KPCC president, Siddaramaiah, DK Shivakumar: ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಭಿನ್ನ ಸ್ವರ ; ಡಿಕೆಶಿ ವಿರುದ್ಧ ಪ್ರತಿತಂತ್ರ, ಡಿಸಿಎಂ ಅಥವಾ ಕೆಪಿಸಿಸಿ ಹುದ್ದೆ ಬಿಟ್ಟುಕೊಡಲು ಒತ್ತಡ, ರಾಹುಲ್ ಭೇಟಿಯಾದ ಸಿದ್ದರಾಮಯ್ಯ, ದೆಹಲಿ ಮಟ್ಟದಲ್ಲಿ ಡಿಕೆ ಒಬ್ಬಂಟಿ !

01-07-24 01:10 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರ ಬಣಗಳು ಸೃಷ್ಟಿಯಾಗಿರುವಂತೆಯೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿಯೂ ಎರಡು ಬಣಗಳು ಸೃಷ್ಟಿಯಾಗಿದ್ಯಾ ಅನ್ನುವ ಅನುಮಾನ ಮೂಡಿದೆ.

ಬೆಂಗಳೂರು, ಜುಲೈ.1: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರ ಬಣಗಳು ಸೃಷ್ಟಿಯಾಗಿರುವಂತೆಯೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿಯೂ ಎರಡು ಬಣಗಳು ಸೃಷ್ಟಿಯಾಗಿದ್ಯಾ ಅನ್ನುವ ಅನುಮಾನ ಮೂಡಿದೆ. ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ದೆಹಲಿ ಭೇಟಿ ನೀಡಿದ್ದಾಗಿನ ಬೆಳವಣಿಗೆಗಳು ಹೈಕಮಾಂಡ್ ಮಟ್ಟದಲ್ಲೂ ಎಲ್ಲವೂ ಸರಿಯಿಲ್ಲ ಎನ್ನೋದನ್ನು ತೋರಿಸಿದೆ.

ರಾಜ್ಯದಲ್ಲಿ ಒಂದೆಡೆ ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬೇಡಿಕೆ ಇಡುತ್ತಿರುವುದು, ಈ ಕುರಿತು ಪದೇ ಪದೇ ಹೇಳಿಕೆ ನೀಡಿ ರಾಜ್ಯ ನಾಯಕರನ್ನು ಗೊಂದಲಕ್ಕೀಡು ಮಾಡುತ್ತಿರುವುದು, ಆಮೂಲಕ ಡಿಸಿಎಂ ಡಿಕೆಶಿಗೆ ಸಿದ್ದರಾಮಯ್ಯ ಬಣದ ಶಾಸಕರು ಠಕ್ಕರ್ ಕೊಡುತ್ತಿರುವುದು ನಡೆದೇ ಇದೆ. ಒಕ್ಕಲಿಗ ಸ್ವಾಮೀಜಿಯೊಬ್ಬರು ಡಿಕೆಶಿ ಪರ ಬ್ಯಾಟಿಂಗ್ ನಡೆಸಿದ ಬೆನ್ನಲ್ಲೇ ಲಿಂಗಾಯತ ಸ್ವಾಮೀಜಿಯೊಬ್ಬರು ಲಿಂಗಾಯತ ಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದರು. ಒಕ್ಕಲಿಗ ಸಿಎಂ ಬೇಡಿಕೆಗೆ ಠಕ್ಕರ್ ನೀಡುವುದಕ್ಕಾಗಿಯೇ ಇಂತಹದ್ದೊಂದು ಹೇಳಿಕೆ ಹೊರಡಿಸಲಾಗಿತ್ತು ಅನ್ನುವುದು ಇಲ್ಲಿ ಮುಖ್ಯ. ಆಮೂಲಕ ರಾಜ್ಯದ ಎರಡು ಪ್ರಬಲ ಸಮುದಾಯಗಳ ಪರ ದನಿ ಎತ್ತುವ ಮೂಲಕ ಇವರೆಡೂ ಅಲ್ಲದ ಕುರುಬ ಜನಾಂಗದ ಸಿಎಂ ಸಿದ್ದರಾಮಯ್ಯ ಬದಲಾವಣೆಯ ವಿಚಾರವನ್ನೇ ಗೌಣವಾಗಿಸುವ ಕಸರತ್ತು ಇದರಲ್ಲಡಗಿತ್ತು.

PM Narendra Modi speaks to Indian cricket team, thanks Rahul Dravid for his  contribution

Rahul Gandhi, the road ahead - The Sunday Guardian Live

Wish to become CM if luck is on my side: Karnataka Home Minister  Parameshwara | Bengaluru - Hindustan Times

ಈ ಬೆಳವಣಿಗೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಧಾನಿ ಮೋದಿ ಭೇಟಿಗಾಗಿ ರಾಜ್ಯ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ನಡೆದಿತ್ತು. ಶನಿವಾರ ಮೋದಿ ಭೇಟಿಯಲ್ಲಿ ಡಿಸಿಎಂ ಡಿಕೆಶಿ, ಗೃಹ ಸಚಿವ ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಸೇರಿ ಪ್ರಮುಖರು ಜೊತೆಯಾಗೇ ತೆರಳಿದ್ದರು. ಆನಂತರ, ರಾಜ್ಯ ರಾಜಕೀಯದ ಬೆಳವಣಿಗೆ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೂ ರಾಜ್ಯದ ಪ್ರಮುಖರು ಮಾಹಿತಿ ನೀಡುವ ನೆಪದಲ್ಲಿ ಚರ್ಚೆ ನಡೆಸಿದ್ದಾರೆ. ಆದರೆ ಈ ಭೇಟಿಯ ವೇಳೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರತ್ಯೇಕವಾಗಿ ತೆರಳಿದ್ದು ಗುಪ್ತ ಮಾತುಕತೆ ನಡೆಸಿದ್ದಾರೆ. ರಾಹುಲ್ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯ ಜೊತೆಗೆ ಪರಮೇಶ್ವರ್, ಮಹದೇವಪ್ಪ, ಕೆಜೆ ಜಾರ್ಜ್ ಜೊತೆಗಿದ್ದರು. ಆದರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಒಬ್ಬರನ್ನು ಮಾತ್ರ ಒಳಗೆ ಕರೆದು ಎಂಟು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಸಚಿವ ಸ್ಥಾನಗಳ ಬದಲಾವಣೆ ಸೇರಿದಂತೆ ಮಹತ್ವದ ಸೂಚನೆಗಳನ್ನು ರಾಹುಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಭೇಟಿ ವೇಳೆ ಡಿಕೆ ಶಿವಕುಮಾರ್ ದೂರ ನಿಂತಿದ್ದಲ್ಲದೆ, ಹೈಕಮಾಂಡ್ ಮಟ್ಟದಲ್ಲೂ ಬಣ ಬಿಕ್ಕಟ್ಟು ಸೃಷ್ಟಿಯಾಗಿರುವ ಶಂಕೆಗೆ ಕಾರಣವಾಗಿದೆ.

Congress president: Mallikarjun Kharge officially takes over as Congress  president - The Economic Times

ಶನಿವಾರ ಸಂಜೆ ಪ್ರಧಾನಿ ಭೇಟಿಯಾದ ಬಳಿಕ ಸಿದ್ದರಾಮಯ್ಯ ಮತ್ತು ತಂಡ ಬೆಂಗಳೂರಿಗೆ ಮರಳಿದರೆ, ಡಿಕೆ ಶಿವಕುಮಾರ್ ಒಬ್ಬರೇ ಭಾನುವಾರದ ವರೆಗೆ ನಿಂತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಬಳಿ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಎಂಬ ಎರಡು ಮಹತ್ವದ ಖಾತೆಗಳಿವೆ. ಇದರ ಜೊತೆಗೆ, ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಸ್ಥಾನವೂ ಇದೆ. ಈ ಬಗ್ಗೆ ಸಿದ್ದರಾಮಯ್ಯ ಬಣದ ಸಚಿವರಿಗೆ ಆಕ್ಷೇಪಗಳಿದ್ದು, ಡಿಕೆಶಿ ಬಳಿಯಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಡಿಸಿಎಂ ಹುದ್ದೆ ಬಿಟ್ಟು ಕೊಡಲಿ ಎಂದು ಹೈಕಮಾಂಡ್ ಬಳಿ ಅಹವಾಲು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಕೆಲವರು ಸಿದ್ದರಾಮಯ್ಯ ಪರ ಇರುವುದರಿಂದ ಇದಕ್ಕೆ ಅಸ್ತು ಎಂದಿರುವ ಸಾಧ್ಯತೆಯಿದೆ ಎನ್ನುವ ಮಾತುಗಳಿವೆ.

Satish Jarakiholi : ಸ್ವಪಕ್ಷ ಶಾಸಕನ ವಿರುದ್ಧವೇ ಸಚಿವ ಸತೀಶ್ ಜಾರಕಿಹೊಳಿ ಗರಂ ! -  Navasamaja

ಈಗಾಗಲೇ ನಾಲ್ಕು ವರ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪೂರೈಸಿರುವ ಡಿಕೆಶಿಯನ್ನು ಈ ಹಿಂದೆ ಲೋಕಸಭೆ ಚುನಾವಣೆ ವರೆಗೆ ಅಧ್ಯಕ್ಷ ಸ್ಥಾನದಲ್ಲಿ ಇರಲಿ ಎಂದು ಹೈಕಮಾಂಡ್ ಕಡೆಯಿಂದ ಸೂಚಿಸಲಾಗಿತ್ತು. ಇದೀಗ ಡಿಸಿಎಂ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆ ಎರಡರ ಬಗ್ಗೆಯೂ ಕಾಂಗ್ರೆಸ್ ನಾಯಕರಲ್ಲೇ ಚರ್ಚೆ ಜೋರಾಗಿದ್ದು, ಬೆಳಗಾವಿ ಸಾಹುಕಾರ್ ಕಡೆಯಿಂದ ಬಹಿರಂಗ ಹೇಳಿಕೆಗಳೂ ಬರುತ್ತಿವೆ. ಇಲ್ಲಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಕೆಎನ್ ರಾಜಣ್ಣ, ಜಮೀರ್ ಅಹ್ಮದ್ ಮುಂತಾದ ಪ್ರಮುಖರೇ ಈ ರೀತಿಯ ಹೇಳಿಕೆ ಕೊಟ್ಟು ಗೊಂದಲ ಎಬ್ಬಿಸುತ್ತಿದ್ದಾರೆ. ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಪರವಾಗಿಯೇ ಬ್ಯಾಟ್ ಬೀಸುತ್ತಿದ್ದಾರೆ. ಆಮೂಲಕ ಸಿಎಂ ಪರ ಮತ್ತು ಡಿಕೆಶಿ ವಿರುದ್ಧ ಪ್ರತಿ ತಂತ್ರ ಹೂಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಬೆಳವಣಿಗೆ ನಡುವಲ್ಲೇ ಕೈ ಪಕ್ಷದ ಕೇಂದ್ರ ನಾಯಕರು ಎರಡು ಬಣಗಳ ಮಧ್ಯೆ ಪ್ರತ್ಯೇಕವಾಗಿ ಗುರುತಿಸಿಕೊಂಡಿರುವಂತೆ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯಕ್ಕೆ ಮತ್ತೊಂದು ರೀತಿಯ ಸಂದೇಶ ನೀಡಿದಂತಾಗಿದೆ.

Like others in the party, Congress high command leaders too seem to be divided between Karnataka Chief Minister Siddaramaiah and DCM DK Shivakumar, also KPCC president, over changing the chief minister and KPCC chief, and creating more deputy chief minister posts.