ಪೆಟ್ರೋಲ್, ಡೀಸೆಲ್‌ ತೆರಿಗೆ ಏರಿಕೆ ; ಜನಸಾಮಾನ್ಯರಿಗೆ ದಿಢೀರ್ ಶಾಕ್, ಪೆಟ್ರೋಲ್ 3, ಡೀಸೆಲ್ 3.5 ರೂ. ಹೆಚ್ಚಳ, ಗ್ಯಾರಂಟಿ ಯೋಜನೆಗೆ ಸರಿದೂಗಿಸಿದ ರಾಜ್ಯ ಸರ್ಕಾರ ! 

15-06-24 06:04 pm       Bangalore Correspondent   ಕರ್ನಾಟಕ

ರಾಜ್ಯದ ಕಾಂಗ್ರೆಸ್ ಸರ್ಕಾರ ದಿಢೀರ್ ಎನ್ನುವಂತೆ ಪೆಟ್ರೋಲ್ ಹಾಗೂ ಡೀಸೆಲ್‌ ದರವನ್ನು ಏಕಾಏಕಿ ಏರಿಸಿದ್ದು ವಾಹನ ಸವಾರರಿಗೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಿದ್ದು ಇದರ ಬೆನ್ನಲ್ಲೇ ರಾಜ್ಯಾದ್ಯಂತ ತೈಲ ದರ ಏರಿಕೆಯಾಗಿದೆ. 

ಬೆಂಗಳೂರು, ಜೂನ್ 15: ರಾಜ್ಯದ ಕಾಂಗ್ರೆಸ್ ಸರ್ಕಾರ ದಿಢೀರ್ ಎನ್ನುವಂತೆ ಪೆಟ್ರೋಲ್ ಹಾಗೂ ಡೀಸೆಲ್‌ ದರವನ್ನು ಏಕಾಏಕಿ ಏರಿಸಿದ್ದು ವಾಹನ ಸವಾರರಿಗೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಿದ್ದು ಇದರ ಬೆನ್ನಲ್ಲೇ ರಾಜ್ಯಾದ್ಯಂತ ತೈಲ ದರ ಏರಿಕೆಯಾಗಿದೆ. 

ತೆರಿಗೆಯನ್ನು ಹೆಚ್ಚಿಸಿದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್ ಮೇಲೆ 25.92 ಶೇ. ಇದ್ದದ್ದು, ಈಗ 29.84 ಶೇ. ಗೆ ಏರಿಕೆ (3.9% ಹೆಚ್ಚಳ) ಮಾಡಲಾಗಿದೆ. ಡಿಸೇಲ್ ಮೇಲೆ ಈ‌ ಹಿಂದೆ ಇದ್ದ 14.34 ಶೇ. ತೆರಿಗೆಯನ್ನು ಈಗ 18.44%ಗೆ ಏರಿಕೆ ಮಾಡಿದೆ (4.1% ರಷ್ಟು ಏರಿಕೆ). ಇದರಿಂದ ಪೆಟ್ರೋಲ್, ಡೀಸೆಲ್ ಮೇಲೆ ಅದೇ ಪ್ರಕಾರದಲ್ಲಿ ದರವೂ ಹೆಚ್ಚಳವಾಗಿದೆ. 

ಪೆಟ್ರೋಲ್‌ ದರ ಬೆಂಗಳೂರಿನಲ್ಲಿ 99.54 ರೂ. ಇದ್ದು, ಮುಂದೆ 102 ರೂ.ಗೆ ಏರಿಕೆಯಾಗಲಿದೆ. ಡೀಸೆಲ್‌ ದರ 85.93 ರೂ. ಇರುವುದು 89.43 ರೂ.ಗೆ ಏರಿಕೆಯಾಗಲಿದೆ. 

ಗ್ಯಾರಂಟಿ ಯೋಜನೆಯ ಅನುಷ್ಠಾನದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ರಾಜ್ಯ ಸರ್ಕಾರ ಆರ್ಥಿಕ‌ ಸ್ಥಿತಿ ಸರಿದೂಗಿಸಲು ತೈಲ ದರಕ್ಕೆ ಬರೆ ಹಾಕಿದೆ ಎನ್ನಲಾಗುತ್ತಿದೆ.

The Congress government of the state has suddenly raised the prices of petrol and diesel, giving a shock to the motorists. Excise duty on petrol and diesel has been increased, followed by an increase in oil prices across the state.