Ravish Nayak, Police, Independence day award: ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್, ಮಂಗಳೂರಿನ ಎಸಿಪಿ ರವೀಶ್ ನಾಯ್ಕ್ ಸೇರಿ ರಾಜ್ಯದ 18 ಮಂದಿ ರಾಷ್ಟ್ರಪತಿ ಸೇವಾ ಪದಕಕ್ಕೆ ಆಯ್ಕೆ 

14-08-24 05:09 pm       Bangalore Correspondent   ಕರ್ನಾಟಕ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರದಾನ ಮಾಡುವ 'ವಿಶಿಷ್ಟ ಸೇವಾ ಪದಕ' ಮತ್ತು 'ಶ್ಲಾಘನೀಯ ಸೇವಾ ಪದಕ'ಕ್ಕೆ ಕರ್ನಾಟಕ ರಾಜ್ಯದಿಂದ 19 ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಬೆಂಗಳೂರು, ಆಗಸ್ಟ್.14: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರದಾನ ಮಾಡುವ 'ವಿಶಿಷ್ಟ ಸೇವಾ ಪದಕ' ಮತ್ತು 'ಶ್ಲಾಘನೀಯ ಸೇವಾ ಪದಕ'ಕ್ಕೆ ಕರ್ನಾಟಕ ರಾಜ್ಯದಿಂದ 19 ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಉತ್ತಮ ಸೇವೆಗಾಗಿ ಹೆಸರು ಮಾಡಿದ ಪೊಲೀಸ್ ಅಧಿಕಾರಿಗಳನ್ನು ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. 

  • ಚಂದ್ರಶೇಖರ್ ಎಂ, IPS, ADGP, ISD, ಬೆಂಗಳೂರು - ಶ್ಲಾಘನೀಯ ಸೇವಾ ಪದಕ ಪುರಸ್ಕೃತರು, 
  • ಜೋಶಿ ಶ್ರಿನಾಥ್ ಮಹಾದೇವ, IPS ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ (ಬೆಂಗಳೂರು), 
  • ಸಿ.ಕೆ. ಬಾಬಾ, IPS ಪೊಲೀಸ್ ಅಧೀಕ್ಷಕರು (ಬೆಂಗಳೂರು ಗ್ರಾಮಾಂತರ), 
  • ರಾಮಗೊಂಡ ಬಿ.ಬಸರಗಿ, ಅಪರ ಪೊಲೀಸ್ ಅಧಿಕ್ಷರು (ಬಳ್ಳಾರಿ ಜಿಲ್ಲೆ)
  • ಎಂ.ಡಿ.ಶರತ್, ಪೊಲೀಸ್ ಅಧೀಕ್ಷರು, ಸಿಐಡಿ (ಬೆಂಗಳೂರು)
  • ವಿ.ಸಿ.ಗೋಪಾಲರೆಡ್ಡಿ, DCP, ಸಿಎಆರ್ ಪಶ್ಚಿಮ (ಬೆಂಗಳೂರು ನಗರ)
  • ಮುರಳಿಧರ ಪಿ, DYSP, ಚಿಂತಾಮಣಿ ಉಪವಿಭಾಗ (ಚಿಕ್ಕಬಳ್ಳಾಪುರ)
  • ಗಿರಿ ಕೆ.ಸಿ, DYSP ಚನ್ನಪಟ್ಟಣ ಉಪವಿಭಾಗ (ರಾಮನಗರ )
  • ಬಸವೇಶ್ವರ, ಸಹಾಯಕ ನಿರ್ದೇಶಕರು ರಾಜ್ಯ ಗುಪ್ತವಾರ್ತೆ (ಕಲಬುರಗಿ)
  • ಕೆ. ಬಸವರಾಜ, DYSP, ISD (ಕಲಬುರಗಿ)
  • ಎನ್‌.ಮಹೇಶ್, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ (ಬೆಂಗಳೂರು)
  • ರವೀಶ್ ಎಸ್‌.ನಾಯ್ಕ್, ACP, CCRB (ಮಂಗಳೂರು ನಗರ)
  • ಪ್ರಭಾಕರ್ ಜಿ, ACP ಸಂಚಾರ ಯೋಜನೆ (ಬೆಂಗಳೂರು ನಗರ)
  • ಹರೀಶ ಎಚ್‌.ಆರ್‌, ಸಹಾಯಕ ಕಮಾಂಡೆಂಟ್, 11ನೇ ಪಡೆ KSRP (ಹಾಸನ)
  • ಎಸ್‌.ಮಂಜುನಾಥ್, RPI 03ನೇ ಪಡೆ, KSRP (ಬೆಂಗಳೂರು)
  • ಮಂಜುನಾಥ ಎಸ್. ಕಲ್ಲೇದೇವರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, FBI (ದಾವಣಗೆರೆ) 
  • ಶ್ರೀಮತಿ ಗೌರಮ್ಮ, ASI, CID (ಬೆಂಗಳೂರು)
  • ಮೆಹಬೂಬ್ ಸಾಹೇಬ್ ಎನ್. ಮುಜಾವರ್, CHC ಮನಗೂಳಿ ಪೊಲೀಸ್‌ ಠಾಣೆ (ವಿಜಯಪುರ) 

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರತಿವರ್ಷ ನೀಡಲಾಗುವ  ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 1037 ಸೇವಾ ಪದಕವನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿಗೆ ಘೋಷಣೆ ಮಾಡಲಾಗಿದೆ. ಇದರಲ್ಲಿ 208 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Independence day 2024, 19 police officers including CCRB ACP Ravish Nayak from Mangalore to receive service medal. Out of 19 officers selected from karnataka Ravish is selected from Dakshina Kannada district.