ಬ್ರೇಕಿಂಗ್ ನ್ಯೂಸ್
03-08-24 08:34 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್.3: ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಪರಶುರಾಮ್ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರಡ್ಡಿ ಪಾಟೀಲ್ ಮತ್ತು ಆತನ ಪುತ್ರ ಸನ್ನಿಗೌಡ ಕಾರಣ ಎಂಬ ಆರೋಪ ಕೇಳಿಬಂದಿದೆ. 30 ಲಕ್ಷ ಹಣಕ್ಕಾಗಿ ಶಾಸಕ ಮತ್ತು ಪುತ್ರ ಪೀಡಿಸಿದ್ದು, ಹಣ ನೀಡದ ಕಾರಣಕ್ಕೆ ಹೊಲೆಯ ಜಾತಿಯವನು ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಇದೇ ಕಾರಣದಿಂದ ಮಾನಸಿಕವಾಗಿ ನೊಂದು ತನ್ನ ಪತಿ ಸಾವಿಗೀಡಾಗಿದ್ದಾರೆಂದು ಪರಶುರಾಮ್ ಪತ್ನಿ ಆರೋಪಿಸಿದ್ದಾರೆ.
ತನ್ನ ಪತಿಯ ಸಾವಿಗೆ ಶಾಸಕ ಮತ್ತು ಆತನ ಪುತ್ರನೇ ಕಾರಣ ಎಂದು ಆರೋಪಿಸಿ ಯಾದಗಿರಿ ಎಸ್ಪಿ ಕಚೇರಿ ಎದುರಲ್ಲೇ ಪರಶುರಾಮ್ ಪತ್ನಿ ಶ್ವೇತಾ ಶನಿವಾರ ಇಡೀ ದಿನ ಧರಣಿ ನಡೆಸಿದ್ದಾರೆ. ಅಲ್ಲದೆ, ತನ್ನ ಪತಿಯ ಸಾವಿಗೆ ಶಾಸಕರ ಒತ್ತಡವೇ ಕಾರಣ, ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಯಾದಗಿರಿ ಠಾಣೆಗೆ ಶ್ವೇತಾ ದೂರು ನೀಡಿದ್ದು, ಇದರ ಆಧಾರದಲ್ಲಿ ಶಾಸಕ ಮತ್ತು ಪುತ್ರನ ವಿರುದ್ಧ ಪೊಲೀಸರು ಕಡೆಗೂ ಎಫ್ಐಆರ್ ದಾಖಲಿಸಿದ್ದಾರೆ. ಯಾದಗಿರಿ ನಗರ ಠಾಣೆಗೆ ಬಂದು ಕೇವಲ ಏಳು ತಿಂಗಳಾಗಿದ್ದು, ಹುದ್ದೆಯಲ್ಲಿ ಉಳಿಯಬೇಕಿದ್ದರೆ 30 ಲಕ್ಷ ಭಕ್ಷೀಸು ಕೊಡಬೇಕು ಎಂದು ಶಾಸಕರು ಪೀಡಿಸುತ್ತಿದ್ದರು. ಈ ಬಗ್ಗೆ ಪರಶುರಾಮ್ ದಿನವೂ ಬಂದು ತನ್ನಲ್ಲಿ ಹೇಳಿ ಕೊರಗುತ್ತಿದ್ದರು. ಒಂದು ವರ್ಷ ಉಳಿಸಿಕೊಡಿ, ಆನಂತರ ವರ್ಗಾವಣೆ ಮಾಡಿ ಎಂದು ಗೋಗರೆದರೂ ಶಾಸಕರು ಕೇಳಿರಲಿಲ್ಲ. ಅವರ ಕಚೇರಿಗೆ ಹೋದಾಗ ಹೊಲೆಯ ಜಾತಿಯವನು, ಕೆಳ ಜಾತಿಯೆಂದು ಹೇಳಿ ಹೀನಾಯವಾಗಿ ನಡೆಸಿಕೊಂಡಿದ್ದಾರೆ.
ಅಲ್ಲದೆ, ಎರಡು ದಿನಗಳ ಹಿಂದೆ ಯಾದಗಿರಿ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಅದರಂತೆ, ಯಾದಗಿರಿ ನಗರ ಠಾಣೆಯಲ್ಲಿ ಬೀಳ್ಕೊಡುಗೆ ಪಡೆದು ಬಂದಿದ್ದ ಪರಶುರಾಮ್ ಮನೆಯಲ್ಲೇ ಉಳಿದುಕೊಂಡಿದ್ದರು. ಈ ನಡುವೆ, ತಾನು ಗರ್ಭಿಣಿಯಾಗಿದ್ದರಿಂದ ತನ್ನ ತವರು ಮನೆ ರಾಯಚೂರಿಗೆ ತೆರಳಿದ್ದೆ. ಆಗಸ್ಟ್ 2ರಂದು ಸಂಜೆ ವೇಳೆಗೆ ಮಾವ ಜನಕಮುನಿ ಫೋನ್ ಮಾಡಿ, ಗಂಡನ ಮೂಗಿನಲ್ಲಿ ರಕ್ತ ಬರುತ್ತಿದ್ದ ಬಗ್ಗೆ ಹೇಳಿದ್ದರಲ್ಲದೆ, ಆಸ್ಪತ್ರೆಗೆ ದಾಖಲಿಸಿದ್ದರು. ನಾವು ಕೂಡಲೇ ಆಸ್ಪತ್ರೆಗೆ ಧಾವಿಸಿದ್ದು ಅಷ್ಟರಲ್ಲಿ ಪರಶುರಾಮ್ ಸಾವನ್ನಪ್ಪಿದ್ದರು. ತನ್ನ ಪತಿಯ ಸಾವಿಗೆ ಕಾಂಗ್ರೆಸ್ ಶಾಸಕರು ಹಣಕ್ಕಾಗಿ ಪೀಡಿಸಿದ್ದೇ ಕಾರಣ. ಅದೇ ಒತ್ತಡ, ಕಿರುಕುಳದಿಂದ ಸಾವಿಗೀಡಾಗಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದಾರೆ.
ಕಡು ಬಡತನ ಮೆಟ್ಟಿ ನಿಂತಿದ್ದ ಪರಶು
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ್ ಕಡು ಬಡತನದಿಂದ ಮೇಲೆ ಬಂದವರಾಗಿದ್ದರು. ಕಲಿಕೆ ಬಿಟ್ಟು ಒಮ್ಮೆ ಕೂಲಿ ಕೆಲಸ ಮಾಡಿಕೊಂಡಿದ್ದವರು ಸರ್ಕಾರಿ ಅಧಿಕಾರಿಯಾಗಲೇಬೇಕೆಂದು ಹಂಬಲಿಸಿ ಸತತ ಶ್ರಮಪಟ್ಟು ಪಿಎಸ್ಐ ಹುದ್ದೆಗೇರಿದ್ದರು. ಇವರ ಹೆತ್ತವರು ಕೂಲಿ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದರು. ಸಣ್ಣದರಲ್ಲೇ ಏನಾದ್ರೂ ಸಾಧಿಸಬೇಕೆಂದು ಗಂಗಾವತಿ ಕಾಲೇಜಿನಲ್ಲಿ ಪಿಯುಸಿಗೆ ಸೈನ್ಸ್ ಪಡೆದಿದ್ದರು. ಆದರೆ, ನಾಲ್ಕು ವಿಷಯದಲ್ಲಿ ಫೇಲಾಗಿದ್ದರಿಂದ ಪರಶು ಕನಸು ಭಗ್ನವಾಗಿತ್ತು. ಆನಂತರ, ಶಿಕ್ಷಣ ಬಿಟ್ಟು ಬೆಂಗಳೂರಿಗೆ ತೆರಳಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನ ಗಾಲ್ಫ್ ಕ್ಲಬ್ ನಲ್ಲಿ ಚೆಂಡು ಹೆಕ್ಕುವ ಕೆಲಸ ಮಾಡುತ್ತಿದ್ದಾಗಲೇ ಮತ್ತೆ ಓದಬೇಕೆಂದು ಬಯಸಿ ಊರಿಗೆ ಮರಳಿದ್ದರು.
ಪಿಯುಸಿ ಫೇಲ್ ಆದರೂ ಬಿಡಲಿಲ್ಲ
ಮತ್ತೆ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಓದಲು ಸೇರಿ, ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು. ಆನಂತರ, ಬಿಎ ಪದವಿ ಮುಗಿಸಿದ್ದಲ್ಲದೆ ಸರ್ಕಾರಿ ಕೆಲಸಕ್ಕಾಗಿ ನಾನಾ ರೀತಿಯ ಪರೀಕ್ಷೆಗಳನ್ನು ಬರೆಯತೊಡಗಿದ್ದರು. ಇದೇ ವೇಳೆ, ಜೈಲ್ ವಾರ್ಡನ್ ಕೆಲಸಕ್ಕೆ ಆಯ್ಕೆಗೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐದು ವರ್ಷ ಕೆಲಸ ಮಾಡಿದ್ದಾರೆ. ಆನಂತರ, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಎಫ್ ಡಿಎ ಆಗಿಯೂ ಕೆಲ ಸಮಯ ಕೆಲಸ ಮಾಡಿದ್ದಾರೆ. ಇದೇ ವೇಳೆ, ಪಂಚಾಯತ್ ಪಿಡಿಓ ಸೇರಿದಂತೆ ಒಂದಲ್ಲ ಎಂಟು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದು ಪರಶುರಾಮ್ ಸಾಧನೆಯಾಗಿತ್ತು.
ಒಂದಲ್ಲ ಎಂಟು ಹುದ್ದೆ ಅರಸಿ ಬಂದಿತ್ತು
ತಾನೊಬ್ಬ ಪೊಲೀಸ್ ಅಧಿಕಾರಿಯಾಗಬೇಕೆಂದು ಪರಶುರಾಮ್ ಕೆಲಸ ಮಾಡುತ್ತಲೇ ರಾತ್ರಿ ವೇಳೆ ಅಧ್ಯಯನ ನಡೆಸಿ ಪಿಎಸ್ಐ ಪರೀಕ್ಷೆ ಬರೆದಿದ್ದರು. 2017ರಲ್ಲಿ ಆ ಪರೀಕ್ಷೆಯನ್ನೂ ತೇರ್ಗಡೆ ಮಾಡಿಕೊಂಡು ಪಿಎಸ್ಐ ಹುದ್ದೆಗೇರಿದ್ದರು. ಆನಂತರ, ಯಾದಗಿರಿ ಜಿಲ್ಲೆಯಲ್ಲೇ ಕೆಲಸ ಶುರು ಮಾಡಿದ್ದರು. ಈ ನಡುವೆ, ಸರಕಾರಿ ಹುದ್ದೆ ಪಡೆಯುವುದು ಎಷ್ಟು ಸುಲಭ ಎನ್ನುತ್ತಲೇ ಹೊಸ ಯುವಕರಿಗೆ ಮೋಟಿವೇಷನ್ ಆಗಿ ಭಾಷಣ ಮಾಡುತ್ತ ಹುರಿದುಂಬಿಸುತ್ತಿದ್ದರು. ಒಮ್ಮೆ ಫೇಲ್ ಆಯ್ತು ಅಂತ ಧೃತಿಗೆಡುವುದು ಬೇಡ, ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ಯುವಕರಿಗೆ ಪ್ರೇರಣಾಕಾರಿ ಭಾಷಣ ಮಾಡುತ್ತಿದ್ದರು.
ಕಡು ಬಡತನ, ಕೀಳು ಜಾತಿ ಎಂಬ ಹಣೆಪಟ್ಟಿ ಇದ್ದರೂ, ಅದನ್ನೆಲ್ಲ ಮೆಟ್ಟಿ ನಿಂತು ಪರಶುರಾಮ್ ಪೊಲೀಸ್ ಅಧಿಕಾರಿಯಾಗಿದ್ದು ಕೊಪ್ಪಳದ ಜನರ ಪಾಲಿಗೆ ಅಚ್ಚರಿಯೂ ಆಗಿತ್ತು. ಸಾಧನೆಯ ಸರದಾರ ಎಂದು ಹೆಸರು ಮಾಡಿದ್ದ ಪರಶುರಾಮ್, ಪೊಲೀಸ್ ವೃತ್ತಿ ಜೀವನದ ಅತ್ಯಲ್ಪ ಅವಧಿಯಲ್ಲೇ ಕೆಟ್ಟ ಗಳಿಗೆಯನ್ನೂ ಅನುಭವಿಸಿದ್ದಾರೆ. ರಾಜಕೀಯದವರು ವರ್ಗಾವಣೆಗೆ ಹಣ ಕೇಳಿ ಪೀಡಿಸುತ್ತಾರೆಂಬ ಆರೋಪ ಹಿಂದಿನಿಂದಲೂ ಇತ್ತು. ಆದರೆ, ಯುವಕರ ಪ್ರೇರಕ ಶಕ್ತಿಯಾಗಿದ್ದ ವ್ಯಕ್ತಿಯೇ ಈ ರೀತಿ ರಾಜಕಾರಣಿಗಳ ಕರಾಳ ದಂಧೆಗೆ ಬಲಿಯಾಗಿರುವುದು ವಿಪರ್ಯಾಸ.
Yadagiri police inspector death, detailed story of suicide, congress MLA torture exposed by wife. The suspicious death of a 35-year-old sub-inspector (SI) at his residence has stirred a major controversy in Karnataka as his family has alleged mental torture by a local Congress MLA. The family alleged that the deceased SI Parashurama had given Rs 30 lac for a posting at the Yadgir city police station to the MLA.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm