ಬ್ರೇಕಿಂಗ್ ನ್ಯೂಸ್
22-07-24 10:21 pm HK News Desk ಕರ್ನಾಟಕ
ಮೈಸೂರು, ಜುಲೈ 22: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವುದು ನಾನೂರು, ಐನೂರು ಕೋಟಿ ರೂಪಾಯಿ ಹಗರಣ ಆಲ್ಲ. ಕನಿಷ್ಠ ಮೂರ್ನಾಲ್ಕು ಸಾವಿರ ಕೋಟಿ ರೂಪಾಯಿ ಹಗರಣ ಆಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮುಡಾ ಹಗರಣ ವಿಚಾರವಾಗಿ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಡಾ ಹಗರಣ ಕುರಿತು ಸಂಪೂರ್ಣ ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮನಸ್ಥಿತಿ ಸಿದ್ದರಾಮಯ್ಯ ಅವರಿಗೆ ಇಲ್ಲ" ಎಂದು ಹೇಳಿದರು.
"ಸಿಎಂ ಸಿದ್ದರಾಮಯ್ಯ ಸಾಹೇಬ್ರ ಬಗ್ಗೆ ಸೈದ್ಧಾಂತಿಕವಾಗಿ ವಿರೋಧ ಅಷ್ಟೇ. ಅಭಿವೃದ್ಧಿ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಸಿಎಂ ತಮಗೆ ಬಂದ ಸೈಟ್ ಗಳನ್ನ ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆ ಎಂದು ನಾನು ನಂಬಿದೆ. ಆದರೆ ಆ ರೀತಿ ಮಾಡದೆ 62 ಕೋಟಿ ಪರಿಹಾರ ಕೇಳಿದ್ದಾರೆ. ಇದು ನನಗೆ ಸಿಎಂ ಬಗ್ಗೆ ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿದೆ. ಸಿಎಂ ಮೇಲೆ ಇದ್ದ ಅಭಿಮಾನವೂ ಕೂಡ ಈ ಪ್ರಕರಣದಿಂದ ಕಡಿಮೆಯಾಗಿದೆ" ಎಂದರು.
"2019 ರಲ್ಲಿ ವಿ. ಸೋಮಣ್ಣ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 7,500 ಮುಡಾ ಖಾಲಿ ನಿವೇಶನಗಳ ಹರಾಜಿಗೆ ಮುಂದಾಗಿದ್ದರು. ಅಷ್ಟರಲ್ಲೇ ಅವರಿಗೆ ಗೇಟ್ ಪಾಸ್ ಸಿಕ್ಕಿತ್ತು. ಮುಡಾ ಆಯುಕ್ತರಾದ ಕಾಂತರಾಜ್ ಅವರಿಗೂ ಗೇಟ್ ಪಾಸ್ ಸಿಕ್ಕತ್ತು. ಇದು ಮುಡಾದ ವ್ಯವಸ್ಥೆ. ಆದರೆ ಸಿದ್ದರಾಮಯ್ಯ ಕಾಲದಲ್ಲಾದ್ರು ಇದು ಕ್ಲೀನ್ ಆಗುತ್ತೆ ಅಂದುಕೊಂಡೆ. ಕಳೆದ ನಾಲ್ಕು ವರ್ಷಗಳಿಂದ ಈ ಹಗರಣ ನಡೆದಿದೆ" ಎಂದು ದೂರಿದರು.
ಶಕ್ತಿ ಯೋಜನೆಯಿಂದ ಜನ ಖಾಸಗಿ ಬಸ್ ಹತ್ತುತ್ತಿಲ್ಲ: "ಸರ್ಕಾರದ ಶಕ್ತಿ ಯೋಜನೆಯಿಂದ ಜನ ಖಾಸಗಿ ಬಸ್ಗಳನ್ನು ಹತ್ತುತ್ತಿಲ್ಲ. ಇದರಿಂದ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈ ಬಗ್ಗೆ ಖಾಸಗಿ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಆಳವಡಿಕೆಗೆ ಕೇಂದ್ರ ಸರ್ಕಾರ ನಿಯಮ ಜಾರಿಗೆ ತಂದಿದೆ. ಈ ಮಧ್ಯ ಜಿಪಿಎಸ್ ಅಳವಡಿಸಲು ಒಂದ ರಿಂದ ಎರಡು ಸಾವಿರ ರೂ. ಖರ್ಚಾಗುತ್ತದೆ. ಆದರೆ ಜಿಪಿಎಸ್ ಅಳವಡಿಕೆಗೆ ಖಾಸಗಿ ಕಂಪನಿ 12 ಸಾವಿರ ನಿಗದಿ ಮಾಡಿರುವುದು ಸರಿಯಲ್ಲ, ಇದನ್ನ ವಾಪಸ್ ಪಡೆಯಬೇಕು. ಲೋಪವನ್ನ ಸರಿಮಾಡಬೇಕು" ಎಂದು ಆಗ್ರಹಿಸಿದರು.
Mysuru former MP Pratap Simha slams CM Siddaramaiah, on muda scam, says have lost little respect for CM.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm