್ 9ರ ಭಾನುವಾರ ಬೆಳಗ್ಗೆ 8 ಗಂಟೆಗೆ ಕಾಮಾಕ್ಷಿಪಾಳ್ಯದ ಸುಮನಹಳ್ಳಿ ಬಳಿಯ ರಸ್ತೆ ಚರಂಡಿಯಲ್ಲಿ ರೇಣುಕಾ ಸ್ವಾಮಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲನೆಯಲ್ಲಿ ಎರಡು ಸ್ಕಾರ್ಪಿಯೋ ಕಾರುಗಳ ಮೇಲೆ ಅನುಮಾನ ಬಂದಿತ್ತು. ಕಪ್ಪು ಮತ್ತು ಬಿಳಿ ಬಣ್ಣದ ಸ್ಕಾರ್ಪಿಯೋ ಜಾಡು ಹಿಡಿದು ಹೋದ ಪೊಲೀಸರಿಗೆ ಸಿಸಿ ಟಿವಿ ಪರಿಶೀಲನೆ ವೇಳೆ ಆ ಕಾರುಗಳೆರಡು ಆರ್.ಆರ್ ನಗರದ ಪಟ್ಟಣಗೆರೆ ಶೆಡ್‌ಗೆ ಹೋಗಿರುವುದು ಗೊತ್ತಾಗಿತ್ತು. ವಾಹನದ ನಂಬರ್ ಚೆಕ್ ಮಾಡಿದಾಗ ಕಾರುಗಳು ಪ್ರದೋಷ್ ಮತ್ತು ಪುನೀತ್ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಅವರಿಬ್ಬರ ಫೋನ್ ಕರೆ ಮಾಹಿತಿ ತೆಗೆದಾಗ ಪ್ರದೋಷ್ ಜೊತೆ ದರ್ಶನ್ ಆಪ್ತ ನಾಗ ಮಾತುಕತೆ ನಡೆಸಿದ್ದು ಗೊತ್ತಾಗಿತ್ತು. ಪದೇ ಪದೇ ಕರೆ ಮಾಡಿರುವುದು ತಿಳಿಯುತ್ತಿದ್ದಂತೆ ಸೋಮವಾರ ಮಧ್ಯಾಹ್ನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಮೂವರು ಬಂದು ಶರಣಾಗಿದ್ದು ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿತ್ತು.
ಮೂವರ ಶರಣಾಗತಿಯಿಂದ್ಲೇ ಸಿಕ್ತು ಟ್ವಿಸ್ಟ್
ಅಪರಾಧ ಚಟುವಟಿಕೆ ಹಿನ್ನೆಲೆಯಿದ್ದ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವ ಹಾಗೂ ನಿಖಿಲ್ ಎಂಬವರು ಪೊಲೀಸರಿಗೆ ಶರಣಾಗಿದ್ದರು. ಹಣಕಾಸು ವಿಚಾರಕ್ಕೆ ನಾವೇ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಗೆ ನೀಡಿದ್ದರು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಗಳು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರಿಗೂ ಚಿತ್ರದುರ್ಗಕ್ಕೂ ಏನು ಸಂಬಂಧ? ಏನಿದು ಹಣಕಾಸು ಗಲಾಟೆ ಎಂದು ತಲೆಕೆಡಿಸಿಕೊಂಡ ಪೊಲೀಸರು ಮೂವರನ್ನು ಪ್ರತ್ಯೇಕ ಕರೆದು ವಿಚಾರಣೆ ಆರಂಭಿಸಿದ್ದರು. ಈ ವೇಳೆ ಮೂವರ ಹೇಳಿಕೆಗಳು ಒಂದಕ್ಕೊಂದು ತಾಳೆ ಆಗದಿರುವುದನ್ನು ಕಂಡ ಪೊಲೀಸರು ಮೂವರ ಕರೆ ಡಿಟೇಲ್ ತೆಗೆಯಲು ಮುಂದಾದರು. ಕಾಲ್ ಲಿಸ್ಟ್ ನಲ್ಲಿ ಪ್ರದೋಷ್ ಹಾಗೂ ದರ್ಶನ್ ಆಪ್ತ ನಾಗನ ಜೊತೆ ಇವರು ಮಾತನಾಡಿದ್ದು ಗೊತ್ತಾಗುತ್ತದೆ.
ಇಬ್ಬರು ಸ್ಕಾರ್ಪಿಯೋ ಕಾರು ಮಾಲೀಕರ ಜೊತೆಗೂ ದರ್ಶನ್ ಆಪ್ತ ನಾಗ ಮಾತನಾಡಿದ್ದಾನೆ. ಅಷ್ಟೇ ಅಲ್ಲದೇ ಶರಣಾದ ಇಬ್ಬರು ಆರೋಪಿಗಳ ಜೊತೆಗೂ ನಾಗ ಮಾತನಾಡಿದ್ದು ಖಚಿತವಾಗುತ್ತಿದ್ದಂತೆ ಪೊಲೀಸರು ತಮ್ಮ ಎಂದಿನ ತಮ್ಮ ಶೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸತ್ಯ ಹೇಳಿಕೊಂಡಿದ್ದಲ್ಲದೆ, ದರ್ಶನ್ ಮತ್ತು ಪವಿತ್ರಾ ಗೌಡ ಹೆಸರನ್ನು ಹೇಳಿದ್ದಾರೆ. ದರ್ಶನ್ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಶಾಕ್ ಆದರೂ ಯಾವುದೇ ತೀರ್ಮಾನಕ್ಕೆ ಬಾರದೇ ಖಾಕಿ ತಂಡ ತನಿಖೆ ಮುಂದುವರಿಸಿತ್ತು.
ದರ್ಶನ್ ಪಾತ್ರ ಬಯಲಾಗುತ್ತಿದ್ದಂತೆ ಪೊಲೀಸರು ಮತ್ತಷ್ಟು ಆಳಕ್ಕೆ ಇಳಿದು ತನಿಖೆ ಚುರುಕುಗೊಳಿಸಿದರು. ತಕ್ಷಣಕ್ಕೆ ದರ್ಶನ್ ಬಂಧನ ಮಾಡಬೇಕಾ ಎಂದು ಪೊಲೀಸರು ಗೊಂದಲಕ್ಕೆ ಬಿದ್ದರು. ಹೇಳಿ ಕೇಳಿ ದರ್ಶನ್ ದೊಡ್ಡ ನಟ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಬಂಧನ ಮಾಡಬೇಕಾದರೆ ಬಲವಾದ ಸಾಕ್ಷ್ಯಗಳು ಬೇಕು. ಹೀಗಾಗಿ ಆತುರಕ್ಕೆ ಒಳಗಾಗದೆ ಸಾಕ್ಷ್ಯ ಕಲೆ ಹಾಕಲು ಮುಂದಾದರು. ಪ್ರದೋಷ್, ನಾಗ, ದೀಪಕ್ ಮೇಲೆ ಖಾಕಿ ಕಣ್ಣಿಟ್ಟಿತ್ತು. ಟವರ್ ಲೊಕೇಷನ್ ಆಧರಿಸಿ ಚಲನವಲನ ಪತ್ತೆ ಮಾಡಿ ಸೋಮವಾರ ರಾತ್ರಿ ಪೊಲೀಸರು ಫೀಲ್ಡ್‌ಗೆ ಇಳಿದಿದ್ದರು. ಬಿಡದಿ ಬಳಿಯ ಮೈಸೂರು ಟೋಲ್ ಹತ್ತಿರ ಮೂವರನ್ನು ಸೆರೆಹಿಡಿದು ವಿಚಾರಣೆ ನಡೆಸಿದಾಗ, ದರ್ಶನ್, ಪವಿತ್ರಾ ಗೌಡ ಹೆಸರನ್ನು ಬಾಯಿಬಿಟ್ಟಿದ್ದರು. ಬಂಧಿತರೆಲ್ಲ ಇಬ್ಬರ ಹೆಸರನ್ನು ಹೇಳುತ್ತಿದ್ದಂತೆ ಡಿಸಿಪಿ ಗಿರೀಶ್ ಅವರು ಪ್ರಕರಣದ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಸೂಚನೆ ಸಿಗುತ್ತಲೇ ನಡುರಾತ್ರಿಯಲ್ಲೇ ಆಪರೇಷನ್ ಶುರು ಮಾಡಿದ್ದರು.
ಮೈಸೂರಿಗೆ ತೆರಳಿದ್ದ ಎಸಿಪಿ ಅಂಡ್ ಟೀಮ್
ವಿಚಾರಣೆ ವೇಳೆ ಆರೋಪಿಗಳು, ದರ್ಶನ್ ಮೈಸೂರಿನಲ್ಲಿದ್ದಾರೆ ಎಂದು ತಿಳಿಸಿದ್ದರು. ಶೂಟಿಂಗ್ ನಿಮಿತ್ತ ಮೈಸೂರಿಗೆ ತೆರಳಿದ್ದ ದರ್ಶನ್ ರ‍್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ತಂಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಎಸಿಪಿ ಚಂದನ್, ಭರತ್ ರೆಡ್ಡಿ, ಇನ್ಸ್ ಪೆಕ್ಟರ್ ಗಿರೀಶ್ ನಾಯಕ್ ಅವರಿದ್ದ ತಂಡ ಮಂಗಳವಾರ ಬೆಳಗ್ಗೆ 6 ಗಂಟೆಗೆ ಮೈಸೂರಿಗೆ ತಲುಪಿತ್ತು. ಬೆಳಗ್ಗೆ 6:30ಕ್ಕೆ ಹೊಟೇಲಿನಿಂದ ಹೊರಬಂದ ದರ್ಶನ್ ಸಮೀಪದಲ್ಲೇ ಇದ್ದ ಜಿಮ್‌ಗೆ ವರ್ಕೌಟ್ ಮಾಡಲು ತೆರಳಿದ್ದರು. ಈ ವೇಳೆ ಇಬ್ಬರು ಪೇದೆಗಳು ದರ್ಶನ್ ಮತ್ತು ತಂಡವನ್ನು ಹಿಂಬಾಲಿಸಿದ್ದರು. ಬೆಳಗ್ಗೆ 8.30ಕ್ಕೆ ಜಿಮ್‌ನಿಂದ ಹೊಟೇಲ್ ರೂಂಗೆ ದರ್ಶನ್ ವಾಪಸ್ ಆಗಿದ್ದಾರೆ. ತನ್ನ ಆಪ್ತರು ಪೊಲೀಸ್ ಬಲೆಗೆ ಬಿದ್ದ ವಿಚಾರ ಅದಾಗಲೇ ದರ್ಶನ್‌ಗೆ ಗೊತ್ತಾಗಿತ್ತು. ಅಷ್ಟರಲ್ಲೇ ರಾಜ್ಯದ ಇಬ್ಬರು ರಾಜಕಾರಣಿಗಳು ದರ್ಶನ್ ರಕ್ಷಣೆಗೆ ಮುಂದಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಲಾರಂಭಿಸಿದ್ದರು. ಆದರೆ ಯಾವುದಕ್ಕೂ ಕೇರ್ ಮಾಡದೇ ಕರ್ತವ್ಯ ಮೊದಲು ಎಂಬ ತೀರ್ಮಾನಕ್ಕೆ ಡಿಸಿಪಿ ಗಿರೀಶ್ ಬಂದಿದ್ದರು.
ಇಷ್ಟಕ್ಕೂ ಅರೆಸ್ಟ್ ಆಗಿದ್ದು ಹೇಗೆ?
ಬೆಳಗ್ಗೆ 8.30ಕ್ಕೆ ಪೊಲೀಸರು ಹೊಟೇಲ್ ರೂಂ ಬೆಲ್ ಮಾಡಿದ್ದಾರೆ. ಪೊಲೀಸರನ್ನು ನೋಡುತ್ತಲೇ ದರ್ಶನ್ ಶಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿಮ್ಮ ಪಾತ್ರ ಇರುವುದು ಗೊತ್ತಾಗಿದೆ. ಬನ್ನಿ ಹೋಗೋಣ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಒಪ್ಪದ ದರ್ಶನ್ ಸ್ನಾನ ಮಾಡಿ ಬರುತ್ತೇನೆ ಎಂದಿದ್ದಾರೆ. ಸ್ನಾನಕ್ಕೆಲ್ಲ ವ್ಯವಸ್ಥೆ ನಾವು ಮಾಡುತ್ತೇವೆ ಬನ್ನಿ ಎಂದು ಪೊಲೀಸರು ಹೇಳಿದ್ದಕ್ಕೆ ದರ್ಶನ್, ನಾನು ನನ್ನ ಕಾರಿನಲ್ಲೇ ಬರುತ್ತೇನೆ ಎಂದಿದ್ದಾರೆ. ಇದಕ್ಕೆ ಒಪ್ಪದ ಪೊಲೀಸರು, ಆಗುವುದಿಲ್ಲ ನಮ್ಮ ಜೀಪಿನಲ್ಲೇ ಬನ್ನಿ. ಜೀಪ್ ಹತ್ತಿ ಎಂದು ತಾಕೀತು ಮಾಡಿದ್ದಾರೆ. ಪೊಲೀಸರ ಖಡಕ್ ಸೂಚನೆಗೆ ಮರು ಮಾತನಾಡದೇ ದರ್ಶನ್ ಬೊಲೆರೋ ಜೀಪು ಹತ್ತಿದ್ದಾರೆ. ಇತ್ತ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಇನ್ನೊಂದು ಕಡೆಯಲ್ಲಿ ಆರ್‌ಆರ್ ನಗರದಲ್ಲಿದ್ದ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಪ್ರಭಾವಕ್ಕೆ ಒಳಗಾಗದೇ ಎಲ್ಲಾ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ದರ್ಶನ್ ಮತ್ತು ಗ್ಯಾಂಗ್ ಸದಸ್ಯರನ್ನು ಬಂಧಿಸಿದ ಡಿಸಿಪಿ ಗಿರೀಶ್ ನೇತೃತ್ವದ ತಂಡದ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Powerful police officers behind arrest of Actor Darshan in Murder case was DCP Girish Naik and ACP Chandan Kumar. If there was no entry of DCP Girish it was very easy for Darhan to escape from the cruel murder of Renukaswamy brutally in Bangalore. One of the key accused in the Renukaswamy murder case, in which actor Darshan and his friend Pavithra Gowda have been arrested, has reportedly confessed to the crime and is reportedly prepared to become an approver. If this comes through, it will pose a big setback for Darshan
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am