Actor Darshan Murder case, House demolish: ಪೊಲೀಸ್ ಕಸ್ಟಡಿಯಲ್ಲಿರೋ ಡಿ ಗ್ಯಾಂಗ್ ಬಾಸ್ ದರ್ಶನ್‌ಗೆ ಮತ್ತೆ ಸಂಕಷ್ಟ ; ಮನೆ ಡೆಮಾಲಿಷ್ ಗೆ ಡಿಕೆಶಿ ಆದೇಶ, ಯಾರೇ ತಡೆಯಾಜ್ಞೆ ತಂದಿದ್ರು ಮನೆ ಬಿಳಿಸೋದು ಪಕ್ಕಾ..! 

18-06-24 07:22 pm       Bangalore Correspondent   ಕರ್ನಾಟಕ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ತನಿಖೆ ಜಟಿಲವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಂಗಳೂರು, ಜೂ 18: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ತನಿಖೆ ಜಟಿಲವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಡಿಕೆ ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ. ಹೀಗಾಗಿ, ನಟ ದರ್ಶನ್‌ ಮತ್ತೊಂದು ಸಂಕಷ್ಟ ಎದುರಾಗಿದ್ದು, ರಾಜಕಾಲು ಒತ್ತುವರಿ ಹಿನ್ನೆಲೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ತೆರವು ಮಾಡ್ತಾರೆ ಎನ್ನಲಾಗಿದೆ.

ದರ್ಶನ್ ಸೇರಿದಂತೆ ಅನೇಕರು ರಾಜಕಾಲುವೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದಿರುವ ಪ್ರಕರಣಗಳ ಬಗ್ಗೆ ಮಂಗಳವಾರ ಡಿಕೆ ಶಿವಕುಮಾರ್‌ ಉತ್ತರ ನೀಡಿದರು. ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡ್ತೀವಿ. ನೀನು ಸ್ಟೇ ತಂದಿದ್ರು ತೆರವು ಮಾಡ್ತೀವಿ, ನಾನು ಸ್ಟೇ ತಂದಿದ್ರು ತೆರವು ಮಾಡೋದು ಪಕ್ಕಾ ಎಂದು ಪಂಚ್ ಹೊಡೆದಿದ್ದಾರೆ. 

ಈ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಸಣ್ಣವರು, ದೊಡ್ಡವರು ಅಂತಾ ನೋಡಲ್ಲ ತೆರವು ಮಾಡುತ್ತೇವೆ. ಸ್ಟೇ ಇತ್ತು ನಾವು ವೆಕೆಟ್ ಮಾಡಿರಲಿಲ್ಲ. ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡುತ್ತೇವೆ. ಎಷ್ಟು ಸ್ಟೇ ತೆರವು ಆಗುತ್ತೋ ನೋಡುತ್ತೇವೆ. ಎಲ್ಲೆಲ್ಲಿ ಸ್ಟೇ ಇರುವ ಪ್ರಕರಣಗಳು ಇವೆ ಅಲ್ಲೆಲ್ಲಾ ತೆರವು ಕಾರ್ಯ ಮಾಡುತ್ತೇವೆ. ಎಷ್ಟು ಬೇಗ ಕೋರ್ಟ್ ನಲ್ಲಿ ಸ್ಟೇ ತೆರವಾಗುತ್ತೆ ನೋಡುತ್ತೇವೆ, ನಂತರ ಕ್ರಮ ವಹಿಸುತ್ತೇವೆ ಎಂದರು.

BBMP to demolish Actor Darshan house in R R Nagar over land encroachment says DK Shivakumar. A preliminary check on the status to know what happened to clearing encroachment of buffer zone by Darshan’s residence and others found that the stay is still existing in the High Court (HC). The BBMP in the next working day will move the court to vacate the stay.”