ಬ್ರೇಕಿಂಗ್ ನ್ಯೂಸ್
07-12-20 05:28 pm Headline Karnataka News Network ಕರ್ನಾಟಕ
ತುಮಕೂರು, ಡಿ.7: ಇಲ್ಲಿನ ಪ್ರತಿಷ್ಠಿತ ತನಿಷ್ಕ್ ಜುವೆಲ್ಲರಿಯಲ್ಲಿ ಅದರ ಮ್ಯಾನೇಜರ್ ಮತ್ತು ಸಿಬಂದಿ ಸೇರಿ ಮಳಿಗೆಯಲ್ಲಿ ಡಿಸ್ ಪ್ಲೇ ಗೆ ಇಡುತ್ತಿದ್ದ ಅಸಲಿ ಚಿನ್ನವನ್ನೇ ಎಗರಿಸಿ ಅದರ ಜಾಗದಲ್ಲಿ ನಕಲಿ ಚಿನ್ನವನ್ನ ಇಟ್ಟು ಬರೋಬ್ಬರಿ ಎರಡೂವರೆ ಕೇಜಿ ಚಿನ್ನವನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕತರ್ನಾಕ್ ಐಡಿಯಾ ಮಾಡಿದ್ದು ಜ್ಯುವೆಲ್ಲರಿಯಲ್ಲಿ ಮ್ಯಾನೇಜರ್ ಆಗಿದ್ದ ಮೊಹಮ್ಮದ್ ಆದಿಲ್. ತುಮಕೂರು ನಗರದ ಜನರಲ್ ಕಾರ್ಯಪ್ಪ ರಸ್ತೆಯಲ್ಲಿನ ತನಿಷ್ಕ್ ಜ್ಯೂವೆಲ್ಲರ್ಸ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿದ್ದ ಮೋಹಮದ್ ಆದಿಲ್, ಸ್ಟಾಕ್ ಮ್ಯಾನೇಜರ್ ಕೇರಳ ಮೂಲದ ರಿತೇಶ್ ಕುರುಪ್ ನೆರವು ಪಡೆದು ತಮ್ಮದೇ ಜುವೆಲ್ಲರಿಯನ್ನು ದೋಚಿದ್ದು ತನಿಖೆಯಲ್ಲಿ ಬಯಲಾಗಿದೆ.
ಜ್ಯುವೆಲ್ಲರಿಯಲ್ಲಿ ಡಿಸ್ ಪ್ಲೇ ಇಡುತ್ತಿದ್ದ ಚಿನ್ನದ ಒಡವೆಗಳನ್ನ ತಮ್ಮ ಬ್ಯಾಗ್ ಗಳಲ್ಲಿ ಇಟ್ಟು ಹೊರತರುತ್ತಿದ್ದ ತಂಡ, ಆ ಚಿನ್ನವನ್ನು ಗುಬ್ಬಿ ಮೂಲದ ಜ್ಯುವೆಲ್ಲರಿ ಮಾಲೀಕನಿಗೆ ಮಾರಾಟ ಮಾಡ್ತಿದ್ದರು. ಬದಲಿಗೆ, ಅದೇ ಮಾದರಿಯ ನಕಲಿ ಒಡವೆಗಳನ್ನ ತಯಾರಿಸಿ ಅದನ್ನ ಜ್ಯುವೆಲ್ಲರಿಗೆ ತಂದು ಪ್ರದರ್ಶನಕ್ಕೆ ಇಡಲಾಗ್ತಿತ್ತು. ಗುಬ್ಬಿಯ ಜ್ಯುವೆಲ್ಲರ್ಸ್ ಮಾಲೀಕ ಅಸಲಿ ಚಿನ್ನದ ಒಡವೆಗಳನ್ನ ಮಾರಿ, ಬಳಿಕ ಅದರ ಹಣವನ್ನ ಮೊಹಮ್ಮದ್ ಆದಿಲ್ ಗೆ ನೀಡುತ್ತಿದ್ದ. ಇದೇ ರೀತಿ 2019ರ ಏಪ್ರಿಲ್ 22 ರಿಂದ 2020 ಜೂನ್ 14 ವರೆಗೂ ಈ ಗ್ಯಾಂಗ್ ವಂಚನೆ ಮಾಡಿಕೊಂಡು ಬಂದಿದೆ.
ಆದರೆ, ಜೂನ್ ನಲ್ಲಿ ನಡೆದ ಜ್ಯುವೆಲರಿಯ ಆಡಿಟ್ ಸಂದರ್ಭದಲ್ಲಿ ಚಿನ್ನದ ಲೆಕ್ಕಾಚಾರ ಏರುಪೇರು ಕಂಡುಬಂದಿದ್ದು ತನಿಷ್ಕ್ ಜುವೆಲ್ಲರಿ ಮಾಲೀಕ ಪ್ರಕಾಶ್ ಕುಮಾರ್ ರಾಥೋಡ್ ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು ಉಂಡ ಮನೆಗೆ ದ್ರೋಹ ಬಗೆದ ಕಳ್ಳರ ವಂಚನೆ ಹೊರಬಿದಿದೆ. ಅಷ್ಟೊತ್ತಿಗಾಗಲೇ ಊರು ಬಿಟ್ಟಿದ್ದ ಆರೋಪಿಗಳು ಯಾರಿಗೂ ಸಿಗದೇ ತಲೆಮರೆಸಿಕೊಂಡಿದ್ದರು. ಆರೋಪಿಗಳಿಗಾಗಿ ಕೇರಳ, ಮಹಾರಾಷ್ಟ್ರ, ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಜಾಲಾಡಿ ಪೊಲೀಸರು ಕೊನೆಗೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ..
2019ರ ಏಪ್ರಿಲ್ 22 ರಿಂದ 2020 ಜೂನ್ ವರೆಗೂ ಒಟ್ಟು 1 ಕೋಟಿ 30 ಲಕ್ಷದ 64 ಸಾವಿರದ 310 ರೂ. ಮೌಲ್ಯದ 2 ಕಿಲೋ 470 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ತುಮಕೂರಿನ ವಾಸಿ ತನಿಷ್ಕ್ ಮ್ಯಾನೇಜರ್ ಮೊಹಮ್ಮದ ಆದಿಲ್ ಗೆ ಕೇರಳ ಮೂಲದ ರಿತೇಶ್ ಕುಮಾರ್, ಗುಬ್ಬಿ ಮೂಲದ ಮಹೇಶ್, ಆತನ ಪತ್ನಿ ಮೀನಾಕ್ಷಿ, ಹೆಬ್ಬೂರು ಮೂಲದ ರುಕ್ಸಾನ ಸಾಥ್ ನೀಡಿದ್ದಾರೆ. ಕದ್ದು ತಂದ ಅಸಲಿ ಚಿನ್ನವನ್ನ ಮಾರಾಟ ಮಾಡ್ತಿದ್ದ ಗುಬ್ಬಿ ನಿವಾಸಿ ಮಹೇಶ್ ಪ್ರಕರಣದ ಮೂರನೇ ಆರೋಪಿಯಾಗಿದ್ದು, ಮಹೇಶನ ಪತ್ನಿ ಮೀನಾಕ್ಷಿ ಕೂಡ ಇದೇ ತನಿಷ್ಕ್ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿಕೊಂಡಿದ್ದಳು. ಗಂಡನಿಗೆ ಅಸಲಿ ಚಿನ್ನದ ಒಡವೆಯನ್ನ ನೀಡಿ ಬಳಿಕ ಆತನಿಂದಲೇ ನಕಲಿ ಒಡವೆಗಳನ್ನ ಮಾಡಿಸಿಕೊಂಡು ತರುತ್ತಿದ್ದಳು.
ತನಿಷ್ಕ್ ಬ್ರಾಂಚ್ ಹೆಡ್ ಕೂಡ ಆಗಿರೋ ಮೊಹಮ್ಮದ್ ಆದಿಲ್ ಈ ಪ್ರಕರಣದ ಪ್ರಮುಖ ರುವಾರಿಯಾಗಿದ್ದರಿಂದ ಒಂದು ವರ್ಷಗಳ ಕಾಲ ಯಾರಿಗೂ ಗೊತ್ತಾಗದಂತೆ ವಂಚನೆ ನಡೆಸಿದ್ದರು. ಸದ್ಯ ಎಲ್ಲಾ ಆರೋಪಿಗಳನ್ನ ಬಂಧಿಸಿದ ಪೊಲೀಸರು ಅವ್ರಿಂದ ಒಟ್ಟು 1 ಕಿಲೋ 854 ಗ್ರಾಂ ತೂಕದ ಚಿನ್ನಾಭರಣ ಮತ್ತು 4.5 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊದಮೊದಲು ಮಾಲೀಕರನ್ನ ಮೆಚ್ಚಿಸಲು ಮತ್ತು ಅತಿ ಹೆಚ್ಚಿನ ಮಾರಾಟದ ಇನ್ ಸೆಂಟೀವ್ ಪಡೆಯಲು ಚಿನ್ನವನ್ನ ಮಾರಾಟ ಮಾಡಿರೋದಾಗಿ ಬಿಲ್ ಹಾಕಿ ಬಳಿಕ ಗ್ರಾಹಕರು ವಾಪಸ್ ನೀಡಿದ್ದಾರೆ ಅಂತಾ ಅದೇ ಚಿನ್ನವನ್ನ ತೋರಿಸಿ ಯಾಮಾರಿಸುತ್ತಿದ್ದ ಮೊಹಮ್ಮದ್ ಆದಿಲ್, ಬಳಿಕ ಅದೇ ಐಡಿಯಾನಾ ವಂಚನೆಗೆ ಬಳಸಿಕೊಂಡಿದ್ದಾನೆ. ಅಂದುಕೊಂಡಷ್ಟು ಚಿನ್ನವನ್ನ ಲಪಟಾಯಿಸಿ ದುಬೈಗೆ ಪರಾರಿಯಾಗಲು ಪ್ಲಾನ್ ಮಾಡಿದ್ದ. ಆದರೇ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಹಾಗೇ ಮಾಡಬಾರದ್ದು ಮಾಡಿ ಜೈಲು ಪಾಲಾಗಿದ್ದಾನೆ.
Gold worth 1.30 Crores stolen from Tanishq store by it's own staff members in Tumkur. It is estimated that 2.5 Kgs of God was stone continuously from 2019.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm