ಬ್ರೇಕಿಂಗ್ ನ್ಯೂಸ್
27-07-24 03:35 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ.27: ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದ ಪ್ರತಿಷ್ಠಿತ ಪ್ರದೇಶ ಕೋರಮಂಗಲದಲ್ಲಿ ನಡೆದ ಯುವತಿಯ ಕೊಲೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ವಾಸವಾಗಿದ್ದ ಬಿಹಾರ ಮೂಲದ 24 ವರ್ಷ ವಯಸ್ಸಿನ ಯುವತಿ ಕೀರ್ತಿ ಕುಮಾರಿಯನ್ನ ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಈಗಾಗಲೇ ಮಧ್ಯ ಪ್ರದೇಶ ರಾಜ್ಯದಲ್ಲಿ ಪೊಲೀಸರಿಗೆ ಬಲೆಗೆ ಬಿದ್ದಿದ್ದಾನೆ. ಆತ ಈ ಕೃತ್ಯ ಎಸಗಲು ಕಾರಣವೇನು ಅನ್ನೋದನ್ನೂ ಪೊಲೀಸರು ಪತ್ತೆ ಹಚ್ಚಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೊಲೆಗೀಡಾದ ಯುವತಿ ಅಭಿಷೇಕನ ಪ್ರಿಯತಮೆ ಎಂದು ಹೇಳಲಾಗಿತ್ತು. ಆದ್ರೆ ಪೊಲೀಸರ ತನಿಖೆಯಲ್ಲಿ ಕೃತಿ ಕುಮಾರಿಯು ಅಭಿಷೇಕನ ಪ್ರಿಯತಮೆಯ ರೂಮ್ಮೇಟ್ ಅನ್ನೋದು ತಿಳಿದುಬಂದಿದೆ.
ಇಬ್ಬರ ಜಗಳ ಬಿಡಿಸಲು ಹೋಗಿ ಬಲಿಯಾದ ಯುವತಿ !
ಹೌದು.. ಕೊಲೆ ಆರೋಪಿ ಅಭಿಷೇಕ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಕೀರ್ತಿ ಕುಮಾರಿ ಅವರ ರೂಂ ಮೇಟ್ ಆಗಿದ್ದಳು. ಅಭಿಷೇಕ್ ಹಾಗೂ ಕೀರ್ತಿ ಕುಮಾರಿ ನಡುವೆ ಗೆಳೆತನವೂ ಇತ್ತು. ಈ ಮಧ್ಯೆ ಅಭಿಷೇಕ್ ಕೆಲಸ ಕಳೆದುಕೊಂಡಿದ್ದ. ನಿರುದ್ಯೋಗಿಯಾಗಿದ್ದ. ಹೀಗಾಗಿ ಹಣಕಾಸಿನ ವಿಚಾರ ಸಂಬಂಧ ತನ್ನ ಪ್ರಿಯತಮೆ ಜೊತೆ ಅಭಿಷೇಕ್ ಆಗಾಗ ಜಗಳ ಆಡುತ್ತಿದ್ದ.
ಇವರಿಬ್ಬರ ಜಗಳ ತಾರಕಕ್ಕೆ ಏರಿದಾಗಲೆಲ್ಲಾ ಗೆಳೆತನದ ಸಲುಗೆಯಿಂದ ಮಧ್ಯ ಪ್ರವೇಶ ಮಾಡುತ್ತಿದ್ದ ಕೀರ್ತಿ ಕುಮಾರಿ, ಜಗಳ ಬಿಡಿಸಲು ಮುಂದಾಗುತ್ತಿದ್ದಳು. ಆದರೆ, ಅಭಿಷೇಕ್ ಹಾಗೂ ಆತನ ಪ್ರಿಯತಮೆಯ ಕಿತ್ತಾಟ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಹೀಗಾಗಿ, ತನ್ನ ಗೆಳತಿಯನ್ನು ಅಭಿಷೇಕ್‌ನಿಂದ ರಕ್ಷಣೆ ಮಾಡಲು ಮುಂದಾದ ಕೀರ್ತಿ ಕುಮಾರಿ, ಆಕೆಯ ಜೊತೆ ಬೇರೆ ಪಿಜಿ ಹಾಸ್ಟೆಲ್‌ಗೆ ವರ್ಗಾವಣೆಯಾದಳು. ಕೀರ್ತಿ ಕುಮಾರಿ ಹಾಗೂ ಅಭಿಷೇಕ್‌ನ ಪ್ರಿಯತಮೆ ಇಬ್ಬರೂ ಅಭಿಷೇಕ್‌ನ ಮೊಬೈಲ್ ಕರೆ ಸ್ವೀಕರಿಸೋದನ್ನ ನಿಲ್ಲಿಸಿದ್ದರು.
ತನಗೆ ಕೆಲಸ ಇಲ್ಲ, ಇತ್ತ ಪ್ರೀತಿಸುತ್ತಿದ್ದ ಯುವತಿಯೂ ದೂರವಾದಳು. ಇದಕ್ಕೆಲ್ಲಾ ಕೀರ್ತಿ ಕುಮಾರಿಯೇ ಕಾರಣ ಎಂದು ಸಿಟ್ಟಿಗೆದ್ದ ಅಭಿಷೇಕ್, ಆಕೆಯನ್ನು ಮುಗಿಸಿ ಬಿಡ್ಬೇಕು ಎಂದು ತೀರ್ಮಾನಿಸಿ ಚಾಕು ಸಮೇತ ಆಕೆ ಇದ್ದ ಪಿಜಿಗೆ ನುಗ್ಗಿದ್ದ. ಪಿಜಿಯಲ್ಲಿ ಇದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನ ಗಮನಿಸಿದರೆ, ಅಭಿಷೇಕ್ ಎಷ್ಟರ ಮಟ್ಟಿಗೆ ಬರ್ಬರವಾಗಿ ಹತ್ಯೆ ಮಾಡಿದ ಅನ್ನೋದು ಗೊತ್ತಾಗುತ್ತದೆ.
ಕೀರ್ತಿಯನ್ನು ಆಕೆಯ ರೂಂನಿಂದ ಹೊರಗೆ ಎಳೆ ತಂದು ಆಕೆಗೆ ಹಲವು ಬಾರಿ ಚಾಕುವಿನಿಂದ ಚುಚ್ಚುತ್ತಾನೆ. ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದಾಗಲೆಲ್ಲಾ ಆತ ಚುಚ್ಚುತ್ತಲೇ ಇರುತ್ತಾನೆ. ಕೀರ್ತಿ ಪ್ರಜ್ಞಾಹೀನಳಾಗಿ ಕೆಳಗೆ ಬಿದ್ದಾಗಲೂ ಅಭಿಷೇಕ್ ಸುಮ್ಮನೆ ಬಿಡೋದಿಲ್ಲ. ಆಕೆಯ ಜುಟ್ಟು ಹಿಡಿದು ಎತ್ತಿ ಮತ್ತೆ ಮತ್ತೆ ಚುಚ್ಚುತ್ತಾನೆ. ಆಕೆ ಇನ್ನೂ ಉಸಿರಾಡುತ್ತಿದ್ದಾಳೆಯೇ ಎಂದು ಗಮನಿಸುತ್ತಾನೆ. ಆಕೆ ಉಸಿರಾಡುತ್ತಿರೋದು ಕಂಡು ಬಂದ ಕೂಡಲೇ ಆಕೆಯ ಕುತ್ತಿಗೆಯನ್ನು ಸೀಳಿ ಓಡಿ ಹೋಗುತ್ತಾನೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಮಧ್ಯ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅಭಿಷೇಕ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತರಲಾಗುತ್ತಿದೆ. ಬೆಂಗಳೂರಿಗೆ ಬಂದ ಬಳಿಕ ವಿಚಾರಣೆ ಮಾಡ್ತೀವಿ.
ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಪಿ.ಜಿಯಲ್ಲಿ ನಡೆದಿದ್ದ ಯುವತಿ ಹತ್ಯೆ ಪ್ರಕರಣದ ಆರೋಪಿಯ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಧ್ಯಪ್ರದೇಶದಲ್ಲಿದ್ದ ಆರೋಪಿಯ ಮಾಹಿತಿ ಕಲೆಹಾಕಿ ಬಂಧಿಸಲಾಗಿದ್ದು, ಟ್ರಾನ್ಸಿಟ್ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಪಿಯ ಹಿನ್ನೆಲೆ ಏನು? ಎಷ್ಟು ವರ್ಷಗಳಿಂದ ಪ್ರೀತಿಸ್ತಿದ್ರು? ಯಾವ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿದ್ದ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದಿದ್ದಾರೆ.
ಜುಲೈ 23ರಂದು ಕೋರಮಂಗಲದ ವಿ.ಆರ್. ಲೇಔಟ್‌ನಲ್ಲಿರುವ ಪಿಜಿಯಲ್ಲಿ ಬಿಹಾರ ಮೂಲದ ಕೃತಿ ಕುಮಾರಿ (24) ಎಂಬ ಯುವತಿಯನ್ನು ಹತ್ಯೆಗೈದು ಆರೋಪಿ ಅಭಿಷೇಕ್ ಊರಿಗೆ ಹೋಗಿ, ತನ್ನ ಪೋಷಕರನ್ನು ಸಂಪರ್ಕಿಸಿದ್ದ. ಯುವತಿಯೊಬ್ಬಳನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದ. ಮತ್ತೊಂದೆಡೆ ಆರೋಪಿಯ ಪೋಷಕರನ್ನು ಸಂಪರ್ಕಿಸಿದ್ದ ಪೊಲೀಸರು, ಮಧ್ಯಪ್ರದೇಶದ ಸ್ಥಳೀಯ ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ.
Koramangala pg murder case, accused arrested in Madhya Pradesh, murder over interfering in room mate love matter. Days after a 24-year-old woman from Bihar was stabbed to death at a paying guest accommodation in Bengaluru, the police have arrested the accused from Madhya Pradesh. The accused Abhishek, who has been identified as the ex-boyfriend of the victim’s PG roommate, hails from Bihar. He is being brought to Bengaluru for further investigation, a senior police official said.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm