ಬ್ರೇಕಿಂಗ್ ನ್ಯೂಸ್
21-07-24 04:15 pm HK News Desk ಕರ್ನಾಟಕ
ಕಾರವಾರ, ಜುಲೈ 21: ಗುಡ್ಡ ಕುಸಿತದಿಂದ ದುರಂತಕ್ಕೀಡಾದ ಅಂಕೋಲಾದ ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸುರಿಯುತ್ತಿದ್ದ ಮಳೆಯ ನಡುವೆಯೇ ಪಂಚೆಯನ್ನು ಎತ್ತಿಕೊಂಡು ಸ್ಥಳಕ್ಕೆ ನಡೆದುಕೊಂಡೇ ತೆರಳಿದ ಮುಖ್ಯಮಂತ್ರಿ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ, ಕೇಂದ್ರ ಸರಕಾರ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಸಂಸದ ಕಾಗೇರಿ ಬೇಡಿಕೆಯನ್ನು ಪರಿಗಣಿಸಿ ಸೇನೆಯನ್ನು ಕಳುಹಿಸಿಕೊಟ್ಟಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸೇನಾ ಪಡೆಯ ಯೋಧರು ಸ್ಥಳಕ್ಕಾಗಮಿಸಿದ್ದಾರೆ.
ಗುಡ್ಡ ಕುಸಿದಿರುವ ಜಾಗದಲ್ಲಿ ಭಾರತ್ ಬೆಂಜ್ ಕಂಪನಿಗೆ ಸೇರಿದ ಲಾರಿಯೊಂದು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆಯಿದ್ದು, ಅದರ ಮಾಲೀಕ ಕೇರಳ ಮೂಲದ ವ್ಯಕ್ತಿ ಸ್ಥಳಕ್ಕೆ ಬಂದಿದ್ದು ರಕ್ಷಣಾ ಕಾರ್ಯ ವಿಳಂಬ ಆಗಿರುವುದಕ್ಕೆ ರಂಪ ಮಾಡಿದ್ದಾರೆ. ಅಲ್ಲದೆ, ಕೇರಳದ ರಕ್ಷಣಾ ತಂಡವೊಂದನ್ನು ಕರೆತಂದಿದ್ದು, ತುರ್ತು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಇದೇ ವೇಳೆ, ರಕ್ಷಣೆಗೆ ಬಂದಿದ್ದ ಕೇರಳ ತಂಡದ ಸದಸ್ಯರನ್ನು ಕಾರವಾರ ಎಸ್ಪಿ ನಾರಾಯಣ ಅವರು ಸರ್ಟಿಫಿಕೇಟ್ ಕೇಳಿ ತಪಾಸಣೆ ನಡೆಸಿದರು ಎಂಬ ಆರೋಪ ಕೇಳಿಬಂದಿದ್ದು ಲಾರಿ ಮಾಲೀಕ ಇದರ ಬಗ್ಗೆ ಮಾಧ್ಯಮದ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.
ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದ ಲಾರಿ ಚಾಲಕ
ತುರ್ತು ರಕ್ಷಣಾ ಕಾರ್ಯ ಆಗಬೇಕಿರುವ ಸಮಯದಲ್ಲಿ ಕಾರವಾರದ ಎಸ್ಪಿ ಮತ್ತು ಅವರ ಕೆಳಗಿನ ಪೊಲೀಸರು ಸಮಯ ತಳ್ಳುತ್ತಿದ್ದಾರೆ. ತಮಗೇ ಹೆಸರು ಸಿಗಬೇಕೆಂದು ಹೊರಗಿನಿಂದ ಬಂದ ರಕ್ಷಣಾ ತಂಡಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ. ಇಂಥ ಎಸ್ಪಿಯನ್ನು ಸಸ್ಪೆಂಡ್ ಮಾಡಿ ಎಂದು ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಲ್ಲಿ ಆಗ್ರಹ ಮಾಡಿದ್ದಾರೆ. ಲಾರಿ ಕೇರಳ ಮೂಲದ್ದಾಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಅಂಕೋಲಾ ಮೂಲಕ ಕೇರಳಕ್ಕೆ ತೆರಳುತ್ತಿತ್ತು. ದುರಂತ ನಡೆದಿರುವ ಜುಲೈ 16ರಂದು ಬೆಳಗ್ಗಿನ ವೇಳೆಗೆ ಲಾರಿ ಚಾಲಕ ಅರ್ಜುನ್ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು ಎನ್ನಲಾಗಿದೆ. ಅದೇ ದಿನ ಬೆಳಗ್ಗೆ ಹತ್ತು ಗಂಟೆಗೆ ಆತನಿಗೆ ಕರೆ ಮಾಡಿದ್ದು, ಫೋನ್ ರಿಸೀವ್ ಮಾಡಿರಲಿಲ್ಲ. ಆನಂತರ, ಸ್ವಿಚ್ ಆಫ್ ಬಂದಿತ್ತು. ಲಾರಿಯ ಜಿಪಿಎಸ್ ಲೊಕೇಶನ್ ನೋಡಿದಾಗ, ಅಂಕೋಲಾದ ಶಿರೂರಿನಲ್ಲಿ ತೋರಿಸುತ್ತಿತ್ತು. ಬಳಿಕ ನೋಡಿದರೆ, ಗುಡ್ಡ ಕುಸಿದ ದುರಂತದ ಬಗ್ಗೆ ತಿಳಿದುಬಂದಿತ್ತು ಎಂದು ಸ್ಮರಿಸುತ್ತಾರೆ, ಲಾರಿ ಮಾಲೀಕ.
ಇನ್ನೊಂದೆಡೆ ಗುಡ್ಡ ಕುಸಿದ ದುರಂತ ನಡೆದು ಭಾನುವಾರಕ್ಕೆ ಆರು ದಿನಗಳಾಗಿದ್ದು, ಆರು ಜೆಸಿಬಿ ಮತ್ತು ನಾಲ್ಕೈದು ಟಿಪ್ಪರ್ ಗಳಲ್ಲಿ ಮಣ್ಣು ತೆರವು ಕಾರ್ಯ ಆಗುತ್ತಲೇ ಇದೆ. ಆದರೆ ಕಿಮೀ ಉದ್ದಕ್ಕೆ ಹೆದ್ದಾರಿ ಮತ್ತು ಗುಡ್ಡ ಒಟ್ಟಾಗಿ ಗಂಗಾವಳಿ ನದಿಯತ್ತ ಕುಸಿದಿದ್ದು, ಅಲ್ಲಿದ್ದ ಕ್ಯಾಂಟೀನ್ ಮತ್ತು ಎರಡು ಟ್ಯಾಂಕರಿನಲ್ಲಿದ್ದವರ ಏಳು ಮೃತದೇಹಗಳು ನದಿಯಲ್ಲಿ ಪತ್ತೆಯಾಗಿದ್ದವು. ಆದರೆ, ಮಣ್ಣಿನಡಿಗೆ ಬಿದ್ದಿರುವ ಲಾರಿ ಮಾತ್ರ ಗುಡ್ಡದ ಮಧ್ಯೆ ಎಲ್ಲಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಭಾರತ್ ಬೆಂಜ್ ಕಂಪನಿಯ ಅಧಿಕಾರಿಗಳು ಮಣ್ಣಿನಡಿಯಲ್ಲೇ ಲಾರಿ ಇದೆ ಎಂದಿದ್ದಾರೆ. ಇದಲ್ಲದೆ, ಈ ನಡುವೆ ಲಾರಿ ಚಾಲಕ ಅರ್ಜುನ್ ಅವರ ಮೊಬೈಲ್ ಒಂದು ಬಾರಿ ಆನ್ ಆಗಿದೆ ಎಂದು ಆತನ ಪತ್ನಿ ಹೇಳಿದ್ದಾಗಿ ಲಾರಿ ಮಾಲೀಕ ತಿಳಿಸಿದ್ದು, ಆನಂತರ ಸ್ವಿಚ್ ಆಫ್ ಆಗಿದೆಯಂತೆ. ಸಂಪೂರ್ಣ ಏಸಿ ಮತ್ತು ಭದ್ರವಾಗಿರುವ ಲಾರಿಯಾಗಿದ್ದು, ಒಳಗಡೆ ಚಾಲಕ ಬದುಕಿರಲೂಬಹುದು ಎನ್ನುವ ಆಶಾವಾದ ಲಾರಿ ಮಾಲಕ ಮತ್ತು ಕುಟುಂಬ ಸದಸ್ಯರಲ್ಲಿದೆ.
ಅರ್ಜುನ್ ಕುಟುಂಬಸ್ಥರು ಮತ್ತು ಲಾರಿ ಮಾಲೀಕ ಸ್ಥಳದಲ್ಲೇ ಇದ್ದಾರೆ. ಕಾರ್ಯಾಚರಣೆ ವಿಳಂಬ ಆಗುತ್ತಿರುವ ಬಗ್ಗೆ ಲಾರಿ ಮಾಲಕ ಆಕ್ರೋಶ ವ್ಯಕ್ತಪಡಿಸಿದ ಬಳಿಕವೇ ರಕ್ಷಣಾ ಕಾರ್ಯಕ್ಕೆ ವೇಗ ಸಿಕ್ಕಿದೆ. ಈವರೆಗೆ ಏಳು ಮಂದಿಯ ಮೃತದೇಹ ಮಾತ್ರ ಸಿಕ್ಕಿದ್ದು, ಒಟ್ಟು ಹತ್ತು ಜನರು ಮೃತಪಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ಉತ್ತರಾಖಂಡದಲ್ಲಿ ಭೂಕುಸಿತ ಆಗಿದ್ದಾಗ ರಕ್ಷಣಾ ಕಾರ್ಯ ನಡೆಸಿದ್ದ ಕೇರಳ ಮೂಲದ ನುರಿತ ತಂತ್ರಜ್ಞರು ಸ್ಥಳಕ್ಕೆ ಬಂದಿದ್ದು, ಎನ್ ಡಿಆರ್ ಎಫ್ ಜೊತೆಗೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಲ್ಲದೆ, ಸ್ಥಳಕ್ಕೆ ಮೆಟಲ್ ಡಿಟೆಕ್ಟರ್, ರಾಡಾರ್ ಯಂತ್ರಗಳನ್ನು ಮಂಗಳೂರಿನಿಂದ ತರಿಸಿದ್ದು, ಲಾರಿ ಎಲ್ಲಿದೆ ಎನ್ನುವ ಬಗ್ಗೆ ಶೋಧ ಕಾರ್ಯ ನಡೆಯುತ್ತಿದೆ.
ಹೆದ್ದಾರಿಯಲ್ಲಿ ಸಿಕ್ಕಿಬಿದ್ದಿದೆ ನೂರಕ್ಕೂ ಹೆಚ್ಚು ಲಾರಿ
ಮಂಗಳೂರು- ಗೋವಾ ಸಂಪರ್ಕಿಸುವ ಏಕೈಕ ಹೆದ್ದಾರಿ ಇದಾಗಿದ್ದು, ಅಂಕೋಲಾದಲ್ಲಿ ಇತ್ತೀಚೆಗೆ ಮಾಡಿದ್ದ ಚತುಷ್ಪಥ ಹೆದ್ದಾರಿ ಕುಸಿದು ಹೋಗಿರುವುದರಿಂದ ಎರಡು ಕಡೆಯೂ ನೂರಕ್ಕೂ ಹೆಚ್ಚು ಲಾರಿ ಮತ್ತು ಟ್ಯಾಂಕರುಗಳು ಸಿಕ್ಕಿಬಿದ್ದಿವೆ. ಮಹಾರಾಷ್ಟ್ರ ಮತ್ತು ಗೋವಾ ಕಡೆಯಿಂದ ಮೊದಲೇ ಬಂದಿದ್ದ ಲಾರಿಗಳು ಸಂಚಾರ ಸ್ಥಗಿತಗೊಂಡು ತಿರುಗಿ ಹೋಗಲಾಗದೆ ಅಲ್ಲಿಯೇ ಉಳಿದುಬಿಟ್ಟಿವೆ. ತುರ್ತು ಸಾಗಬೇಕಿರುವ ಆಹಾರ ವಸ್ತು, ಇನ್ನಿತರ ಸರಕುಗಳ ಲಾರಿಯ ಸಿಬಂದಿ, ಹೆದ್ದಾರಿಯಲ್ಲಿ ಸಿಕ್ಕಿಬಿದ್ದು ಸಂಕಷ್ಟದಲ್ಲಿದ್ದಾರೆ. ಇತ್ತ ಗೋಕರ್ಣದಿಂದ ಸ್ವಲ್ಪ ಮುಂದೆ ಹೋದಲ್ಲಿ ಹುಬ್ಬಳ್ಳಿ, ಬೆಳಗಾವಿಗೆ ಸಂಪರ್ಕಿಸುವ ಕಲಘಟಗಿ ಹೆದ್ದಾರಿ ಸಿಗುತ್ತದೆ. ಅಂಕೋಲಾದಿಂದ ದಕ್ಷಿಣಕ್ಕಿರುವ ವಾಹನಗಳು ಈ ದಾರಿಯಲ್ಲಿ ಬೆಳಗಾವಿ ಮೂಲಕ ಗೋವಾಕ್ಕೆ ಹೋಗಲು ಅವಕಾಶ ಇದೆ.
Ankola landslide, indiam Army from belagavi maratha regimond arrives to trace missing Kozhikode man at shirur, Cm Siddaramaiah visits spot. It's been more than 6 days since the landslide in Uttara Kannada's Ankola occurred on July 16. The landslide, which has caused massive destructions in Shirur, washing away parts of the Gangavali river and the NH-66, took the lives of at least 7 people with several others reported missing.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm