Murder case, Darshan in police station life: ಕೈಯೇ ದಿಂಬು, ಲಾಕಪ್​ನಲ್ಲೇ ಚೊಂಬು, ಬೆಳಗ್ಗೆ 6 ಗಂಟೆಗೆ ಎದ್ದೇಳು, ಇಡ್ಲಿ - ವಡೆ ತಿನ್ನು ; ದಾಸ ದರ್ಶನ್ ಗೆ ಠಾಣೆಯಲ್ಲಿ ಸೆಲೆಬ್ರಿಟಿ ಲೈಫು ! 

19-06-24 05:34 pm       Bangalore Correspondent   ಕರ್ನಾಟಕ

ರೇಣುಕಾಸ್ವಾಮಿ ಹತ್ಯೆ ಸಂಬಂಧ ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ನಟ ದರ್ಶನ್ ನ ಸೆಲೆಬ್ರಿಟಿ ಜೀವನ ಈಗ ಪೊಲೀಸ್ ಠಾಣೆಯಲ್ಲಿ ಹೇಗಿದೆ ಗೊತ್ತ ? ಸೆಲೆಬ್ರಿಟಿ ಜೀವನ ನಡೆಸುತ್ತಿದ್ದ ದಾಸ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಕೊಲೆ ಮಾಡಿ ಸಿಕ್ಕಿಬಿದ್ದು, ಇದೀಗ ಪಶ್ಚಾತ್ತಾಪ ಪಡುವಂತಾಗಿದೆ.

ಬೆಂಗಳೂರು, ಜೂ 19: ರೇಣುಕಾಸ್ವಾಮಿ ಹತ್ಯೆ ಸಂಬಂಧ ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ನಟ ದರ್ಶನ್ ನ ಸೆಲೆಬ್ರಿಟಿ ಜೀವನ ಈಗ ಪೊಲೀಸ್ ಠಾಣೆಯಲ್ಲಿ ಹೇಗಿದೆ ಗೊತ್ತ ? ಸೆಲೆಬ್ರಿಟಿ ಜೀವನ ನಡೆಸುತ್ತಿದ್ದ ದಾಸ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಕೊಲೆ ಮಾಡಿ ಸಿಕ್ಕಿಬಿದ್ದು, ಇದೀಗ ಪಶ್ಚಾತ್ತಾಪ ಪಡುವಂತಾಗಿದೆ. ಸ್ಟೇಷನ್​ನಲ್ಲೇ ಮಲಗಿ, ಎದ್ದು, ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ. ಸದ್ಯ ದರ್ಶನ್​ ಜೀವನ ಶೈಲಿ ಎಲ್ಲರನ್ನ ಅಚ್ಚರಿಗೆ ದೂಡುವಂತೆ ಮಾಡಿದೆ.

ಇಷ್ಟ ಬಂದಾಗ ನಿದ್ದೆ, ಇಷ್ಟ ಬಂದಂಗೆ ಓಡಾಟ. ಸಿನಿಮಗಳಿಗಾಗಿ ಬಾಡಿ ಬಿಲ್ಡಿಂಗ್, ಜಿಮ್ ಗೆ ಹೋಗಿ ಬರುತ್ತಿದ್ದರು. ಇಷ್ಟೇ ಅಲ್ಲದೆ, ಸ್ನಾನಕ್ಕೆ ಐಷಾರಾಮಿ ಟಬ್ ಬಳಸುತ್ತಿದ್ದು. ತರಹೇವಾರಿ ತಿಂಡಿ ಸವಿಯುತ್ತಿದ್ರು. ಇದರ ಜೊತೆ ಜೊತೆಗೆ ದರ್ಶನ್ ಗಾಗಿ ಸ್ನೇಹಿತರು, ಅಭಿಮಾನಿಗಳು ಮನೆ ಮುಂದೆ ಕಾದಿರುತ್ತಿದ್ದರು. ಮಧ್ಯಾಹ್ನಕ್ಕೆ ಶುರುವಾಗುತ್ತಿದ್ದ ಪಾರ್ಟಿ, ತಡ ರಾತ್ರಿವರೆಗೂ ಮುಗಿತಿರಲಿಲ್ಲ ,  ಬಿಂದಾಸ್ ಲೈಫ್, ಮಲಗೋದಕ್ಕೆ ಕಿಂಗ್ ಸೈಜ್ ಬೆಡ್ ಇಷ್ಟೆಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದ ನಟನಿಗೆ ಇದೀಗ ಪೊಲೀಸ್​ ಠಾಣೆಯಲ್ಲಿ ದಿನ ದೂಡುವಂತಾಗಿದೆ

