ಬ್ರೇಕಿಂಗ್ ನ್ಯೂಸ್
31-07-24 09:57 pm HK News Desk ಕರ್ನಾಟಕ
ಹಾಸನ, ಜುಲೈ.31: ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ಶಿರಾಡಿ ಘಾಟ್ ರಸ್ತೆಯಲ್ಲಿ ಬುಧವಾರ ಸಂಜೆ ಮತ್ತೆ ಗುಡ್ಡ ಕುಸಿತವಾಗಿದ್ದು ಎರಡು ಕಂಟೇನರ್, ಒಂದು ಟ್ಯಾಂಕರ್ ಮಣ್ಣಿನಲ್ಲಿ ಸಿಲುಕಿಕೊಂಡಿದೆ. ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲು ಬಳಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ಎರಡು ಕಂಟೇನರ್, ಒಂದು ಟ್ಯಾಂಕರ್ ಮಣ್ಣಿನಲ್ಲಿ ಸಿಲುಕಿದ್ದು ಅದರ ಚಾಲಕರು ಹೊರಬರಲು ಪರದಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಮೂವರು ಚಾಲಕರನ್ನು ರಕ್ಷಿಸಿದ್ದಾರೆ. ಇದೇ ವೇಳೆ, ಸಕಲೇಶಪುರದ ದೊಡ್ಡತಪ್ಲು ಬಳಿ ರೈಲ್ವೆ ಹಳಿಯ ಮೇಲೂ ಗುಡ್ಡ ಕುಸಿದಿದ್ದು ಪೂರ್ತಿ ಸಂಪರ್ಕ ಕಡಿತಗೊಂಡಿದೆ. ಟ್ಯಾಂಕರ್ ಒಂದು ರಸ್ತೆಯಿಂದ ಪಲ್ಟಿಯಾಗಿದ್ದು ರೈಲು ಹಳಿಯತ್ತ ಬೀಳುವ ಹಂತದಲ್ಲಿ ನಿಂತುಬಿಟ್ಟಿದೆ.
ಈಗಾಗಲೇ ಎಡಕುಮೇರಿ ಬಳಿ ಗುಡ್ಡ ಕುಸಿತದಿಂದ ಸಕಲೇಶಪುರ- ಮಂಗಳೂರು ರೈಲ್ವೆ ಮಾರ್ಗ ಬಂದ್ ಆಗಿದ್ದು ತ್ವರಿತಗತಿಯಲ್ಲಿ ಅಲ್ಲಿ ಕಾಮಗಾರಿ ನಡೆಯುತ್ತಿತ್ತು. ಇದೀಗ ದೊಡ್ಡತಪ್ಲು ಬಳಿ ರೈಲ್ವೇ ಹಳಿಯ ಮೇಲೆ ಮಣ್ಣು ಕುಸಿತಗೊಂಡಿದ್ದು ದುರಸ್ತಿ ಮಾಡಲು ಸಂಕಷ್ಟ ಎದುರಾಗಿದೆ. ಎಡಕುಮೇರಿ ಬಳಿಗೆ ಸಕಲೇಶಪುರದಿಂದಲೇ ಪ್ರತಿನಿತ್ಯ ಕಾರ್ಮಿಕರು ಹಾಗೂ ತಿಂಡಿ, ಊಟ ಇನ್ನಿತರ ಸಾಮಾಗ್ರಿಗಳನ್ನು ಗೂಡ್ಸ್ ರೈಲಿನಲ್ಲಿ ಸಾಗಿಸುತ್ತಿದ್ದರು. ಇದೀಗ ಮಣ್ಣು ಕುಸಿದಿರುವುದರಿಂದ ರಸ್ತೆ ದುರಸ್ತಿಗೆ ತೆರಳುವುದಕ್ಕೂ ಸಕಲೇಶಪುರ ರೈಲು ಮಾರ್ಗದಿಂದ ಸಂಪರ್ಕ ಕಟ್ ಆಗಿದೆ.
Heavy rain in Mangalore cases Landslide again at Shiradi Ghat, two container trucks under soil. The incident took place at Doddataplu in Sakleshpur taluk on Wednesday evening, burying several vehicles under the debris.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm