ಬ್ರೇಕಿಂಗ್ ನ್ಯೂಸ್
20-07-24 10:25 pm Mangalore Correspondent ಕರ್ನಾಟಕ
ಬೆಂಗಳೂರು, ಜುಲೈ 20: ಕನ್ನಡ ಕಿರುತೆರೆಯಲ್ಲಿ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದ್ದ ಜನಪ್ರಿಯ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ನಾಗರಬಾವಿಯ ತಮ್ಮ ನಿವಾಸದಲ್ಲಿ ವಿನೋದ್ ದೋಂಡಾಲೆ ನೇಣಿಗೆ ಕೊರಳೊಡ್ಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ ಸೀರಿಯಲ್ ‘ಕರಿಮಣಿ’ ಗೆ ಆಕ್ಷನ್ ಕಟ್ ಹೇಳುತ್ತಿದ್ದವರು ವಿನೋದ್ ದೋಂಡಾಲೆ. ‘ಕರಿಮಣಿ’ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.ಇದರ ಜೊತೆ ಜೊತೆಗೇ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದರು. ‘ಅಶೋಕ ಬ್ಲೇಡ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿ ಇತ್ತು. ಸ್ವಂತ ಬ್ಯಾನರಿನಡಿ ಚಿತ್ರ ನಿರ್ಮಿಸುತ್ತಿದ್ದ ವಿನೋದ್ ದೋಂಡಾಲೆ ಹಠಾತ್ ಆತ್ಮಹತ್ಯೆ ಮಾಡಿಕೊಂಡಿರುವುದು ಕನ್ನಡ ಸಿನಿಮಾ ಜಗತ್ತಿನಲ್ಲಿ ಆಘಾತ ಮೂಡಿಸಿದೆ.
ಸಿನಿಮಾ ನಿರ್ಮಾಣ ತೊಡಗಿಸಿಕೊಂಡ ಬಳಿಕ ಆರ್ಥಿಕವಾಗಿ ವಿನೋದ್ ಸಂಕಷ್ಟಕ್ಕೆ ಸಿಲುಕಿದ್ದರು. ಅಶೋಕ ಬ್ಲೇಡ್ ಚಿತ್ರಕ್ಕಾಗಿ ಸಾಕಷ್ಟು ಸಾಲ ಮಾಡಿದ್ದು ಅದೇ ಹೊರೆಯಿಂದಾಗಿಯೇ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಟಿಎನ್ ಸೀತಾರಾಮ್ ಜೊತೆಗೆ ಮುಕ್ತ ಧಾರಾವಾಹಿ ತಂಡದಲ್ಲಿ ಕೆಲಸ ಮಾಡಿದ್ದ ಹತ್ತು ವರ್ಷಗಳಲ್ಲಿ ತನ್ನದೇ ನಿರ್ಮಾಣದ ಸೀರಿಯಲ್ ಮಾಡುತ್ತಿದ್ದರು. ಜೊತೆಗೆ, ನಿರ್ದೇಶನವನ್ನೂ ಮಾಡುತ್ತಿದ್ದರು. ಕಲರ್ಸ್ ಮತ್ತು ಉದಯ ಟಿವಿಯಲ್ಲಿ ಇವರ ಸೀರಿಯಲ್ ಪ್ರಸಾರವಾಗುತ್ತಿತ್ತು.
ಸಾವಿನ ಬಗ್ಗೆ ಕುಸುಮಾ ಆಯರಹಳ್ಳಿ ಬರಹ
"ವಿನೋದ್ ದೋಂಡಾಳೆ ಎಂಬ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ; ಅವರದೇ ಸಿನೆಮಾ. 'ಅಶೋಕ ಬ್ಲೇಡ್' ಅಂತ ಹೆಸರಿಟ್ಟಿದ್ದರು. ಅದು ಬದುಕನ್ನು ಕುಯ್ದು ಕೊಂದಿತು. ಪಿ ಶೇಷಾದ್ರಿ ಅವರ ಜೊತೆ 8 ವರ್ಷ ಸಿನೆಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ದಾರಾವಾಹಿಗೆ ಟಿ ಎನ್ ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿ ರಾವ್, ದೀಪಕ್ ಮತ್ತು ವಿನೋದ್ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕೆಮರಾಮನ್, ಒಬ್ಬ ನಿರ್ದೇಶಕ ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್. ಈ ಕಾಂಬಿನೇಶನ್ ವರ್ಕಾಗುವಾಗ ದೀಪಕ್ ಇಲ್ಲವಾದರು. ವಿನೋದ್ ಮತ್ತು ನರಹರಿ ಮುಂದುವರೆದರು. ಯಶಸ್ವೀ ಧಾರಾವಾಹಿಗಳನ್ನು ನೀಡಿದರು. ಟಿಸಿಲೊಡೆದು, ಛಲ ಬಿಡದೆ ಅವರು ಮುಂದುವರೆಯುವಾಗ ಎಲ್ಲರಿಗೂ ಖುಷಿಯಾಗಿತ್ತು’’
ಯಾವುದೋ ಧಾರಾವಾಹಿ ಮಾಡುವ ಬಗ್ಗೆ ಕೆಲವ ತಿಂಗಳ ಹಿಂದೆ ಮಾತಾಡಿದಾಗ, ಈ ಸಿನೆಮಾ ಮುಗಿಯಲಿ ಅಂದಿದ್ದರು. ಧಾರಾವಾಹಿಯ ಮೂಲಕ ಸ್ವಂತ ಸಿನೆಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಖುಷಿಯಾಗಿತ್ತು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ.. ಸಿನೆಮಾ ಕನಸು ಅಂತೊಂದಿದೆಯಲ್ಲಾ.. ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ, ದುಃಸ್ವಪ್ನವೂ ಆಗಬಹುದು. ಅದಕ್ಕೆ ವಿನೋದ್ ಸರ್ ಸಾವು ಉದಾಹರಣೆಯಾಗಬಾರದಿತ್ತು’’
‘’ನೀನಾಸಂ ಸತೀಶ್ ನಾಯಕರಾಗಿ, ಮುಕ್ಕಾಲು ಮುಗಿದಿದ್ದ ಸಿನೆಮಾ ಇನ್ನೂ ಕೊಡು, ಮತ್ತೂ ಕೊಡು ಅಂತ ಕೋಟಿಗಳನ್ನು ಕೇಳುತ್ತಲೇ ಇತ್ತು. 'ಅಶೋಕ ಬ್ಲೇಡ್' ಸಾಲಗಾರರ ರೂಪದಲ್ಲಿ ದಿನವೂ ಎದೆ ಇರಿಯುತ್ತಿತ್ತು. ಇಂದು ಎಲ್ಲವೂ ಮುಗಿಯಿತು!’’ ಹೀಗೆಂದು ಕುಸುಮಾ ತನ್ನ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
The Kannada television and film industry has been facing one shock after another. Following the deaths, controversies, and divorces of several actors, the industry is now reeling from the suicide of a director.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm