ಬ್ರೇಕಿಂಗ್ ನ್ಯೂಸ್
17-06-24 07:47 pm Bangalore Correspondent ಕರ್ನಾಟಕ
ಬೆಂಗಳೂರು, ಜೂ 17: ಕೊಲೆ ಕೇಸ್ ವಿಚಾರಣೆ ವೇಳೆ ನಟ ದರ್ಶನ್ ಪೊಲೀಸ್ರ ಕಾಲಿಗೆ ಬಿದ್ದಿದ್ದಾರಂತೆ. ಸಿಕ್ಕ ಸಾಕ್ಷಿಗಳ ಮುಂದಿಟ್ಟು ದರ್ಶನ್ಗೆ ತನಿಖಾಧಿಕಾರಿಗಳ ಪ್ರಶ್ನೆ ಮಾಡುತ್ತಿದ್ರು. ಜಾಸ್ತಿ ಪ್ರಶ್ನೆ ಕೇಳ್ತಿದ್ದಂತೆ ದರ್ಶನ್ ಕಾಲಿಗೆ ಬಿದ್ದಿದ್ದಾರೆ. ನನ್ನದು ತಪ್ಪಾಗಿದೆ, ದಯವಿಟ್ಟು ಏನೂ ಕೇಳ್ಬೇಡಿ ಸರ್, ಕೈ ಮುಗಿತೀನಿ ಬಿಟ್ಬಿಡಿ, ನಂಗೆ ಗೂತ್ತಿರೋದನ್ನೆಲ್ಲಾ ಹೇಳಿದ್ದೀನಿ ಸರ್ . ಮತ್ತೆ ಏನೇನೋ ಕೇಳಬೇಡಿ ಎಂದು ಮನವಿ ಮಾಡಿದ್ದು, ದರ್ಶನ್ ಮಾತಿಗೆ ಮಣಿಯದ ಪೊಲೀಸ್ರು ನಾನ್ ಸ್ಟಾಪ್ ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನೇ ಕೇಳಿದ್ರು ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರ ಕೊಡುತ್ತಿದ್ದರು. ದರ್ಶನ್ ಪೊಲೀಸರಿಗೆ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಸೈಲಂಟ್ ಆಗಿದ್ದಾರಂತೆ ‘ಸರ್ ನನ್ನ ಬಿಟ್ಟು ಬಿಡಿ’ ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಸ್ಟಾರ್ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಈ ಕಾರಣಕ್ಕೆ ದರ್ಶನ್ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗೆ ಇತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಹೀಗಾಗಿ, ತಮ್ಮ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್ ಸ್ಟೈಲ್‌ನಲ್ಲಿ ಪ್ರಶ್ನೆ ಮಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. ‘ಸರ್ ನಿಮಗೆ ಕೈ ಮುಗಿದು ಕೇಳಿಕೊಳ್ತೇನೆ ನನ್ನ ಬಿಟ್ಟು ಬಿಡಿ’ ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ
ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ದರ್ಶನ್ನಿಂದ ದೂರವೇ ಇದ್ದಾರೆ. ಇನ್ನು ಕೆಲವು ಆಪ್ತರು ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರೂ ಬಂದಿಲ್ಲ.
Murder case, actor Darshan falls to Police feet pleads to leave him says sources. As the investigating officer was asking him many questions with proof it is said that he has fallen to thier feet to just leave him.
26-02-25 10:43 pm
Bangalore Correspondent
Yellow alert, heatwave threat, Mangalore: ಬಿಸ...
26-02-25 06:14 pm
Minister Ishwara Khandre, Elephant Sanctuary...
25-02-25 10:30 pm
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
26-02-25 10:15 pm
Mangalore Correspondent
Mangaluru-Kabaka Train, Brijesh Chowta: ಮಂಗಳೂ...
26-02-25 03:40 pm
Urwa Police, Mangalore, Selfie, Suspend: ಸೈಬರ...
25-02-25 10:58 pm
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm