Shalini Rajneesh, Rajneesh Goyal: ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವಧಿ ಜುಲೈ 31ಕ್ಕೆ ಕೊನೆ ; ನೂತನ ಕಾರ್ಯದರ್ಶಿ ಸ್ಥಾನಕ್ಕೆ ಪತ್ನಿ ಶಾಲಿನಿ ರಜನೀಶ್ ನೇಮಕಕ್ಕೆ ಸಂಪುಟ ಅಸ್ತು

26-07-24 09:00 pm       Bangalore Correspondent   ಕರ್ನಾಟಕ

ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಹುದ್ದೆಗೆ ಅವರ ಪತ್ನಿ ಶಾಲಿನಿ ರಜನೀಶ್ ನೇಮಕವಾಗೋದು ಬಹುತೇಕ ಅಂತಿಮ ಆಗಿದೆ.

ಬೆಂಗಳೂರು, ಜುಲೈ.26: ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಹುದ್ದೆಗೆ ಅವರ ಪತ್ನಿ ಶಾಲಿನಿ ರಜನೀಶ್ ನೇಮಕವಾಗೋದು ಬಹುತೇಕ ಅಂತಿಮ ಆಗಿದೆ. ಮುಖ್ಯ ಕಾರ್ಯದರ್ಶಿ ಯಾರಾಗಬೇಕು ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.  

ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ನಿವೃತ್ತಿ ಬೆನ್ನಲ್ಲೇ ಪತ್ನಿ ಶಾಲಿನಿ ರಜನೀಶ್‌ ಮುಖ್ಯ ಕಾರ್ಯದರ್ಶಿ ಆಗಲಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಚಿವ ಎಚ್​ ಕೆ ಪಾಟೀಲ್ ಮಾಧ್ಯಮಕ್ಕೆ ಮಾತನಾಡಿ, ಹಾಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಐದು ದಿನದಲ್ಲಿ​ ನಿವೃತ್ತಿ ಆಗುತ್ತಾರೆ. ಹೀಗಾಗಿ ನೂತನ ಸಿಎಸ್​ ಆಗಿ ಶಾಲಿನಿ ರಜನೀಶ್​ಅವರನ್ನು ನೇಮಿಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ರಜನೀಶ್‌ ಗೋಯೆಲ್‌ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯ ಆಗಲಿರುವುದರಿಂದ ನೂತನ ಕಾರ್ಯದರ್ಶಿ ಯಾರು ಎಂಬ ಚರ್ಚೆ ನಡೆದಿತ್ತು. ಜ್ಯೇಷ್ಠತೆಯಲ್ಲಿ ಕ್ರಮವಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಸೇಠ್‌, ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್‌ ಅವರ ಹೆಸರುಗಳು ಕೇಳಿಬಂದಿದ್ದವು. ಇಬ್ಬರ ಪೈಕಿ ಶಾಲಿನಿ ರಜನೀಶ್‌ ಅವರೇ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿತ್ತು. ಇದೀಗ ಶಾಲಿನಿ ರಜನೀಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗುವುದು ಖಚಿತವಾಗಿದೆ.

Shalini Rajneesh will be the new Chief Secretary of Karnataka, Law and Parliamentary Affairs Minister H K Patil said on Friday. The 1989 batch IAS officer will succeed her husband and outgoing Chief Secretary Rajneesh Goel, who is scheduled to retire on July 31.