ಬೆಳಗ್ಗೆ 6 ಗಂಟೆಗೆ ಎದ್ದೇಳಬೇಕು. ಠಾಣೆಯ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಜಿಮ್ ಇಲ್ಲ, ಪ್ರತಿ ದಿನ ಸ್ನಾನ ಇಲ್ಲ. ಇಡ್ಲಿ ವಡೆ ತಿನ್ಬೇಕು. ನೆಲದ ಮೇಲೆ ಕೊರಬೇಕು.
ಇನ್ನು ಮಧ್ಯಾಹ್ನ ಅನ್ನ ಸಾಂಬರ್ ಸವಿಯಬೇಕು. ರಾತ್ರಿಗೂ ಅದೇ ಅನ್ನ ಸಾಂಬಾರು. ದಿಂಬಿಲ್ಲದ ಹಾಸಿಗೆಯಲ್ಲಿ ಮಲಗುವಂತ ಪರಿಸ್ಥಿತಿ ಸದ್ಯ ದರ್ಶನ್​ ದು.

 ಠಾಣೆಗೆ ಓಡಿ ಬಂದ ವಿಜಯಲಕ್ಷ್ಮಿ ; 

ದರ್ಶನ್​ ಅರೆಸ್ಟ್​ ಆದ ಇದೇ ಮೊದಲ ಬಾರಿಗೆ ಪತ್ನಿ ವಿಜಯಲಕ್ಷ್ಮೀ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಬಂದಿದ್ದಾರೆ. 

ಹತ್ಯೆಯಾದ ರೇಣುಕಾಸ್ವಾಮಿ ಅವರನ್ನು ಭೇಟಿಯಾದ ಸಂದರ್ಭ ನಟ ದರ್ಶನ್ ಧರಿಸಿದ್ದ ಶೂ ಅನ್ನು ವಿಜಯಲಕ್ಷ್ಮೀ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಿದ್ದರಿಂದ, ವಿಜಯಲಕ್ಷ್ಮೀ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಆಗಮಿಸಿದ್ದಾರೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಭೇಟಿಯಾದಾಗ ನಟ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಜೂನ್ 16ರಂದು ಆರ್.ಆರ್ ನಗರದ ದರ್ಶನ್ ಅವರ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಶೂ ಪತ್ತೆಯಾಗಿರಲಿಲ್ಲ. 'ಶೂ ಮತ್ತು ಇತರ ಕೆಲ ಬೆಲೆಬಾಳುವ ವಸ್ತುಗಳನ್ನು ವಿಜಯಲಕ್ಷ್ಮೀ ಅವರ ಮನೆಗೆ ಕೊಟ್ಟಿರುವುದಾಗಿ' ದರ್ಶನ್ ಅವರ ಕಾಸ್ಟ್ಯೂಮ್ ಅಸಿಸ್ಟೆಂಟ್ ಪೊಲೀಸರಿಗೆ ತಿಳಿಸಿದ್ದ. ಅದರ ಅನ್ವಯ ಅದೇ ದಿನ ಬನಶಂಕರಿಯ 3ನೇ ಹಂತದಲ್ಲಿರುವ ವಿಜಯಲಕ್ಷ್ಮೀ ಅವರ ಅಪಾರ್ಟ್‌ಮೆಂಟ್​ ಬಳಿ ತೆರಳಿದ್ದ ಪೊಲೀಸರು ಶೂ ಅನ್ನು ವಶಕ್ಕೆ ಪಡೆದಿದ್ದರು.

ಅದೇ ವಿಚಾರವಾಗಿ ವಿಜಯಲಕ್ಷ್ಮೀ ಅವರ ಹೇಳಿಕೆ ಅಗತ್ಯ ಇರುವುದರಿಂದ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರನ್ವಯ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವಿಜಯಲಕ್ಷ್ಮೀ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Murder case, how's Darshan life in the annapoorneshwari police station in Bangalore. Seventeen people, led by actors Pavithra Gowda and Darshan Thoogudeepa, conspired to murder Renuka Swamy - the 33-year-old man who allegedly sent obscene text messages to the latter and, days later, was found dead in Karnataka's Bengaluru, police said in a remand copy.