CM Siddaramaiah, D K: ‘’ಸಿಎಂ ಬದಲು’’ ಚರ್ಚೆಗೆ ಬ್ರೇಕ್ ; ಸಿದ್ದರಾಮಯ್ಯ, ಡಿಕೆಶಿ ಪಟ್ಟ ಸೇಫ್, ಜಿಪಂ ಚುನಾವಣೆಗೆ ಸಿದ್ಧರಾಗಿ, ಸರಕಾರಕ್ಕೆ ಮುಜುಗರ ತಂದಲ್ಲಿ ಶಿಸ್ತು ಕ್ರಮ, ಸಚಿವರ ಭಿನ್ನ ರಾಗಕ್ಕೆ ಹೈಕಮಾಂಡ್ ಎಚ್ಚರಿಕೆ

08-07-24 12:00 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದೆ. ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸಲುವಾಗಿ ರಾಜ್ಯ ಕಾಂಗ್ರೆಸಿನಲ್ಲಿ ಒಗ್ಗಟ್ಟಿನ ಸೂತ್ರ ಬೆಸೆಯುವ ದೃಷ್ಟಿಯಿಂದ ನಾಯಕತ್ವ ಚರ್ಚೆಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದೆ.

ಬೆಂಗಳೂರು, ಜುಲೈ 8: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದೆ. ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸಲುವಾಗಿ ರಾಜ್ಯ ಕಾಂಗ್ರೆಸಿನಲ್ಲಿ ಒಗ್ಗಟ್ಟಿನ ಸೂತ್ರ ಬೆಸೆಯುವ ದೃಷ್ಟಿಯಿಂದ ನಾಯಕತ್ವ ಚರ್ಚೆಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದೆ. ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಗೊಂಡು ಒಂದು ವರ್ಷವಷ್ಟೇ ಆಗಿದ್ದು, ಗ್ಯಾರಂಟಿ ಯೋಜನೆಗಳೂ ಯಥಾವತ್ ಜಾರಿಯಾಗಿದೆ. ಈ ಹಂತದಲ್ಲಿ ನಾಯಕತ್ವ ಬದಲಿಸುವುದು ಸಾಧುವೂ ಅಲ್ಲ, ಅಂತಹ ಸನ್ನಿವೇಶವೂ ನಿರ್ಮಾಣವಾಗಿಲ್ಲ. ಹೈಕಮಾಂಡ್ ಮುಂದೆ ಇಂತಹ ಪ್ರಸ್ತಾಪವೂ ಇಲ್ಲ. ಸದ್ಯಕ್ಕೆ ಪಕ್ಷವನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸೇಕಿದ್ದು ಅದಕ್ಕಾಗಿ ತಯಾರಿ ನಡೆಸುವಂತೆ ಕೇಂದ್ರ ನಾಯಕರು ಖಡಕ್ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಸಿಎಂ ಬದಲಾವಣೆಯ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಡಿಕೆಶಿ ಪರ ಟೀಮ್ ಒಕ್ಕಲಿಗ ಸಿಎಂ ಆಗಬೇಕೆಂದು ಹೇಳುತ್ತ ಬಂದರೆ, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಪರ ಇರುವ ಗುಂಪು ನಾಲ್ಕು ಡಿಸಿಎಂ ಸ್ಥಾನಗಳ ಸೃಷ್ಟಿಗೆ ಆಗ್ರಹ ಮಾಡಿದ್ದರು. ಇವೆರಡು ವಿಚಾರ ಚರ್ಚೆಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನೂ ಮುನ್ನೆಲೆಗೆ ತರಲಾಗಿತ್ತು. ಒಬ್ಬನಿಗೆ ಒಂದೇ ಹುದ್ದೆ ಎನ್ನುವ ಮೂಲಕ ಡಿಕೆಶಿ ಅವರನ್ನು ಕಟ್ಟಿಹಾಕಲು ಸದ್ದಿಲ್ಲದೆ ತಂತ್ರ ನಡೆದಿತ್ತು. ಇದರಿಂದ ರಾಜ್ಯ ಕಾಂಗ್ರೆಸಿನಲ್ಲಿ ಭಾರೀ ಗೊಂದಲವೂ ಏರ್ಪಟ್ಟು ಸುದ್ದಿ ಮಾಧ್ಯಮಗಳಲ್ಲಿ ಅದೇ ಚರ್ಚೆಗೆ ಕಾರಣವಾಗಿತ್ತು. ಇದನ್ನರಿತ ಪಕ್ಷದ ಕೇಂದ್ರ ನಾಯಕರು, ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ. ಪಕ್ಷ, ಸರಕಾರಕ್ಕೆ ಮುಜುಗರ ತಂದಲ್ಲಿ ಶಿಸ್ತು ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ಮೇಲ್ ಸ್ತರದಿಂದ ಕೆಳಸ್ತರದ ನಾಯಕರ ವರೆಗೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಚುನಾವಣೆ ಗೆಲ್ಲಲು ಮಾನದಂಡ ನಿಗದಿ ಪಡಿಸಲಾಗುವುದು. ಹಾಗೆಯೇ ಪ್ರತಿಯೊಬ್ಬರ ಕಾರ್ಯ ವೈಖರಿಯನ್ನೂ ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು ಎಂದು ಹೈಕಮಾಂಡ್ ನಾಯಕರು ಸಂದೇಶ ರವಾನಿಸಿದ್ದು, ಆಮೂಲಕ ಸದ್ಯಕ್ಕೆ ಸಿಎಂ ಆಗಲೀ, ಕೆಪಿಸಿಸಿ ಹುದ್ದೆಯಾಗಲೀ ಬದಲಾವಣೆ ಮಾಡದಿರಲು ನಿರ್ಧರಿಸಿದ್ದಾರೆ.

The Karnataka High Command has sent a stern message to the state Congress leaders who had stoked a controversy by making statements on leadership change in the state. In order to forge a unity formula in the state Congress for the next zilla panchayat and taluk panchayat elections, the leadership has instructed to put a stop to the discussion. The high command has warned that action will be taken against such statements, no matter how big a person is.