Pranavanandasree Agraha, BK Hariprasad: ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಬೇಡ ; ಹರಿಪ್ರಸಾದ್ ಗೆ ಸಿಎಂ ಹುದ್ದೆ ಕೊಡಿ, ಇಲ್ಲಾಂದ್ರೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಕೊಡಿ ; ಹಿಂದುಳಿದ ವರ್ಗಕ್ಕೆ ನ್ಯಾಯ ನೀಡಿ, ಪ್ರಣವಾನಂದ ಸ್ವಾಮೀಜಿ ಒತ್ತಾಯ

30-06-24 09:56 pm       HK News Desk   ಕರ್ನಾಟಕ

ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ಆದ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಾದರೆ ಹಿಂದುಳಿದ ವರ್ಗದ ಬಿ.ಕೆ. ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಮಾಡುವಂತೆ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. 

ಹಾವೇರಿ, ಜೂನ್.30: ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ಆದ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಾದರೆ ಹಿಂದುಳಿದ ವರ್ಗದ ಬಿ.ಕೆ. ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಮಾಡುವಂತೆ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. 

ಯಾದಗಿರಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಹರಿಪ್ರಸಾದ ಅವರ ಹಿಂದೆ ಇಡೀ ಹಿಂದುಳಿದ ವರ್ಗದ ಸಮಾಜ ಇದೆ. ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದೇನೆ. ಸಿಎಂ, ಡಿಸಿಎಂ ಸ್ಥಾನ ಬದಲಾದರೆ ಬಿಕೆ ಹರಿಪ್ರಸಾದ್ ಅವರಿಗೆ ಆ ಸ್ಥಾನ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದ್ರೂ ಹರಿಪ್ರಸಾದ್ ಅವರಿಗೆ ನೀಡಬೇಕು. ಈ ಹುದ್ದೆಗಳನ್ನು ತುಂಬಲು ಹರಿಪ್ರಸಾದ್ ಸಮರ್ಥರಿದ್ದಾರೆ ಎಂದು ಹೇಳಿದರು.

Education system handed over to mafia by Modi govt, alleges Priyanka Gandhi  | Politics News - Business Standard

ಕಾಂಗ್ರೆಸ್‌ ಪಕ್ಷದಲ್ಲಿ ಸುದೀರ್ಘ 49 ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಇಂದಿರಾ ಗಾಂಧಿಯಿಂದ ಹಿಡಿದು ಪ್ರಸ್ತುತ ಪ್ರಿಯಾಂಕಾ ಗಾಂಧಿ ವರೆಗೆ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಈಡಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರವಿದ್ದಾಗ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಎಂದರು.

ಬಿಕೆ ಹರಿಪ್ರಸಾದ್ ಅವರನ್ನೇ ಮುಂದಿನ ಸಿಎಂ ಮಾಡಿ- ಪ್ರಣವಾನಂದಶ್ರೀ ಒತ್ತಾಯ | Make BK  Hariprasad the next CM - pranavananda swamiji - Kannada Oneindia

ಕಾಂಗ್ರೆಸ್ ಹೈಕಮಾಂಡ್​ ಅಧಿಕಾರ ನೀಡುವಾಗ ಏನು ಹೊಂದಾಣಿಕೆ ಮಾಡಿಕೊಂಡಿತ್ತೋ ಅದರಂತೆ ಬದಲಾವಣೆ ಮಾಡುವುದಾದರೆ ಈಡಿಗ ಸಮಾಜದ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಸಿಎಂ ಸ್ಥಾನ ನೀಡಬೇಕು. ಕೊನೆ ಪಕ್ಷ ಡಿಸಿಎಂ ಹುದ್ದೆಯನ್ನಾದರೂ ನೀಡಲಿ. ರಾಜ್ಯ ಸರ್ಕಾರ ರಚನೆಯಾಗುವಾಗ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹರಿಪ್ರಸಾದ್‌ ಅವರನ್ನು ಸಚಿವರಾಗಿ ನೇಮಕ ಮಾಡುವಂತೆ ಹೇಳಿದ್ದರು. ಆದರೆ, ಅವರ ಮಾತನ್ನು ಗಾಳಿಗೆ ತೂರಿ ಸಚಿವ ಸ್ಥಾನವನ್ನೂ ನೀಡದೆ ಅಪಮಾನ ಮಾಡಲಾಗಿದೆ ಎಂದು ದೂರಿದರು.

The Yidiga community has its own political hegemony in the state. Pranavanandshree demanded to declare BK Hariprasad as CM or DCM if there is a change in the position of CM.