Anchor Aparna death; ಅಸ್ಖಲಿತ ಕನ್ನಡ ನಿರೂಪಣೆಯಿಂದಲೇ ಮಿಂಚು ಹರಿಸಿದ್ದ ಕಿರುತೆರೆ ನಟಿ, ನಿರೂಪಕಿ ಅಪರ್ಣಾ ಇನ್ನಿಲ್ಲ ! 

11-07-24 11:44 pm       HK NEWS   ಕರ್ನಾಟಕ

ತಮ್ಮ ಅಸ್ಖಲಿತ ಕನ್ನಡ ಭಾಷೆಯಿಂದಲೇ ನಿರೂಪಕಿಯಾಗಿ ಖ್ಯಾತಿ ಗಳಿಸಿದ್ದ ನಟಿ ಅಪರ್ಣಾ(51) ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಬೆಂಗಳೂರು, ಜುಲೈ 11: ತಮ್ಮ ಅಸ್ಖಲಿತ ಕನ್ನಡ ಭಾಷೆಯಿಂದಲೇ ನಿರೂಪಕಿಯಾಗಿ ಖ್ಯಾತಿ ಗಳಿಸಿದ್ದ ನಟಿ ಅಪರ್ಣಾ(51) ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

1984 ರಲ್ಲಿ ತೆರೆ ಕಂಡಿದ್ದ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂ ಸಿನಿಮಾದಲ್ಲಿ ಚಿತ್ರ ನಟಿಯಾಗಿ ಪಾದಾರ್ಪಣೆ ಮಾಡಿದ್ದ ಅಪರ್ಣಾ ಹೆಚ್ಚು ಪ್ರಸಿದ್ಧಿ ಗಳಿಸಿದ್ದು ತಮ್ಮ ನಿರೂಪಣೆಯಿಂದ. ಅವರ ಒಂದು ಇಂಗ್ಲಿಷ್ ಪದವೂ ಮಿಳಿತಗೊಳ್ಳದ ಕನ್ನಡದ ನಿರೂಪಣೆ ಶೈಲಿಯೇ ಎಲ್ಲರಿಗೂ ಇಷ್ಟವಾಗಿತ್ತು. ಚಿತ್ರರಂಗದ ಕಾರ್ಯಕ್ರಮವಾಗಲಿ ಅಥವಾ ರಾಜಕೀಯ ಕಾರ್ಯಕ್ರಮವಾಗಲಿ ಅಲ್ಲಿ ನಿರೂಪಕಿಯಾಗಿ ಅಪರ್ಣಾ ಇರುತ್ತಿದ್ದರು. 

90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಅಪರ್ಣಾ ಆನಂತರ, ರೇಡಿಯೋ ಜಾಕಿಯಾಗಿ ಜೊತೆ ಜೊತೆಗೆ ಸೀರಿಯಲ್ ನಲ್ಲಿಯೂ ನಟಿಸತೊಡಗಿದ್ದರು. 1998 ರಲ್ಲಿ ದೀಪಾವಳಿ ಕಾರ್ಯಕ್ರಮ ಒಂದರಲ್ಲಿ ನಿರಂತರ 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

ಮೂಡಲ ಮನೆ, ಮುಕ್ತ ಮುಂತಾದ ಪ್ರಸಿದ್ಧ ಧಾರಾವಾಹಿಗಳಲ್ಲಿ ಅಪರ್ಣಾ ನಟಿಸಿದ್ದರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದು ಇಡೀ ರಾಜ್ಯದ ಜನರನ್ನು ಆಕರ್ಷಿಸಿತ್ತು. ಅನಾರೋಗ್ಯದಿಂದಾಗಿ ಅಪರ್ಣಾ ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

Popular Kannada television host and announcer Aparna Vastarey (57) passed away on Thursday, July 11, reportedly due to cancer. Aparna was not only known for her hosting skills but also made a mark in acting, earning fame through her roles in movies and serials.