ಬ್ರೇಕಿಂಗ್ ನ್ಯೂಸ್
28-07-24 10:44 pm HK News Desk ಕರ್ನಾಟಕ
ಕಾರವಾರ, ಜುಲೈ 28: ಅಂಕೋಲಾದ ಶಿರೂರಿನ ಗುಡ್ಡ ಕುಸಿದ ಪ್ರದೇಶದಲ್ಲಿ 12 ದಿನಗಳ ಪರ್ಯಂತ ನಡೆದ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ನದಿಯಲ್ಲಿ ನಿಲ್ಲದ ಕೆಸರು ನೀರಿನ ಪ್ರವಾಹ ಮತ್ತು ಮುಂದಿನ 21 ದಿನಗಳ ಕಾಲ ನಿರಂತರ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಭಾನುವಾರ 12ನೇ ದಿನದ ಕಾರ್ಯಾಚರಣೆಯಲ್ಲಿ ನೌಕಾಪಡೆ ಯೋಧರು ಮತ್ತು ಈಶ್ವರ್ ಮಲ್ಪೆ ತಂಡದ ಸದಸ್ಯರು ನದಿಯಲ್ಲಿ ಮುಳುಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಕೆಸರು ನೀರಿನಿಂದಾಗಿ ನದಿಯಲ್ಲಿ ಮುಳುಗಿದ ತಂಡದ ಸದಸ್ಯರಿಗೆ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಬಿರುಸಿನಿಂದ ಸಾಗುತ್ತಿರುವ ಮಣ್ಣು ಮಿಶ್ರಿತ ನೀರಿನಿಂದಾಗಿ ಆಳದಲ್ಲಿ ಬರಿಗಣ್ಣಿಗೆ ಸ್ಪಷ್ಟ ಗೋಚರ ಸಾಧ್ಯವಾಗುತ್ತಿಲ್ಲ. ಗುಡ್ಡ ಕುಸಿತದಿಂದ ಮರಗಳು, ಕಟ್ಟಡದ ಶೀಟುಗಳು, ಕಲ್ಲುಗಳು, ಮರದ ದಿಮ್ಮಿಗಳು ನದಿಯ ಆಳದಲ್ಲಿ ಕಂಡುಬರುತ್ತಿದ್ದು ಬೇರಾವುದೇ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾರವಾರ ಶಾಸಕ ಸತೀಶ್ ಸೈಲ್ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಇನ್ನೆರಡು ದಿನದಲ್ಲಿ ಕೇರಳದ ತ್ರಿಶ್ಶೂರಿನಿಂದ ಡ್ರೆಡ್ಜಿಂಗ್ ಮೆಷಿನ್ ತರಲಾಗುತ್ತದೆ. ನಾವು ಖರ್ಚು ವೆಚ್ಚದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸಿವೆ. ನದಿಯ ಆಳದಲ್ಲಿ ಟ್ರಕ್ ಇರುವುದನ್ನು ಪತ್ತೆ ಮಾಡಲಾಗಿದೆ. ಮರದ ದಿಮ್ಮಿಗಳ ಸಹಿತ ಲಾರಿ ಅಂದಾಜು 25 ಟನ್ ಭಾರ ಹೊಂದಿದ್ದು, ಅದರಲ್ಲಿನ ಮರದ ದಿಮ್ಮಿಗಳನ್ನು ಖಾಲಿ ಮಾಡಿಯೇ ನದಿಯಿಂದ ಮೇಲೆತ್ತಬೇಕಾಗುತ್ತದೆ.
ಕೆಸರು ಮಣ್ಣು, ಕಲ್ಲುಗಳು, ದೊಡ್ಡ ಆಲದ ಮರವೊಂದು ಲಾರಿಯ ಮೇಲೆ ಬಿದ್ದಿರುವ ಸಾಧ್ಯತೆಯಿದೆ. ಅದರ ಮೇಲಿನಿಂದ ನದಿಯ ನೀರು ಹರಿಯುತ್ತಿದೆ. ನಾವು ಅರ್ಜುನ್ ಪತ್ತೆಗಾಗಿ ಸಾಕಷ್ಟು ಶ್ರಮ ಹಾಕಿದ್ದೇವೆ. ಅಲ್ಲದೆ, ಇನ್ನಿಬ್ಬರ ಹುಡುಕಾಟವನ್ನೂ ಮಾಡಿದ್ದೇವೆ. ನಾಪತ್ತೆಯಾಗಿರುವ ಇನ್ನೊಬ್ಬರ ಪುತ್ರಿ ತನ್ನ ತಂದೆಯ ಅಂಗಿಯ ತುಂಡನ್ನಾದರೂ ಹುಡುಕಿ ಕೊಡಿ ಎಂದು ಹೇಳುತ್ತಿದ್ದಾರೆ. ಕಾರ್ಯಾಚರಣೆ ಬಗ್ಗೆ ನಾವು ಹಲವಾರು ಕಡೆಯಿಂದ ಅಭಿಪ್ರಾಯ ಪಡೆದಿದ್ದೇವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ನಿರಂತರ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾನುವಾರ ಸಂಜೆಯ ವೇಳೆಗೆ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ಮುಖ್ಯಮಂತ್ರಿಗೆ ಪಿಣರಾಯಿ ಪತ್ರ
ಇದರ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಕಾರ್ಯಾಚರಣೆ ನಿಲ್ಲಿಸದಂತೆ ಮನವಿ ಮಾಡಿದ್ದಾರೆ. ಕಾರ್ಯಾಚರಣೆ ನಿಲ್ಲಿಸಲಾಗುತ್ತಿದೆ ಎನ್ನುವ ವರದಿಗಳು ಬರುತ್ತಿದ್ದು, ಯಾವುದೇ ಕಾರಣಕ್ಕೂ ಪಾಸಿಟಿವ್ ರಿಸಲ್ಟ್ ಬಾರದೇ ಹುಡುಕಾಟ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಪಿಣರಾಯಿ ವಿಜಯನ್, ತನ್ನ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದಾರೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕೇರಳದ ಕೋಜಿಕ್ಕೋಡ್ ಮೂಲದ ಅರ್ಜುನ್ (31) ಚಲಾಯಿಸುತ್ತಿದ್ದ ಮರದ ದಿಮ್ಮಿಗಳನ್ನು ಹೊತ್ತಿದ್ದ ಲಾರಿ ನಾಪತ್ತೆಯಾಗಿತ್ತು. ಆ ಲಾರಿ ಗಂಗಾವಳಿ ನದಿಯ ಆಳದಲ್ಲಿ ಸಿಲುಕಿಕೊಂಡಿದೆ ಎನ್ನಲಾಗುತ್ತಿದ್ದು, ಕೇರಳದ ಮಲೆಯಾಳಂ ಚಾನೆಲ್ಗಳು ಅರ್ಜುನ್ ಪತ್ತೆಗಾಗಿ ನಿರಂತರ ಅಭಿಯಾನ ನಡೆಸುತ್ತಿರುವುದು ದೇಶದ ಗಮನ ಸೆಳೆಯುವಂತೆ ಮಾಡಿದೆ.
The Karnataka government will resume the rescue efforts to find three individuals -- including Kozhikode native Arjun -- who went missing in a massive landslide in Ankola once the water level in Ankola once the water level in the Gangavali River decreases, said Karwar MLA Satish Krishna Sail.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm